ಅಮೆರಿಕ ಹಾಲಿ-ಮಾಜಿ ಅಧ್ಯಕ್ಷರ ಬಿರುಸಿನ ಜಗಳ್ಬಂದಿ

ಅಧ್ಯಕ್ಷರಿಗೆ ಯಾರೇನು ಮಾಡಿದರೂ ಅನುಮಾನ: ಬರಾಕ್‌ ; ಇಬ್ಬಗೆ ನೀತಿಯ ಒಬಾಮ: ಟ್ರಂಪ್‌

Team Udayavani, Aug 21, 2020, 6:14 AM IST

ಅಮೆರಿಕ ಹಾಲಿ-ಮಾಜಿ ಅಧ್ಯಕ್ಷರ ಬಿರುಸಿನ ಜಗಳ್ಬಂದಿ

ಡೆಮಾಕ್ರಟಿಕ್‌ ಪಕ್ಷ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಪತಿ ಡೌಗ್‌ ಎಮ್ಹಾಫ್ ಜತೆಗೆ ಸಂತೋಷದ ಕ್ಷಣ.

ವಾಷಿಂಗ್ಟನ್‌: ಅಮೆರಿಕದ ಚುನಾವಣ ಕಣ ಬುಧವಾರದಂದು ಹಾಲಿ ಮತ್ತು ಮಾಜಿ ಅಮೆರಿಕಾಧ್ಯಕ್ಷರ ಜಟಾಪಟಿಗೆ ಕಾರಣವಾಗಿದೆ. ಡೆಮಾಕ್ರಟಿಕ್‌ ಪಕ್ಷ ಆಯೋಜಿಸಿರುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ, ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಿರುದ್ಧ ಕಿಡಿಕಾರಿದ್ದಾರೆ. ಒಡನೆಯೇ ಟ್ವಿಟರ್‌ನಲ್ಲಿ ಪ್ರತಿಟೀಕೆ ಮಾಡಿರುವ ಟ್ರಂಪ್‌, ಬರಾಕ್‌ ಅವರ ವಿರುದ್ಧ ಪ್ರತ್ಯಾರೋಪ ಮಾಡಿದ್ದಾರೆ. ಇದೇ ಸಮ್ಮೇಳನದಲ್ಲಿ ಡೆಮಾಕ್ರಟಿಕ್‌ ಪಕ್ಷದ ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿಯನ್ನಾಗಿ ಕಮಲಾ ಹ್ಯಾರಿಸ್‌ ಹೆಸರನ್ನು ಅಧಿಕೃತವಾಗಿ ಘೋಷಿಸಲಾಯಿತು.

ಅಧ್ಯಕ್ಷರಿಗೆ ಅನುಮಾನ: ಸಮ್ಮೇಳನದಲ್ಲಿ ಮಾತ ನಾಡಿದ ಒಬಾಮ, ಅಮೆರಿಕದಲ್ಲಿ ಯಾರೇನೇ ಮಾಡಿದರೂ ಅದು ಹಾಲಿ ಅಧ್ಯಕ್ಷರಿಗೆ ಅನು ಮಾನಾ ಸ್ಪದವಾಗಿಯೇ ಕಾಣುತ್ತದೆ. ಸಿಕ್ಖರು, ಮುಸ್ಲಿಮರು ಪ್ರಾರ್ಥನೆ ಮಾಡುವ ರೀತಿಯನ್ನೂ ಅನುಮಾನಿಸಲಾಗಿದೆ. ಐರ್ಲೆಂಡಿಗರು, ಇಟಾಲಿಯನ್ನರು ಹಾಗೂ ಏಷ್ಯನ್ನರನ್ನು ಅವರವರ ದೇಶಗಳಿಗೆ ಹಿಂದಿರುಗುವಂತೆ ಸೂಚಿಸಲಾಗಿದೆ. ಕಪ್ಪು ಜನಾಂಗ ದವರನ್ನು ಸರಪಳಿಗಳಿಂದ ಬಂಧಿಸಿ ಎಳೆದೊಯ್ದು ಅವರನ್ನು ನೇಣು ಹಾಕಲಾಗಿದೆ. ಕಪ್ಪು ವರ್ಣೀ ಯರು ಕೂರುವ ಸ್ಥಳಗಳಲ್ಲಿ ಉಗುಳಿ ಅವರು ಅಲ್ಲಿ ಕೂರದಂತೆ ಮಾಡಿದ ಅಸಹ್ಯ ಘಟನೆಗಳೂ ನಡೆದಿವೆ. ಜನರಲ್ಲಿ ಹೀಗೆ ದ್ವೇಷದ ಬೆಂಕಿಯನ್ನು ಹಚ್ಚುತ್ತಲೇ ಅವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಹಾಗೂ ಗೆಲ್ಲುತ್ತಿದ್ದಾರೆ ಎಂದರು.

