ದ್ವೀಪದಲ್ಲಿ ಚೀನಾ ಬಾಂಬರ್!
Team Udayavani, May 20, 2018, 6:00 AM IST
ಬೀಜಿಂಗ್: ದಕ್ಷಿಣ ಚೀನಾ ಸಮುದ್ರದ ವಿವಾದಿತ ದ್ವೀಪದಲ್ಲಿ ಚೀನಾ ತನ್ನ ಬಾಂಬರ್‌ಗಳನ್ನು ನಿಯೋಜಿಸಿದೆ. ಇದು ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳಲು ಕಾರಣವಾಗಲಿದೆ.
ಎಚ್-6ಕೆ ಬಾಂಬರ್ ಸೇರಿದಂತೆ ಯುದ್ಧ ವಿಮಾನಗಳು ಈ ದ್ವೀಪದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ತರಬೇತು ಮುಗಿಸಿವೆ ಎಂದು ಚೀನಾ ವಾಯುಪಡೆ ಹೇಳಿಕೊಂಡಿದೆ. ಈ ತರಬೇತಿಯಿಂದಾಗಿ ಚೀನಾ ತನ್ನ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ದಿನಪತ್ರಿಕೆ ವರದಿ ಮಾಡಿದೆ. ಅಲ್ಲದೆ ಇನ್ನೊಂದು ದಿನಪತ್ರಿಕೆಯ ಟ್ವಿಟರ್ ಖಾತೆಯಲ್ಲೂ ಈ ಸಂಬಂಧ ವಿಡಿಯೋ ಒಂದನ್ನು ಪ್ರಕಟಿಸಲಾಗಿತ್ತು. ಇದರಲ್ಲಿ ಟೇಕ್ ಆಫ್, ಲ್ಯಾಂಡಿಂಗ್ ಮತ್ತು ವಿಮಾನ ಹಾರಾಟದ ದೃಶ್ಯಗಳಿದ್ದವು.
ಇದು ಸಹಜವಾಗಿಯೇ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದೆ. ಈ ಘಟನೆಯು ಈ ಪ್ರದೇಶ ಉದ್ವಿಗ್ನಗೊಳ್ಳಲು ಕಾರಣ ವಾಗುತ್ತದೆ. ಅಷ್ಟೇ ಅಲ್ಲ, ಈ ಪ್ರದೇಶ ಅಸ್ಥಿರಗೊಳ್ಳುತ್ತದೆ ಎಂದಿದೆ. ಈ ಹಿಂದೆ ವಿವಾದಿತ ಪ್ರದೇಶಗಳಲ್ಲಿ ಸೇನೆ ನಿಯೋಜನೆ ಮಾಡುವುದರ ವಿರುದ್ಧ ಅಮೆರಿಕ ಚೀನಾಕ್ಕೆ ಎಚ್ಚರಿಕೆ ನೀಡಿತ್ತು. ನಾನಾ ದ್ವೀಪದಲ್ಲಿ ಚೀನಾ ಕ್ಷಿಪಣಿ ಗಳನ್ನು ನಿಯೋಜಿಸಿದಾಗಲೂ ಇದೇ ರೀತಿ ಪರಿಸ್ಥಿತಿ ಉಂಟಾಗಿತ್ತು. ಮೂಲಗಳ ಪ್ರಕಾರ ಈ ಬಾರಿ ಚೀನಾದ ಸಾನ್ಶಾ ನಗರದ ಆಡಳಿತಕ್ಕೆ ಒಳಪಟ್ಟಿರುವ ವೂಡಿ ದ್ವೀಪದಲ್ಲಿ ಈ ವಿಮಾನಗಳನ್ನು ಲ್ಯಾಂಡ್ ಮಾಡಲಾಗಿದೆ. ಈ ಭಾಗವನ್ನು ಚೀನಾ ತನ್ನದು ಎಂದು ಹೇಳಿ ಕೊಳ್ಳುತ್ತಿದ್ದರೆ, ವಿಯೆಟ್ನಾಮ್, ಫಿಲಿಪ್ಪೀನ್ಸ್, ಮಲೇಷ್ಯಾ, ಬ್ರುನೈ ಮತ್ತು ತೈವಾನ್ ಕೂಡ ತನ್ನದು ಎಂದು ಹೇಳಿಕೊಳ್ಳುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.