ಇಮ್ರಾನ್ ಖಾನ್ ಸೀಟಿಗೆ ಬಿಲಾವಲ್ ಭುಟ್ಟೋ?: ಪಾಕ್ ಸೇನೆ ಪ್ಲಾನ್
Team Udayavani, Nov 3, 2019, 5:36 PM IST
ಲಂಡನ್: ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಎದುರು ಹಾಕಿಕೊಳ್ಳಲು ವಿಫಲರಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿ ಆ ಸ್ಥಾನಕ್ಕೆ ಪಾಕಿಸ್ಥಾನದ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ ಮುಖ್ಯಸ್ಥ ಬಿಲಾವಲ್ ಭುಟ್ಟೋ ಅವರನ್ನು ತಂದು ಕೂರಿಸಲು ಪಾಕಿಸ್ಥಾನದ ಸೇನೆ ಯೋಜನೆ ರೂಪಿಸುತ್ತಿದೆ ಎಂದು ಬ್ರಿಟನ್‌ನ ದಿ ಸಂಡೇ ಗಾರ್ಡಿಯನ್ ವರದಿ ಮಾಡಿದೆ.
ಇದರೊಂದಿಗೆ ಪಾಕಿಸ್ಥಾನದ ಪರಮಾಪ್ತ ದೇಶದ ಚೀನ ಕೂಡ ಇಮ್ರಾನ್ ಮೇಲಿನ ನಂಬಿಕೆ ಕಳೆದುಕೊಂಡಿದೆ. ಎಲ್ಲ ಕಡೆಯಿಂದಲೂ ಇಮ್ರಾನ್ ಬೆಂಬಲವನ್ನು ಕಳೆದುಕೊಳ್ಳುತ್ತಿದ್ದು, “ಆಜಾದಿ ರ್ಯಾಲಿ’ಯಲ್ಲಿ ಅವರ ವಿರುದ್ಧ ದನಿಗಳು ಹೆಚ್ಚಾಗಿವೆ ಎಂಬುದನ್ನು ಪಾಕ್ ಸೇನೆ ಮನಗಂಡಿದೆ ಎಂದು ಹೇಳಲಾಗಿದೆ. ಆರ್ಥಿಕ ಪರಿಸ್ಥಿತಿ, ಕಾಶ್ಮೀರ ವಿಚಾರ, ಅಂ.ರಾ. ಮಟ್ಟದಲ್ಲಿ ಭಾರತದ ವಿರುದ್ಧ ಸಾಕಷ್ಟು ಪ್ರಭಾವ ಬೀರುವಲ್ಲಿ ವಿಫಲವಾಗಿದ್ದನ್ನೂ ಸೇನೆ ಗಮನಿಸಿದ್ದು, ಇದರಿಂದ ಬದಲಾವಣೆಗೆ ಮುಂದಾಗಿದೆ ಎನ್ನಲಾಗಿದೆ.
ಜಮೀಯತ್ ಉಲೇಮಾ ಇ ಇಸ್ಲಾಂ ಫಾಝಲ್ (ಜೆಯುಐ-ಎಫ್) ಮುಖ್ಯಸ್ಥ ಮೌಲಾನ ಫೌಝÉರ್ ರೆಹ್ಮಾನ್ ನೇತೃತ್ವದಲ್ಲಿ ಶುಕ್ರವಾರ ಆಜಾದಿ ರ್ಯಾಲಿ ಇಸ್ಲಾಮಾಬಾದ್‌ಗೆ ತಲುಪಿದ್ದು, ಅದರಲ್ಲಿ ಇಮ್ರಾನ್ ರಾಜೀನಾಮೆಗೆ ಆಗ್ರಹಿಸಲಾಗಿತ್ತು. ಈ ವೇಳೆ ಬಿಲಾವಲ್ ಭುಟ್ಟೋ ಅವರೂ ಇಮ್ರಾನ್ ವಿರುದ್ಧ ಮಾತನಾಡಿದ್ದು, ಅವರು ಸೇನೆಯ ಕೈಗೊಂಬೆ ಎಂದು ಜರೆದಿದ್ದರು.
ಇದರೊಂದಿಗೆ ಪಾಕ್ ಸೇನೆ ಈಗಾಗಲೇ ದೇಶದ ಆರ್ಥಿಕತೆಯ ಕೀ ಯನ್ನು ತನ್ನ ಕೈಗೆ ತೆಗೆದುಕೊಂಡಿದೆ. ಈಗಾಗಲೇ ಅದು ಉದ್ಯಮಿಗಳ ಸಭೆಯನ್ನು ನಡೆಸಿದೆ. ಸರಕಾರದ ಸಾಮಾನ್ಯ ನಡಾವಳಿಗಳನ್ನು ಮೀರಿ ಮಿಲಿಟರಿ ಅಲ್ಲಿ ಮೂಗುತೂರಿಸುತ್ತಿರುವುದು ಇತ್ತೀಚಿಗೆ ಸಾಮಾನ್ಯವಾಗಿದ್ದು, ಇದರಿಂದ ಬಹುತೇಕ ಇಮ್ರಾನ್ ಬದಿಗೆ ಸರಿಯಬಹುದು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.