ಟ್ರಂಪ್‌ ಕಿಡಿ: ಒಬಾಮಾ ಅವರ ಹೇಳಿಕೆ ಹೊರಬಿದ್ದ ಕೂಡಲೇ ಕೆಂಡಾಮಂಡಲವಾಗಿರುವ ಟ್ರಂಪ್‌, ಟ್ವಿಟರ್‌ನಲ್ಲಿ ಒಬಾಮಾ ಅವರ ವಿರುದ್ಧ ಪ್ರಹಾರ ಮಾಡಿದ್ದಾರೆ. ಡೆಮಾಕ್ರಟಿಕ್‌ ಪಕ್ಷದ ನಾಯಕರಾದ ಬರಾಕ್‌ ಹಾಗೂ ಹಿಲರಿ ಕ್ಲಿಂಟನ್‌ ಅವರನ್ನು ಇಬ್ಬಗೆಯ ನೀತಿಯುಳ್ಳವರು ಎಂದಿ ರುವ ಅವರು, ನಾನು ಡೆಮಾಕ್ರಟಿಕ್‌ ಪಕ್ಷದ ಚುನಾ ವಣ ತಯಾರಿ, ಅಭಿಯಾನದ ಮೇಲೆ ಗೂಢ ಚರ್ಯೆ ನಡೆಸುತ್ತಿರು ವುದಾಗಿ ಆರೋಪಿಸಿರುವ ಒಬಾಮ ಅವರೇ, 2016ರ ಚುನಾವಣೆಯಲ್ಲಿ ನನ್ನ ಚುನಾವಣ ತಂತ್ರಗಾರಿಕೆಗಳ ಬಗ್ಗೆ ಗೂಢ ಚರ್ಯೆ ನಡೆಸಿ, ಸಿಕ್ಕಿಹಾಕಿಕೊಂಡಿ ದ್ದರು ಎಂದು ಪ್ರತ್ಯಾರೋಪ ಮಾಡಿದ್ದಾರೆ. ಡೆಮಾಕ್ರಟಿಕ್‌ ಪಕ್ಷದಿಂದ ಅಮೆರಿಕದ ಉಪಾಧ್ಯಕ್ಷ ಹುದ್ದೆಯ ಸ್ಪರ್ಧಿಸಲು ಟಿಕೆಟ್‌ ಗಳಿಸಿರುವ ಕಮಲಾ ಹ್ಯಾರಿಸ್‌ ಅವರನ್ನೂ ಟೀಕಿಸಿರುವ ಟ್ರಂಪ್‌, “”ಕಮಲಾ ಅವರು ಹಿಂದೆ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್‌ ಆಗಿದ್ದಾಗ ಜೋ ಬಿಡೆನ್‌ರನ್ನು ಜನಾಂಗೀಯ ದ್ವೇಷಿ ಎಂದು ಟೀಕಿಸಿದ್ದರು. ಸ್ಪರ್ಧಿಸಲು ಬಿಡೆನ್‌ಯೋಗ್ಯವಲ್ಲ ಎಂದು ಜರಿದಿದ್ದರು. ಈಗ ಮರೆತು ಹೋಯಿತೇ” ಎಂದು ಹೇಳಿದ್ದಾರೆ.

ಎಎಪಿಐ ಸಮುದಾಯ ಮಹತ್ವವಾದದ್ದು: ಕಮಲಾ
ಚುನಾವಣೆಯಲ್ಲಿ ಏಷ್ಯ ನ್ನರು, ಅಮೆರಿಕನ್ನರು ಹಾಗೂ ಪೆಸಿಫಿಕ್‌ ಐಲ್ಯಾಂಡ್‌ನ‌ವರು (ಎಎಪಿಐ ಸಮುದಾಯ) ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ತಿಳಿಸಿದ್ದಾರೆ. ತಮ್ಮ ಪಕ್ಷದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತ ನಾಡಿದ ಅವರು, ಎಎಪಿಐ ಸಮುದಾ ಯವು ವೇಗವಾಗಿ ಬೆಳೆಯುತ್ತಿ ರುವ ಸಮುದಾಯವಾಗಿದೆ. ಇವರ ಜನಸಂಖ್ಯೆ 1.1 ಕೋಟಿಯಷ್ಟಿದೆ. ಈ ಬಾರಿಯ ಚುನಾವಣೆಯಲ್ಲಿ ಈ ಸಮುದಾಯ ಯಾರ ಕೈ ಹಿಡಿಯಲಿದ್ದಾರೆಯೋ ಅವರಿಗೆ ಸಣ್ಣ ಅಂತರದ ಜಯ ಸಿಗುತ್ತದೆ ಎಂದಿದ್ದಾರೆ.

ಟಾಪ್ ನ್ಯೂಸ್

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಯಿಂಗ್‌ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ

America: ಬೋಯಿಂಗ್‌ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Viral: ಜನಪ್ರಿಯ ಟಿಕ್‌ ಟಾಕ್‌ ತಾರೆಯ ಖಾಸಗಿ ವಿಡಿಯೋ ಲೀಕ್..‌ ಭಾರೀ ವೈರಲ್   

Viral: ಜನಪ್ರಿಯ ಟಿಕ್‌ ಟಾಕ್‌ ತಾರೆಯ ಖಾಸಗಿ ವಿಡಿಯೋ ಲೀಕ್..‌ ಭಾರೀ ವೈರಲ್  

ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್‌ ನಿಧನ

ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್‌ ನಿಧನ

1-aaa

US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.