Beauty; ಈ 60ರ ಚೆಲುವೆ ಬ್ಯೂನಸ್ ಐರಿಸ್ ಮಿಸ್ ಯುನಿವರ್ಸ್!
ಅರ್ಜೆಂಟೀನಾ ಪ್ರತಿನಿಧಿಸಲಿದ್ದಾರಾ ಅಲೆಗ್ಸಾಂಡ್ರಾ ?
Team Udayavani, Apr 28, 2024, 6:55 AM IST
ಬ್ಯೂನಸ್ಐರಿಸ್: ಯೌವನ ಮಾತ್ರವೇ ಸೌಂದರ್ಯವನ್ನು ಬಿಂಬಿಸಬಲ್ಲದು ಎನ್ನುವ ವಾದಗಳಿಗೆ ಅರ್ಜೆಂಟೀನಾದ ಮಹಿಳೆ ಅಲೆಗ್ಸಾಂಡ್ರಾ ಮಾರಿಸಾ ರೋಡ್ರಿಗಸ್ ಸಡ್ಡು ಹೊಡೆದಿದ್ದು, ತಮ್ಮ 60ನೇ ವಯಸ್ಸಿನಲ್ಲಿ “ಮಿಸ್ ಯೂನಿವರ್ಸ್ ಬ್ಯೂನಸ್ ಐರಿಸ್’ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಮಿಸ್ ಯೂನಿವರ್ಸ್ ಸ್ಪರ್ಧೆಯ ವಯಸ್ಸಿನ ಸಂಕೋಲೆಗಳು ಮುರಿದು “ಏಜ್ ಈಸ್ ಜಸ್ಟ್ ಎ ನಂಬರ್’ ಎಂಬುದನ್ನು ನಿರೂಪಿಸಿದ್ದಾರೆ.
ವೃತ್ತಿಯಲ್ಲಿ ವಕೀಲೆ ಮತ್ತು ಪತ್ರಕರ್ತೆ ಆಗಿರುವ ಮಾರಿಸಾ ಅಪಾರ ಶ್ರಮ, ಜೀವನೋತ್ಸಾಹದೊಂದಿಗೆ ತಮ್ಮ ಸೌಂದರ್ಯ ಕಾಯ್ದಿಟ್ಟುಕೊಂಡಿದ್ದಾರೆ. ಅಲ್ಲದೇ, “ಮಿಸ್ ಯೂನಿವರ್ಸ್ ಬ್ಯೂನಸ್ ಐರಿಸ್’ ಎಂಬ ಖ್ಯಾತಿಗೆ ಪಾತ್ರ ರಾಗಿದ್ದಾರೆ. ಮೇನಲ್ಲಿ ಅರ್ಜೆಂಟೀನಾ ವನ್ನು ವಿಶ್ವ ಮಟ್ಟದಲ್ಲಿ ಪ್ರತಿನಿಧಿಸುವ ಸುಂದರಿಯರ ರಾಷ್ಟ್ರ ಮಟ್ಟದ ಕಡೆಯ ಹಂತದ ಆಯ್ಕೆ ಇದೆ. ಅದರಲ್ಲಿ ಮಾರಿಸಾ ವಿಜೇತರಾದರೆ ಸೆ.28ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಅರ್ಜೆಂಟೀನಾವನ್ನು ಪ್ರತಿನಿಧಿಸಲಿದ್ದಾರೆ. 18 ರಿಂದ 28ರ ವಯಸ್ಸಿನವರಷ್ಟೇ ಭಾಗವಹಿಸಬೇಕು ಎಂಬ ನಿಯಮವನ್ನು ಕಳೆದ ವರ್ಷ ತೆಗೆದುಹಾಕಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.