ಏಳು ಮಕ್ಕಳಿಗೆ ಜನ್ಮ!
Team Udayavani, Feb 18, 2019, 1:00 AM IST
ಬಾಗ್ಧಾದ್: ಇಲ್ಲಿನ ದಿಯಾಲಿ ಪ್ರಾಂತ್ಯದ ಆಸ್ಪತ್ರೆಯೊಂದರಲ್ಲಿ 25 ವರ್ಷದ ಗರ್ಭಿಣಿಯೊಬ್ಬರು ಏಳು ಶಿಶುಗಳಿಗೆ ಜನ್ಮ ನೀಡಿದ್ದಾರೆ. ಇವರಲ್ಲಿ ಆರು ಹೆಣ್ಣು ಹಾಗೂ ಒಂದು ಗಂಡು ಮಗುವಾಗಿದೆ. ಸಹಜ ಹೆರಿಗೆ ಆಗಿದ್ದು, ಎಲ್ಲಾ ಮಕ್ಕಳು, ತಾಯಿ ಆರೋಗ್ಯದಿಂದ ಇದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮಹಿಳೆಯೊಬ್ಬರು ಏಳು ಮಕ್ಕಳಿಗೆ ಜನ್ಮ ನೀಡಿದ್ದು ಇದೇ ಮೊದಲು ಎನ್ನಲಾಗಿದೆ. ಈ ಮಹಿಳೆಯ ಪತಿ, ಯೂಸದ್ ಫಾದ್ ಪ್ರಕಾರ, ಈ ದಂಪತಿಗೆ ಈಗಾಗಲೇ ಮೂವರು ಮಕ್ಕಳಿದ್ದರಂತೆ. ಇಷ್ಟು ಮಕ್ಕಳು ಸಾಕು ಎಂದುಕೊಂಡಾಗಲೇ ಮತ್ತೂಮ್ಮೆ ಆ ಮಹಿಳೆ ಗರ್ಭಿಣಿಯಾಗಿದ್ದರು. ಈಗ, ಏಳು ಮಕ್ಕಳು ಜನಿಸಿದ್ದು, ಒಟ್ಟು 10 ಮಕ್ಕಳ ಪೋಷಣೆ ಅವರ ಹೆಗಲ ಮೇಲೆ ಬಿದ್ದಿದೆಯಂತೆ!
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.