ಕೆಫೆಯಲ್ಲಿ ಅಂತಿಮ ಯಾತ್ರೆ!
Team Udayavani, Apr 13, 2018, 7:00 AM IST
ಬ್ಯಾಂಕಾಕ್: ಕಾಫಿ ಸವಿಯುವ ಮನಸ್ಸು ಯಾರಿಗಾಗುವುದಿಲ್ಲ? ಕಾಫಿ ಕುಡಿಯುತ್ತಾ ಸಾವನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕರೆ ಹೇಗಿರುತ್ತದೆ? ಗ್ರಾಹಕರು ತಮ್ಮ ಸಾವಿನ ಜೊತೆ ಮುಖಾಮುಖಿಯಾಗುವ ಅವಕಾಶವನ್ನು ಬ್ಯಾಂಕಾಕ್‌ನ ಕಿಡ್ ಮಾಯ್(ಹೊಸ ಚಿಂತನೆ) ಎಂಬ ಕಾಫಿ ಕೆಫೆ ಒದಗಿಸುತ್ತಿದೆ. ತನ್ನ ಸಾವಿನೊಂದಿಗೆ ಮುಖಾಮುಖೀಯಾದ ವ್ಯಕ್ತಿ ಉತ್ತಮ ವ್ಯಕ್ತಿಯಾಗಿ ಬಾಳುತ್ತಾನೆ ಎಂಬ ನಂಬಿಕೆ ಈ ಕೆಫೆಯದ್ದು. ಜೊತೆಗೆ ಈ ನಂಬಿಕೆ ಬೌದ್ಧ ಧರ್ಮದ್ದೂ ಹೌದಂತೆ.
ಈ ಕೆಫೆಯನ್ನು ಭಯಾನಕವಾಗಿ ರೂಪಿಸಲಾಗಿದೆ. ಇಲ್ಲಿ “ಸಾವು’, “ನೋವು’ ಎಂಬ ಎರಡು ಬಗೆಯ ಪೇಯಗಳು ದೊರೆಯುತ್ತವೆ. ಜೊತೆಗೆ ಸಾವಿನ ಭೀಕರತೆ ಸಾರುವ ಫಲಕಗಳನ್ನು ಹಿಡಿದ ಅಸ್ತಿಪಂಜರ ನಿಮ್ಮನ್ನು ಎದುರುಗೊಳ್ಳುತ್ತದೆ. ತಲೆ ಬುರುಡೆ ಆಕಾರದ ಚಾಕೊಲೆಟ್‌ಗಳೂ ಇಲ್ಲಿ ಲಭ್ಯ. ಇಷ್ಟೇ ಇಲ್ಲಿಯ ವಿಶೇಷತೆ ಎಂದು ಭಾವಿಸಬೇಡಿ. ಇಲ್ಲಿ ಪ್ರಮುಖ ಆಕರ್ಷಣೆ ಎಂದರೆ ಶವಪೆಟ್ಟಿಗೆ. ಅಂತಿಮ ಯಾತ್ರೆಗಾಗಿ ಅಲಂಕರಿಸುವಂತೆ ಶವಪೆಟ್ಟಿಗೆಯನ್ನು ಅಲಂಕರಿಸುತ್ತಾರೆ. ಅಂತಿಮ ಯಾತ್ರೆಯ ಅನುಭವ ಪಡೆಯುವವರು ಇದರಲ್ಲಿ ಮಲಗಿ ಶವ ಸಂಸ್ಕಾರದ ಅನುಭವ ಪಡೆಯಬಹುದು. “ನನ್ನದೇ ಶವಸಂಸ್ಕಾರ ನಡೆಯುವಂತೆ ಭಾಸವಾಗಿ ದುಃಖ ಉಮ್ಮಳಿಸಿತು’ ಎಂದು ಈ ಅನುಭವ ಪಡೆದ 28 ವರ್ಷ ವಯಸ್ಸಿನ ಮಹಿಳೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.