ಮೂತ್ರದಿಂದ ಜೈವಿಕ ಇಟ್ಟಿಗೆ!
Team Udayavani, Oct 30, 2018, 8:29 AM IST
ಜೊಹಾನ್ಸ್‌ಬರ್ಗ್: ಮಾನವನ ಮೂತ್ರ ಬಳಸಿ ಇಟ್ಟಿಗೆ ತಯಾರಿಸುವ ವಿಶಿಷ್ಟ ವಿಧಾನ ವನ್ನು ದಕ್ಷಿಣ ಆಫ್ರಿಕಾದ ಕೇಪ್ ಟೌನ್ ವಿಶ್ವ ವಿದ್ಯಾಲಯದ ಸಂಶೋಧಕರು ಕಂಡು ಕೊಂಡಿದ್ದಾರೆ. ಇದು ವಿಶ್ವದ ಪ್ರಥಮ ಜೈವಿಕ ಇಟ್ಟಿಗೆ ಎಂಬ ಹೆಸರನ್ನೂ ಪಡೆದುಕೊಂಡಿದೆ.
ಮೈಕ್ರೋಬಯಲ್ ಕಾಬೊìನೇಟ್ ಪ್ರಿಸಿಪಿಟೇಶನ್ ಎಂಬ ನೈಸರ್ಗಿಕ ಪ್ರಕ್ರಿಯೆಯಿಂದ ಇಟ್ಟಿಗೆಯನ್ನು ತಯಾರಿಸಲಾಗಿದೆ. ಮರಳನ್ನು ಬ್ಯಾಕ್ಟೀರಿಯಾಗಳ ಬಳಕೆಯಿಂದ ಸಂಕೋಚನಗೊಳಿಸಲಾಗುತ್ತದೆ. ಈ ಬ್ಯಾಕ್ಟೀ ರಿಯಾಗಳು ಮೂತ್ರದಲ್ಲಿನ ಯುರೀಸ್ ಕಿಣ್ವಗಳನ್ನು ಒಡೆದು, ಕ್ಯಾಲಿÏಯಂ ಕಾಬೊì ನೇಟ್ ಉತ್ಪಾದಿಸುತ್ತವೆ. ಈ ಪ್ರಕ್ರಿಯೆಯಿಂದ ಮರಳು ಒಂದಕ್ಕೊಂದು ಅಂಟಿಕೊಳ್ಳುತ್ತದೆ. ಈ ವಿಧಾನ ಬಳಸಿ ಯಾವುದೇ ಆಕೃತಿಯಲ್ಲಿ ಇಟ್ಟಿಗೆ ತಯಾರಿಸಬಹುದು ಎಂದು ಎನ್ವಿರಾನ್ಮೆಂಟಲ್ ಕೆಮಿಕಲ್ ಇಂಜಿನಿಯರಿಂಗ್ ಜರ್ನಲ್‌ನಲ್ಲಿ ವಿವರಿಸಲಾಗಿದೆ.
ಸಾಮಾನ್ಯವಾಗಿ ಇಟ್ಟಿಗೆಗಳನ್ನು 1400 ಡಿಗ್ರಿ ಉಷ್ಣತೆಯಲ್ಲಿ ಉತ್ಪಾದಿಸುವುದರಿಂದ, ಭಾರಿ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೆ„ಡ್ ಉತ್ಪತ್ತಿ ಯಾಗುತ್ತದೆ. ಆದರೆ ಈ ಜೈವಿಕ ಇಟ್ಟಿಗೆಗಳು ಸಾಮಾನ್ಯ ತಾಪಮಾನದಲ್ಲೇ ತಯಾರಾಗುವುದರಿಂದ ಪರಿಸರ ಸ್ನೇಹಿಯೂ ಆಗಿರಲಿದೆ ಎಂದು ಕೇಪ್‌ಟೌನ್ ವಿವಿ ಸಂಶೋಧಕರಾದ ಸುಜಾನೆ ಲ್ಯಾಂಬರ್ಟ್ ಮತ್ತು ವುಖೆಟಾ ಮುಖಾರಿ ಹೇಳಿದ್ದಾರೆ.
ಗ್ರಾಹಕರ ಬೇಡಿಕೆಗೆ ತಕ್ಕಂತೆ ಇಟ್ಟಿಗೆಗಳನ್ನು ಗಟ್ಟಿಗೊಳಿಸಬಹುದು. ಸಾಮಾನ್ಯಕ್ಕಿಂತ ಹೆಚ್ಚು ಗಟ್ಟಿ ಇಟ್ಟಿಗೆಗಳು ಬೇಕಾದರೆ, ಬ್ಯಾಕ್ಟೀರಿಯಾ ವನ್ನು ಹೆಚ್ಚು ಹೊತ್ತು ಬೆಳೆಯಲು ಬಿಡಬೇಕು. ಬ್ಯಾಕ್ಟೀರಿಯಾ ಹೆಚ್ಚು ಹೊತ್ತು ಸಕ್ರಿಯ ವಾಗಿದ್ದಷ್ಟೂ ಇಟ್ಟಿಗೆ ಗಟ್ಟಿಯಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.