ಬೀದರ್ “ಬಿದ್ರಿ’ ಮೇಲೆ ಬ್ರಿಟನ್ ವ್ಯಾಮೋಹ
Team Udayavani, Feb 10, 2019, 12:30 AM IST
ಲಂಡನ್: ಈ ಸುದ್ದಿ ಐತಿಹಾಸಿಕ ಪ್ರಾಮುಖ್ಯವುಳ್ಳ ಪುರಾತತ್ವ ಸ್ಮಾರಕ-ಸ್ಮರಣಿಕೆಗಳಿಗೆ ವಿದೇಶೀಯರು ಎಷ್ಟು ಮಹತ್ವ ನೀಡುತ್ತಾರೆ ಎಂಬುದಕ್ಕೆ ಸಾಕ್ಷಿ. ನಮಗೇಕೆ ಪ್ರಾಮುಖ್ಯವಾದುದು ಎಂದರೆ ಈ ವಸ್ತು ತಯಾರಾದದ್ದು ನಮ್ಮ ರಾಜ್ಯದಲ್ಲಿಯೇ. ಇದು ಸದ್ಯ ಬ್ರಿಟನ್ ವಶದಲ್ಲಿರುವ ಒಂದು ಲೋಹದ ಹರಿವಾಣದ ಸುದ್ದಿ. ಇದರ ಮಾರಾಟ – ರವಾನೆಗಳಿಗೆ ಬ್ರಿಟಿಷ್ ಸರಕಾರ ನಿರ್ಬಂಧ ಹೇರಿದೆ. ಬಹಮನಿ ಸುಲ್ತಾನರ ಆಳ್ವಿಕೆಯ ಕಾಲ- 17ನೇ ಶತಮಾನದಲ್ಲಿ ಬೀದರಿನಲ್ಲಿ ತಯಾರಾದ ಬಿದ್ರಿ ಕಲಾಕೌಶಲವಿದು. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಇದನ್ನು ಖರೀದಿಸಬಹುದಾದರೂ ಅದನ್ನು ಬ್ರಿಟನ್‌ನಿಂದ ಹೊರಕ್ಕೆ ಸಾಗಿಸಲು ಅನುಮತಿ ನೀಡದಿರಲು ಅಲ್ಲಿನ ಸರಕಾರ ನಿರ್ಧರಿಸಿದೆ. ಖರೀದಿಸುವಾತ ವಿದೇಶಕ್ಕೆ ಸಾಗಿಸಲು ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದರೂ ಸಿಗದು.
ಹರಿವಾಣದ ಮೌಲ್ಯ ಅಳೆಯಲು ನಿಯೋಜಿಸಲಾಗಿದ್ದ ಸರ್ ಹೇಡನ್ ಫಿಲಿಪ್ಸ್ ನೇತೃತ್ವದ ಸಮಿತಿ ತನ್ನ ವರದಿಯಲ್ಲಿ ಆಕಾರ, ವಿನ್ಯಾಸ ಮತ್ತು ಕಲಾವಂತಿಕೆಗಳಲ್ಲಿ ಇದು ವಿಶ್ವದ ಎಲ್ಲ ಬಿದ್ರಿ ಕಲಾಕೃತಿಗಳಿಗಿಂತ ಅತ್ಯುತ್ಕೃಷ್ಟ ಎಂದಿತ್ತು. ಮಧ್ಯಯುಗದಲ್ಲಿ ಏಷ್ಯಾದ ದಕ್ಷಿಣ ಭಾಗದಲ್ಲಿ ಸತುವಿನ ಬಳಕೆಯ ಬಗ್ಗೆ ಅಂದಿನ ಜನರಿಗಿದ್ದ ಜ್ಞಾನದ ಬಗ್ಗೆಯೂ ಹಲವಾರು ಮಾಹಿತಿ ಇದರ ಅಧ್ಯಯನದಿಂದ ಸಿಗುತ್ತವೆ ಎಂದು ಇತಿಹಾಸಕಾರರು ಹಾಗೂ ತಜ್ಞರು ಸರಕಾರಕ್ಕೆ ತಿಳಿಸಿದ್ದರು. ಈ ಎಲ್ಲ ಕಾರಣಗಳಿಂದ ಇದರ ರಫ್ತಿಗೆ ಕಡಿವಾಣ ಹಾಕಲಾಗಿದೆ ಎಂದು ಬ್ರಿಟನ್‌ನ ಕಲೆ ಮತ್ತು ಸಂಸ್ಕೃತಿ ಸಚಿವ ಮೈಕಲ್ ಎಲ್ಲೀಸ್ ತಿಳಿಸಿದ್ದಾರೆ.
ಈ ತಟ್ಟೆ ಮೇಲೇಕೆ ವ್ಯಾಮೋಹ?
ಹಗುರ ಲೋಹದ ಹಾಳೆ, ಎಳೆ ಬಳಸಿ ಹೂಜಿ, ಹುಕ್ಕಾ, ತಟ್ಟೆ ಇತ್ಯಾದಿಗಳ ಮೇಲೆ ಚಿತ್ತಾಕರ್ಷಕ ಕಲಾತ್ಮಕ ಚಿತ್ತಾರಗಳನ್ನು ರೂಪಿಸುವ ವಿಶಿಷ್ಟ ಕಲಾಕೌಶಲ ಬಿದ್ರಿ. ಈ ‘ಬಿದ್ರಿ’ ಹರಿವಾಣವು 1.1 ಅಡಿ ಉದ್ದ, 0.9 ಅಡಿ ಅಗಲವಿದೆ. ಕಳೆದ ವರ್ಷವೇ ಇದರ ಬೆಲೆ ವಿಶ್ವಮಟ್ಟದಲ್ಲಿ 69 ಲಕ್ಷ ರೂ.ಗಳೆಂದು ಅಂದಾಜಿಸಲಾಗಿತ್ತು. 1974ರಲ್ಲಿ ಟೋಬಿ ಜ್ಯಾಕ್ ಎಂಬ ಪ್ರಾಚೀನ ವಸ್ತುಗಳ ವ್ಯಾಪಾರಿಯಿಂದ ಲಂಡನ್ ಮೂಲದ ಬಶೀರ್ ಮೊಹಮ್ಮದ್ ಎಂಬವರು ಈ ಹರಿವಾಣವನ್ನು ಕೊಂಡಿದ್ದರು. ಅದು 1974ರಿಂದ 2017ರ ವರೆಗೆ ಅವರ ಬಳಿಯೇ ಇತ್ತು. ಈಗ ಅದು ಬ್ರಿಟಿಷ್ ಸರಕಾರದ ಸುಪರ್ದಿಯಲ್ಲಿದೆ.
69 ಲಕ್ಷ ರೂ. : ಈ ಅದ್ಭುತ ಹರಿವಾಣಕ್ಕೆ ದರ ನಿಗದ
ಬಹಮನಿ ಸುಲ್ತಾನರ ಕಾಲದಲ್ಲಿ ಅರಳಿದ ಬಿದ್ರಿ ಕಲಾ ಕೌಶಲ ಹರಿವಾಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.