![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 22, 2022, 6:55 AM IST
ಬ್ರುಸೆಲ್ಸ್/ನವದೆಹಲಿ: ಜಗತ್ತಿನ ಒಂದೊಂದೇ ದೇಶಗಳಲ್ಲಿ ಕಂಡುಬಂದಿರುವ ಹೊಸ ಕಾಯಿಲೆ “ಮಂಕಿಪಾಕ್ಸ್’ ತಡೆಯುವ ನಿಟ್ಟಿನಲ್ಲಿ ಬ್ರೆಜಿಲ್ 21 ದಿನಗಳ ಕಡ್ಡಾಯ ಕ್ವಾರಂಟೈನ್ ಜಾರಿಗೊಳಿಸಿದೆ. ಇಂಥ ಕ್ರಮ ಕೈಗೊಂಡ ವಿಶ್ವದ ಮೊದಲ ದೇಶ ಬ್ರೆಜಿಲ್ ಆಗಿದೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಮುಂದಿನ 2-3 ವಾರಗಳಲ್ಲಿ ಮಂಕಿಪಾಕ್ಸ್ ಪ್ರಮಾಣ ಹೆಚ್ಚಲಿದೆ ಎಂಬ ಆತಂಕದ ನಡುವೆಯೇ ಈ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಬ್ರೆಜಿಲ್ ಸರ್ಕಾರದ ನಿರ್ದೇಶನ ಪ್ರಕಾರ, ಸೋಂಕು ದೃಢಪಟ್ಟವರು ಸ್ವಯಂಪ್ರೇರಿತವಾಗಿ ಹಾಗೂ ಕಡ್ಡಾಯವಾಗಿ 3 ವಾರಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕು. ಸದ್ಯ ಆ ದೇಶದಲ್ಲಿ ಹೊಸ ಕಾಯಿಲೆಯ ಮೂರು ಕೇಸುಗಳು ದೃಢಪಟ್ಟಿವೆ.
ಸಿದ್ಧತೆಗೆ ಸೂಚನೆ:
ಭಾರತದಲ್ಲಿಯೂ ಮಂಕಿಪಾಕ್ಸ್ ಬಗ್ಗೆ ಕಟ್ಟೆಚ್ಚರ ವಹಿಸಲು ನಿರ್ಧರಿಸಲಾಗಿದೆ. ಅಂತಾರಾಷ್ಟ್ರೀಯ ಗಡಿ ಭೂ, ಜಲ ಗಡಿ ಪ್ರದೇಶ, ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಮೇಲೆ ನಿಗಾ ವಹಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ವಿಶೇಷವಾಗಿ ಆಫ್ರಿಕಾ ಖಂಡದ ದೇಶಗಳಿಂದ ಆಗಮಿಸುವವರ ಮಾದರಿಯನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಲು ನಿರ್ದೇಶನ ನೀಡಲಾಗಿದೆ.
92 ಕೇಸು; 12 ರಾಷ್ಟ್ರ:
ವಿಶ್ವ ಆರೋಗ್ಯ ಸಂಸ್ಥೆ ಸದ್ಯ ನೀಡಿದ ಮಾಹಿತಿ ಪ್ರಕಾರ ಜಗತ್ತಿನ 12 ದೇಶಗಳಲ್ಲಿ 92 ಮಂಕಿಪಾಕ್ಸ್ ಕೇಸುಗಳು ದೃಢಪಟ್ಟಿವೆ. 28 ಪ್ರಕರಣಗಳ ಬಗ್ಗೆ ಇನ್ನೂ ಅಧ್ಯಯನ ನಡೆಸಲಾಗುತ್ತಿದೆ ಎಂದು ಡಬ್ಲೂéಎಚ್‌ಒ ಸ್ಪಷ್ಟಪಡಿಸಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.