ಭಾರತೀಯರಿಗೆ ಮತ್ತೆ ವೀಸಾ ಆತಂಕ
Team Udayavani, Apr 25, 2018, 7:50 AM IST
ಅಮೆರಿಕದಲ್ಲಿರುವ ಭಾರತೀಯರಿಗೆ ಮತ್ತೆ ಟ್ರಂಪ್ ಆಡಳಿತ ತಲೆನೋವು ತಂದಿಟ್ಟಿದೆ. ಅಮೆರಿಕದಲ್ಲಿ ಕಾನೂನಾತ್ಮಕವಾಗಿ ಉದ್ಯೋಗ ಪಡೆದಿರುವ H4 ವೀಸಾದಾರರ ವೀಸಾವನ್ನು ರದ್ದು ಮಾಡಲು ಟ್ರಂಪ್ ಸರಕಾರ ಗಂಭೀರ ಚಿಂತನೆ ನಡೆಸಿದೆ. ಈ ಮೂಲಕ ಅಮೆರಿಕದ ಪ್ರಜೆಗಳಿಗೆ ಉದ್ಯೋಗಾವಕಾಶ ಸೃಷ್ಟಿಸುವುದು ಸರಕಾರದ ಉದ್ದೇಶ. ಇದು ಜಾರಿಯಾಗಿದ್ದೇ ಆದಲ್ಲಿ, ಅಲ್ಲಿರುವ 70 ಸಾವಿರಕ್ಕೂ ಹೆಚ್ಚು ಭಾರತೀಯರು ಕೆಲಸ ಕಳೆದುಕೊಳ್ಳುವುದು ಖಚಿತ.
ಏನಿದು H-4 ವೀಸಾ?
H1 ಬಿ ವೀಸಾದಾರರ ಪತಿ ಅಥವಾ ಪತ್ನಿಗೆ ಅಮೆರಿಕದಲ್ಲೇ ಇದ್ದುಕೊಂಡು ಉದ್ಯೋಗ ಮಾಡಲು ಅವ ಕಾಶ ಕಲ್ಪಿಸಿ ನೀಡಲಾಗಿರುವ ವೀಸಾ ಇದು. ಹಿಂದಿನ ಒಬಾಮ ಆಡಳಿತವು ವಿಶೇಷ ಆದೇಶದ ಮೂಲಕ ಇವರಿಗೆಲ್ಲ ಉದ್ಯೋಗದ ಪರವಾನಗಿ ನೀಡಿತ್ತು.
ಟ್ರಂಪ್ ಸರಕಾರದ ಚಿಂತನೆಯೇನು?
ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರ ಸರಕಾರವು ಅಮೆರಿಕದಲ್ಲಿರುವ H1 ಬಿ ವೀಸಾದಾರರ ಸಂಗಾತಿಗೂ ಕೆಲಸ ಮಾಡಲು ಅವಕಾಶ ಕಲ್ಪಿಸಿ ಹೊರಡಿಸಿದ್ದ ಆದೇಶವನ್ನು ರದ್ದು ಮಾಡುವುದು ಟ್ರಂಪ್ ಆಡಳಿತದ ಯೋಜನೆ. ಒಂದು ವೇಳೆ, H-4 ವೀಸಾ ಪಡೆದು ಅಲ್ಲೇ ದುಡಿಯುತ್ತಿರುವವರ ವೀಸಾವನ್ನು ಕೊನೆಗೊಳಿಸಿದ್ದೇ ಆದರೆ, ಲಕ್ಷಾಂತರ ಭಾರತೀಯರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.
– ಅಮೆರಿಕದಲ್ಲಿರುವ H-4 ವೀಸಾದಾರರ ಸಂಖ್ಯೆ: 71,000
– ಭಾರತೀಯರ ಪ್ರಮಾಣ : 90%
– 2017ರ ಅಂಕಿಅಂಶದಂತೆ, H4 ವೀಸಾದಾರರ ಪೈಕಿ ಮಹಿಳೆಯರ ಪ್ರಮಾಣ: 94%
– ಮಹಿಳೆಯರಲ್ಲಿ ಭಾರತೀಯರ ಪ್ರಮಾಣ: 93%
– ಚೀನಾದ ಮಹಿಳೆಯರು: 04%
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.