ಕಪ್ಪು ಹಣ: ಭಾರತದೊಂದಿಗೆ ಮಾಹಿತಿ ವಿನಿಮಯಕ್ಕೆ ಸ್ವಿಸ್ ಒಪ್ಪಿಗೆ
Team Udayavani, Jun 16, 2017, 5:24 PM IST
ಬರ್ನ್/ಹೊಸದಿಲ್ಲಿ : ಶಂಕಿತ ಕಪ್ಪು ಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೆರವಾಗಲು ಸ್ವಿಟ್ಸರ್‌ಲ್ಯಾಂಡ್, ಭಾರತ ಹಾಗೂ ಇತರ 40 ದೇಶಗಳೊಂದಿಗೆ ಹಣಕಾಸು ಖಾತೆಗಳ ಸ್ವಯಂಚಾಲಿತ ಮಾಹಿತಿ ವಿನಿಮಯಕ್ಕೆ ವ್ಯವಸ್ಥೆಗೆ ಒಪ್ಪಿಗೆ ನೀಡಿದೆ. ಆದರೆ ತಾನು ವಿನಿಮಯಿಸುವ ಹಣಕಾಸು ಮಾಹಿತಿಗಳ ಪಾರದರ್ಶಕತೆ ಹಾಗೂ ಭದ್ರತೆಯನ್ನು ಕಡ್ಡಾಯವಾಗಿ ಕಾಪಿಡುವಂತೆ ಅದು ಕಟ್ಟಪ್ಪಣೆ ಮಾಡಿದೆ.
ತೆರಿಗೆ ಹಾಗೂ ಹಣಕಾಸು ವ್ಯವಹಾರ ಸಂಬಂಧದ ಮಾಹಿತಿಗಳ “ಆಟೋಮ್ಯಾಟಿಕ್ ಎಕ್ಸ್‌ಚೇಂಜ್ ಆಫ್ ಇನ್‌ಫಾರ್ಮೇಶನ್’ ಎಂಬ ಜಾಗತಿಕ ಒಡಂಬಡಿಕೆಗೆ ಅನುಮೋದನೆ ನೀಡಿರುವ ಸ್ವಿಸ್ ಫೆಡರಲ್ ಕೌನ್ಸಿಲ್ “2018ರಿಂದ ಇದನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಮತ್ತು 2019ರಲ್ಲಿ ಮೊದಲ ಕಂತಿನ ಮಾಹಿತಿಯನ್ನು ವಿನಿಮಯಿಸಲಾಗುವುದು’ ಎಂದು ಹೇಳಿದೆ.
ಐರೋಪ್ಯ ರಾಷ್ಟ್ರವಾಗಿರುವ ಸ್ವಿಟ್ಸರ್‌ಲ್ಯಾಂಡಿನ ಉನ್ನತ ಆಡಳಿತ ಮಂಡಳಿಯು ಇದಾಗಿದ್ದು ಯಾವ ದಿನಾಂಕದಿಂದ ಸ್ವಯಂಚಾಲಿತ ಹಣಕಾಸು ಮಾಹಿತಿ ವಿನಿಮಯವು ಆರಂಭವಾಗಲಿದೆ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ ತಿಳಿಸಲಿದೆ.
ವಿದೇಶೀ ಬ್ಯಾಂಕುಗಳಲ್ಲಿ ಭಾರತೀಯರು ಲಕ್ಷಾಂತರ ಕೋಟಿ ಕಪ್ಪು ಹಣವನ್ನು ಗುಡ್ಡೆ ಹಾಕಿದ್ದಾರೆ ಎನ್ನಲಾಗಿದ್ದು ಅದನ್ನು ದೇಶಕ್ಕೆ ಮರಳಿ ತರುವುದು ಪ್ರಧಾನಿ ನರೇಂದ್ರ ಮೋದಿ ಸರಕಾರದ ಮುಖ್ಯ ಗುರಿಯಾಗಿದೆ. ಆ ನಿಟ್ಟಿನಲ್ಲಿನ ಪ್ರಯತ್ನಕ್ಕೆ ಈಗ ಮಹತ್ವದ ಜಯ ದೊರಕಿದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibande: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.