ಪಾಕ್: Red-light ಏರಿಯಕ್ಕೆ ಹೋಗಬಿಡದ್ದಕ್ಕೆ ಚೀನೀ ಕಾರ್ಮಿಕರ ಅಕ್ರೋಶ
Team Udayavani, Apr 6, 2018, 11:54 AM IST
ಇಸ್ಲಾಮಾಬಾದ್ : ಪಾಕಿಸ್ಥಾನದಲ್ಲಿ ಚೀನದ ಕೃಪೆಯಲ್ಲಿ ನಡೆಯುತ್ತಿರುವ ಹಲವು ಅಭಿವೃದ್ದಿ ಕಾಮಗಾರಿಗಳಲ್ಲಿ ದುಡಿಯುತ್ತಿರುವ ಚೀನೀ ಇಂಜಿನಿಯರ್‌ಗಳು ಮತ್ತು ಕಾರ್ಮಿಕರು ತಮ್ಮನ್ನು ಕಾಮಾಟಿಪುರದಂತಹ ರೆಡ್ ಲೈಟ್ ಏರಿಯಾಗಳಿಗೆ ಹೋಗದಂತೆ ತಡೆದ ಪಾಕ್ ಭದ್ರತಾ ಸಿಬಂದಿಗಳ ವಿರುದ್ಧ ಭೀಕರ ಮಾರಾಮಾರಿ ನಡೆಸಿದ ಘಟನೆ ವರದಿಯಾಗಿದೆ.
ಪಾಕಿಸ್ಥಾನದಲ್ಲಿ ಅಭಿವೃದ್ಧಿ ಕಾಮಗಾರಿ ನಿರತ ಚೀನೀ ಇಂಜಿನಿಯರ್‌ಗಳು ಮತ್ತು ಕಾರ್ಮಿಕರಿಗೆ ಜೀವ ಬೆದರಿಕೆ ಇರುವುದರಿಂದ ಅವರ ರಕ್ಷಣೆ ಮತ್ತು ಸುರಕ್ಷೆಗಾಗಿ ಪಾಕ್ ಸರಾರ ವಿಶೇಷ ಭದ್ರತಾ ಸಿಬಂದಿಗಳನ್ನು ನಿಯೋಜಿಸಿದೆ. ಇವರ ಕಣ್ಗಾವಲು ಇಲ್ಲದೆ ಚೀನಿ ಕಾರ್ಮಿಕರು ಎಲ್ಲಿಗೂ ಹೋಗುವಂತಿಲ್ಲ.
ಆದರೆ ತಮ್ಮ ಕಾಮಾಸಕ್ತಿಯನ್ನು ಈಡೇರಿಸಿಕೊಳ್ಳಲು ರೆಡ್‌ಲೈಟ್ ಜಿಲ್ಲೆಗಳಿಗೆ ಭದ್ರತೆ ಇಲ್ಲದೆ ಮುಕ್ತವಾಗಿ ಹೋಗಲು ಬಯಸಿದ ಚೀನೀ ಕಾರ್ಮಿಕರನ್ನು ಭದ್ರತಾ ಸಿಬಂದಿಗಳು ತಡೆದಾಗ ಅಕ್ರೋಶಗೊಂಡ ಅವರು ಭದ್ರತಾ ಸಿಬಂದಿಗಳೊಂದಿಗೆ ಮಾರಾಮಾರಿ, ಕಾಳಗ ನಡೆಸಿದರು.
ಕೋಪೋದ್ರಿಕ್ತ ಚೀನೀ ಕಾರ್ಮಿಕರು ಪಾಕ್ ಭದ್ರತಾ ವಾಹನವನ್ನು ರಸ್ತೆಯಲ್ಲೇ ತಡೆದು ನಿಲ್ಲಿಸಿ ಅದನ್ನು ಏರಿ ಕುಳಿತರಲ್ಲದೆ ಭದ್ರತಾ ಸಿಬಂದಿ ಮೇಲೆ ಕುರ್ಚಿ ಎಸೆದು ಸಿಬಂದಿಗಳನ್ನು ಗಾಯಗೊಳಿಸಿದರು.
ಕಳೆದ ಮಂಗಳವಾರ ಸ್ಫೋಟಗೊಂಡ ಈ ಮಾರಾಮಾರಿಯನ್ನು ಪಾಕ್ ಭದ್ರತಾ ಸಿಬಂದಿಗಳು ಹೇಗೋ ನಿಯಂತ್ರಣಕ್ಕೆ ತಂದರು. ಆದರೆ ಒಂದು ದಿನದ ತರುವಾಯ ಮತ್ತೆ ಜಗಳ ತಲೆದೋರಿ ರಸ್ತೆ ಕಾಮಗಾರಿ ನಡೆಯುತ್ತಿರುವ ಬಹಾಲವಲಪುರ – ಫೈಸಲಾಬಾದ ಹೆದ್ದಾರಿಯಲ್ಲಿ ಕ್ಷೋಭೆ ಏರ್ಪಟ್ಟಿತು. ಚೀನೀ ಕಾರ್ಮಿಕರು ರಸ್ತೆ ನಿಮಾಣ ಕಾಮಗಾರಿಯ ದೊಡ್ಡ ದೊಡ್ಡ ವಾಹನಗಳನ್ನು ರಸ್ತೆಯ ನಡುವೆಯೇ ಇರಿಸಿ ತಡೆ ನಿರ್ಮಿಸಿದರು. ಪಾಕ್ ಭದ್ರತಾ ಸಿಬಂದಿಗಳ ವಸತಿ ಸಮೂಹದ ವಿದ್ಯುತ್ ಸಂಪರ್ಕವನ್ನು ಕಡಿದು ಹಾಕಿದರು.
ಇದಾದ ಬಳಿಕ ಚೀನೀ ಇಂಜಿನಿಯರ್‌ಗಳು ಪಾಕ್ ಸರಕಾರಕ್ಕೆ ಪತ್ರ ಬರೆದು “ನಿಮ್ಮ ಭದ್ರತಾ ಸಿಬಂದಿಗಳು ನಮ್ಮ ಮೇಲೆ ಹಲ್ಲೆ ಮಾಡಿವೆ’ ಎಂದು ದೂರಿದರು.
ಇಷ್ಟಾದರೂ ಚೀನ ಕೃಪೆಯಲ್ಲಿರುವ ಪಾಕ್ ಸರಕಾರ ಈ ಘಟನೆಯ ಬಗ್ಗೆ ಈ ವರೆಗೂ ತುಟಿ ಬಿಚ್ಚಿಲ್ಲ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Cyber Fraud: 1 ತಿಂಗಳು ವೃದ್ದೆ ಡಿಜಿಟಲ್ ಅರೆಸ್ಟ್: 3.8 ಕೋಟಿ ಲೂಟಿ ಹೊಡೆದ ಕಳ್ಳರು!
IPL Auction: ಆರ್‌ಸಿಬಿ ಫ್ರಾಂಚೈಸಿಯಿಂದ ಬಹಳ ಯೋಚಿಸಿ ಸಂತುಲಿತ ತಂಡ
Daily Horoscope; ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ…
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.