Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Team Udayavani, Apr 27, 2024, 12:44 PM IST
ಬ್ಯಾಂಕಾಕ್: ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ 31 ವರ್ಷದ ಥಾಯ್ಲೆಂಡ್ ಮಾಡೆಲ್ ಓರ್ವಳ ಶವ ಬಹ್ರೈನ್ ನಲ್ಲಿರುವ ಶವಾಗಾರದಲ್ಲಿ ಪತ್ತೆಯಾಗಿದ್ದು, ಇದೀಗ ಮಾಡೆಲ್ ಅನುಮಾನಾಸ್ಪದ ಸಾವಿನ ಸುತ್ತ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು ಸಾವಿನ ಬಗ್ಗೆ ನಿಖರವಾದ ತನಿಖೆ ನಡೆಸಬೇಕೆಂದು ಆಕೆಯ ಕುಟುಂಬ ಒತ್ತಾಯಿಸಿದೆ ಎಂದು ಯುಕೆ ಪತ್ರಿಕೆ ಡೈಲಿ ಮಿರರ್ ವರದಿ ಮಾಡಿದೆ.
ಮೃತಳನ್ನು ಥಾಯ್ಲೆಂಡ್ ಕೈಕನ್ ಕೇನ್ನಕಮ್ (31) ಎನ್ನಲಾಗಿದ್ದು, ಮಾಧ್ಯಮ ವರದಿಗಳ ಪ್ರಕಾರ ಕೈಕನ್ ಒಬ್ಬ ಮಾಡೆಲ್ ಆಗಿದ್ದು ಹುಟ್ಟೂರಾದ ಥಾಯ್ಲೆಂಡ್ ನಲ್ಲಿ ಆಕೆಗೆ ಕೆಲಸ ಕಡಿಮೆಯಾದ ಉದ್ಯೋಗ ಅವಕಾಶಗಳ ಹುಡುಕಾಟದಲ್ಲಿ ಆಕೆ ಬಹ್ರೈನ್ ಗೆ ತೆರಳಿದ್ದಳು. ಅಲ್ಲಿ ಅವಳು ಈಶಾನ್ಯ ಥೈಲ್ಯಾಂಡ್‌ನಲ್ಲಿ ತನ್ನ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಲು ಅಲ್ಲಿನ ರೆಸ್ಟೋರೆಂಟ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾಳೆ ಎನ್ನಲಾಗಿದೆ. ಅಲ್ಲದೆ ಆಕೆ ತನ್ನ ಕುಟುಂಬಕ್ಕೆ ತಾನು ಗೆಳೆಯನ ಜೊತೆ ಇಲ್ಲಿ ನೆಲೆಸಿರುವುದಾಗಿ ಹೇಳಿಕೊಂಡಿದ್ದಳು ಆದರೆ ಇತ್ತೀಚಿಗೆ ಒಂದು ವರ್ಷದಿಂದ ಆಕೆ ಕುಟುಂಬದ ಜೊತೆ ಸಂಪರ್ಕಕ್ಕೆ ಸಿಗಲಿಲ್ಲ ಎನ್ನಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯಲಾಗಿದ್ದಳು:
ಚೈನಾ ಟೈಮ್ಸ್ ವರದಿಯ ಪ್ರಕಾರ, ಕೈಕನ್ ಜೀವನದಲ್ಲಿ ಏನಾದರೂ ಸಾಧನೆ ಮಾಡಿ ಮುಂದೆ ಬರಬೇಕು ಎಂದು ಬಯಸಿದ್ದಳು, ಆಕೆ ಓರ್ವ ಮಾಡೆಲ್ ಆದ ಕಾರಣ ಥೈಲ್ಯಾಂಡ್ ನಲ್ಲಿ ಅವಕಾಶಗಳು ಸಿಗದೇ ಇದ್ದಾಗ ತನ್ನ ದೇಶ ಬಿಟ್ಟು ಹೊರಗೆ ಹೋಗಲು ನಿರ್ಧರಿಸಿದ್ದಾಳೆ. ಅಲ್ಲದೆ ಕೈಕನ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯಳಾಗಿದ್ದಳು ತನ್ನ ಹೊಸ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತಿದ್ದಳು ಆದರೆ ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣದಲ್ಲಿ ಆಕೆ ಯಾವುದೇ ಪೋಸ್ಟ್ ಹಾಕಿರಲಿಲ್ಲ ಎನ್ನಲಾಗಿದೆ.
