Election ದಿನಾಂಕದಲ್ಲೂ ಬೆಟ್ಟಿಂಗ್:ರಿಷಿ ಸುನಕ್‌ಗೆ ಮುಜುಗರ
Team Udayavani, Jun 24, 2024, 6:36 AM IST
ಲಂಡನ್: ಬ್ರಿಟನ್ ಸಂಸತ್‌ಗೆ ಅವಧಿ ಪೂರ್ವ ಚುನಾವಣೆ ಘೋಷಿಸಿರುವ ಪ್ರಧಾನಿ ರಿಷಿ ಸುನಕ್ ನೇತೃತ್ವದ ಸರಕಾರಕ್ಕೆ ಮತ್ತೊಂದು ಮುಜುಗರ ಉಂಟಾಗಿದೆ. ಸರಕಾರದ ಹಿರಿಯ ಅಧಿಕಾರಿಯೊಬ್ಬರು ಚುನಾವಣ ದಿನಾಂಕಕ್ಕೆ ಸಂಬಂಧಿಸಿದಂತೆಯೇ ಬೆಟ್ಟಿಂಗ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಟ್ಟಿಂಗ್‌ನಲ್ಲಿ ಪಾಲ್ಗೊಂಡಿದ್ದ ಆ ಅಧಿಕಾಯನ್ನು ಬ್ರಿಟನ್‌ನ ಬೆಟ್ಟಿಂಗ್ ನಿಯಂತ್ರಣ ಆಯೋಗ ತನಿಖೆ ನಡೆಸಿದೆ. ಈ ಬೆಳವಣಿಗೆಯಿಂದ ರಿಷಿ ಸುನಕ್ ಅವರು ಕ್ರುದ್ಧಗೊಂಡಿದ್ದಾರೆ.
ಜು.4ರಂದೇ ಸಂಸತ್ ಚುನಾವಣೆ ನಡೆಸಲಾಗುತ್ತದೆ ಎಂಬ ಬಗ್ಗೆ ಆ ಅಧಿಕಾರಿ ಬೆಟ್ ಕಟ್ಟಿದ್ದರು ಎಂದು ಆರೋಪಿಸಲಾಗಿದೆ. ನಿಕ್ ಮೇಸನ್ ಎಂಬ ಅಧಿಕಾರಿ ಚುನಾವಣ ದಿನಾಂಕ ಘೋಷಣೆಯ ಬೆಟ್ಟಿಂಗ್ ಹಿಂದೆ ಇದ್ದಾರೆ ಎಂಬ ಅಂಶವು ಈ ವರದಿಯಲ್ಲಿತ್ತು. ಈ ವಿವಾದವು ಈಗ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ. ವಿಪಕ್ಷ ಲೇಬರ್ ಪಾರ್ಟಿಯನ್ನು ಸೋಲಿಸಿ ಅಧಿಕಾರ ದಲ್ಲಿ ಮುಂದುವರಿಯಬೇಕು ಎಂಬ ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷಕ್ಕೆ ಈ ಪ್ರಕರಣದಿಂದ ಸವಾಲು ಎದುರಾಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.