ದೇಹದ “ವಿಷ’ಕ್ಕೆ ರಕ್ತದಾನವೇ ರಾಮಬಾಣ!
ರಕ್ತದಾನದಿಂದಾಗಿ ಶರೀರದಲ್ಲಿರುವ "ಸರ್ವಕಾಲಿಕ ರಾಸಾಯನಿಕ'ಗಳು ಮಾಯ
Team Udayavani, Apr 24, 2022, 7:50 AM IST
ಲಂಡನ್: ಗಾಳಿ, ನೀರು, ಆಹಾರ… ಹೀಗೆ ಬೇರೆ ಬೇರೆ ರೀತಿಯಿಂದ ದೇಹವನ್ನು ಪ್ರವೇಶಿಸುವ “ಸರ್ವಕಾಲಿಕ ರಾಸಾಯನಿಕ’ಗಳಿಂದ ಮನುಷ್ಯನಿಗೆ ಮುಕ್ತಿಯಿಲ್ಲವೇ?
ಹಲವಾರು ವರ್ಷಗಳಿಂದ ಕಾಡುತ್ತಿದ್ದ ಈ ಪ್ರಶ್ನೆಗೆ ಈಗ “ಖಂಡಿತಾ ಇದೆ’ ಎಂಬ ಉತ್ತರ ಸಿಕ್ಕಿದೆ. ನಮ್ಮ ದೇಹದಲ್ಲೇ “ಸದಾಕಾಲ ಇರುವ’ ಈ ವಿಷಕಾರಿ ರಾಸಾಯನಿಕಗಳಿಂದ ಮುಕ್ತಿ ಪಡೆಯಲು ಇರುವ ಏಕೈಕ ದಾರಿಯೆಂದರೆ “ರಕ್ತದಾನ’ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ!
ಹೌದು, ನಿಯಮಿತವಾಗಿ ರಕ್ತದಾನ ಮಾಡುತ್ತಿದ್ದರೆ ಮನುಷ್ಯನ ರಕ್ತನಾಳಗಳು ಸ್ವಚ್ಛವಾಗಿ, ಈ ಫಾರೆವರ್ ಕೆಮಿಕಲ್ಸ್‌ನಿಂದ ಮುಕ್ತವಾಗುತ್ತವೆ ಎಂಬ ಮಹತ್ವದ ಅಂಶವನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ಸಂಶೋಧನೆಯ ವರದಿಯು “ಜಾಮಾ ನೆಟ್‌ವರ್ಕ್ ಓಪನ್’ ಎಂಬ ಸಂಶೋಧನಾ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿದೆ.
ಯಾರ ಮೇಲೆ ಅಧ್ಯಯನ?
ಸಾಮಾನ್ಯ ಜನರಿಗಿಂತ ಹೆಚ್ಚು ಈ ಪಿಎಫ್ಎಎಸ್‌ಗಳಿಗೆ ಒಡ್ಡಲ್ಪಡುವವರೆಂದರೆ ಅಗ್ನಿಶಾಮಕ ಸಿಬ್ಬಂದಿ. ಹೀಗಾಗಿ, ಆಸ್ಟ್ರೇಲಿಯಾದ 285 ಮಂದಿ ಅಗ್ನಿಶಾಮಕ ಸಿಬ್ಬಂದಿಯನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಇವರೆಲ್ಲರೂ ಸುಮಾರು 12 ತಿಂಗಳ ಕಾಲ ರಕ್ತ ಮತ್ತು ಪ್ಲಾಸ್ಮಾ ದಾನ ಮಾಡಿದ್ದರು. ನಿರಂತರವಾಗಿ ರಕ್ತದಾನ ಮಾಡಿದ ಇವರ ದೇಹದಲ್ಲಿ ವಿಷಕಾರಿ ರಾಸಾಯನಿಕದ ಪ್ರಮಾಣ ತಗ್ಗುತ್ತಾ ಹೋಗಿರುವುದು ಅಧ್ಯಯನದಿಂದ ದೃಢಪಟ್ಟಿದೆ. ವಿಶೇಷವೆಂದರೆ, ರಕ್ತದಾನಕ್ಕಿಂತಲೂ ಪ್ಲಾಸ್ಮಾ ದಾನ ಮಾಡಿದವರ ರಕ್ತನಾಳಗಳಲ್ಲಿ ಕೆಮಿಕಲ್‌ಗಳ ಪ್ರಮಾಣ ಗಣನೀಯವಾಗಿ ಕುಸಿದಿದೆ.
ಇದನ್ನೂ ಓದಿ:ದಿಲ್‌ಕುಶ್ ದ್ರಾಕ್ಷಿ ಬೆಳೆಯಿಂದ ಉತ್ತಮ ಲಾಭ; ಸರ್ಕಾರದಿಂದಲೂ ಅನುದಾನ ವ್ಯವಸ್ಥೆ
ಏನಿದು “ಫಾರೆವರ್ ಕೆಮಿಕಲ್ಸ್’?
“ಫಾರೆವರ್ ಕೆಮಿಕಲ್ಸ್’ (ಪಿಎಫ್ಎಎಸ್) ಎನ್ನುವುದು ಹೆಚ್ಚಾಗಿ ಅಡುಗೆಮನೆಯಲ್ಲಿ ಬಳಸುವ ನಾನ್ ಸ್ಟಿಕ್ ಪಾತ್ರೆಗಳು, ಜಲ-ನಿರೋಧಕ ವಸ್ತುಗಳು ಮತ್ತು ಇತರೆ ಗೃಹೋಪಯೋಗಿ ವಸ್ತುಗಳಲ್ಲಿ ಕಂಡುಬರುವಂಥ ವಿಷಕಾರಿ ರಾಸಾಯನಿಕ. ಇದು ವಿಭಜನೆಗೊಳ್ಳದ ರಾಸಾಯನಿಕ ಕಣ. ಗಾಳಿ, ನೀರು ಅಥವಾ ಆಹಾರದ ಮೂಲಕ ಈ ರಾಸಾಯನಿಕವು ನಮ್ಮ ಶರೀರದೊಳಕ್ಕೆ ಸೇರಿ ರಕ್ತದೊಳಗೆ ಸಂಗ್ರಹವಾಗುತ್ತದೆ. ಅಲ್ಲದೇ, ಶ್ವಾಸಕೋಶಗಳ ಮೇಲೆ ಪರಿಣಾಮ ಬೀರಿ, ಅಸ್ತಮಾ ಹಾಗೂ ಇತರೆ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.