ಏಪ್ರಿಲ್ 2023 ರಲ್ಲಿ ಕೇನ್ನಕಮ್ ಪೋಸ್ಟ್ ಮಾಡುವುದನ್ನು ನಿಲ್ಲಿಸಿದಾಗ ಚಿಂತಿತರಾದ ಕುಟುಂಬ ಆಕೆಯ ಸಂಪರ್ಕ ಮಾಡುವ ಕೆಲಸ ಮಾಡಿದ್ದಾರೆ ಆದರೆ ಆಕೆಯ ಸಂಪರ್ಕ ಸಾಧ್ಯವಾಗಲಿಲ್ಲ ಇದರಿಂದ ಗಾಬರಿಗೊಂಡ ಕುಟುಂಬ ಥಾಯ್ ರಾಯಭಾರ ಕಚೇರಿಯಿಂದ ಸಹಾಯವನ್ನು ಕೋರಿದೆ, ಆದರೆ ಕುಟುಂಬಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ. ಏಪ್ರಿಲ್ 18 ರಂದು, ಆಗ್ನೇಯ ಏಷ್ಯಾದ ಮಹಿಳೆಯ ಶವವನ್ನು ಸಲ್ಮಾನಿಯಾ ವೈದ್ಯಕೀಯ ಸಂಕೀರ್ಣದ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಥಾಯ್ ರಾಯಭಾರ ಕಚೇರಿಯು ಕೇನ್ನಕುಮ್ ಅವರ ಕುಟುಂಬಕ್ಕೆ ಮಾಹಿತಿ ನೀಡಿತ್ತು, ಥಾಯ್ ರಾಯಭಾರ ಕಚೇರಿ ನೀಡಿ ಮಾಹಿತಿಯನ್ನು ಪರಿಶೀಲಿಸಿದ ಕುಟುಂಬ ಮೃತ ಮಹಿಳೆಯ ಮುಖ ಹಾಗೂ ಆಕೆಯ ಕಾಲಿನ ಮೇಲೆ ಹಾಕಲಾದ ಹಚ್ಚೆಯ ಆಧಾರದಲ್ಲಿ ಆಕೆಯೇ ತನ್ನ ಮಗಳೆಂದು ಕುಟುಂಬ ಒಪ್ಪಿಕೊಂಡಿದೆ.
ವೈದ್ಯಕೀಯ ವರದಿಯಲ್ಲೇನಿತ್ತು:
ಚೈನಾ ಟೈಮ್ಸ್ ವರದಿಯ ಪ್ರಕಾರ ಮೃತ ಮಹಿಳೆ ಅತಿಯಾದ ಮದ್ಯ ಸೇವನೆ ಮಾಡಿರುವುದೇ ಆಕೆಯ ಸಾವಿಗೆ ಕಾರಣ ಎಂದು ವರದಿ ನೀಡಿದೆ, ಅತಿಯಾದ ಮದ್ಯ ಸೇವನೆ ಮಾಡಿದ ಪರಿಣಾಮ ರಕ್ತ ನಾಳಗಳು ವೈಫಲ್ಯವಾಗಿ ಮೃತಪಟ್ಟಿದ್ದಾಗಿ ಹೇಳಲಾಗಿದೆ. ಇದೀಗ ಕೇನ್ನಕಮ್ ಅವರ ಕುಟುಂಬವು ಅವರ ದೇಹವನ್ನು ತಾಯ್ನಾಡಿಗೆ ಮರಳಿ ತರಲು ಥಾಯ್ ರಾಯಭಾರ ಕಚೇರಿಯ ಸಹಾಯವನ್ನು ಕೋರುತ್ತಿದೆ.
ಇದನ್ನೂ ಓದಿ: W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.