ಭಾರತೀಯ ವಾಯು ಪಡೆಗೆ ಮೊದಲ ಅಪಾಚೆ ಗಾರ್ಡಿಯನ್ ದಾಳಿ ಹೆಲಿಕಾಪ್ಟರ್
Team Udayavani, May 11, 2019, 12:06 PM IST
ಅರಿಝೋನಾ, ಅಮೆರಿಕ : ಇಲ್ಲಿನ ಬೋಯಿಂಗ್ ಉತ್ಪಾದನಾ ಘಟಕದಲ್ಲಿ ಭಾರತೀಯ ವಾಯು ಪಡೆಗೆ ಮೊದಲ ಅಪಾಚೆ ಗಾರ್ಡಿಯನ್ ದಾಳಿ ಹೆಲಿಕಾಪ್ಟರ್ ಹಸ್ತಾಂತರಿಸಲಾಗಿದ್ದು ಇದರಿಂದ ಐಎಎಫ್ ದಾಳಿ ಸಾಮರ್ಥ್ಯ ಇನ್ನಷ್ಟು ಬಲಗೊಂಡಂತಾಗಿದೆ.
ಏರ್ ಮಾರ್ಶಲ್ ಎ ಎಸ್ ಬುಟೋಲಾ ಅವರು ಎಐಎಫ್ ಪ್ರತಿನಿಧಿಯಾಗಿ ಭಾಗವಹಿಸಿ ಮೊದಲ ಅಪಾಚೆ ಹೆಲಿಕಾಪ್ಟರ್ ಸ್ವೀಕರಿಸಿದರು.
ಐಎಎಫ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಎಎಚ್-64ಇ(ಐ) ಅಪಾಚೆ ದಾಳಿ ಹೆಲಿಕಾಪ್ಟರ್ ಪೂರೈಕೆಯು ಭಾರತೀಯ ವಾಯು ಪಡೆಯ ಆಧುನೀಕರಣದಲ್ಲಿ ಇರಿಸಲಾಗಿರುವ ಮಹತ್ತರ ಹೆಜ್ಜೆ ಯಾಗಿದೆ. ಇದನ್ನು ಐಎಎಫ್ ನ ಆವಶ್ಯಕ್ಯತೆಗೆ ತಕ್ಕಂತೆ ಮಾರ್ಪಡಿಸಲಾಗಿದೆ. ದುರ್ಗಮ ಪರ್ವತ ಪ್ರದೇಶಗಳಲ್ಲಿ ಶತ್ರುಗಳ ವಿರುದ್ಧ ನಿಖರ ದಾಳಿಗೆ ಈ ಅಪಾಚೆ ಹೆಲಿಕಾಪ್ಟರ್ ಅತ್ಯಂತ ಪರಿಣಾಮಕಾರಿಯಾಗಿದೆ.
ಅಪಾಚೆ ದಾಳಿ ಹೆಲಿಕಾಪ್ಟರ್ ಬಹುಸ್ತರದ ಪಾತ್ರ ನಿರ್ವಹಿಸುವ ಅಪಾರ ಸಾಮರ್ಥ್ಯ ಹೊಂದಿದೆ. ಇದನ್ನು ಅಮೆರಿಕ ಸೇನೆ ಈಗಾಗಲೇ ತನ್ನ ವಾಯು ಪಡೆಗೆ ಸೇರಿಸಿಕೊಂಡಿದೆ.
2015ರ ಸೆಪ್ಟಂಬರ್ ನಲ್ಲಿ ಐಎಎಫ್ ಬಹು-ಶತಕೋಟಿ ಡಾಲರ್‌ಗಳ ಗುತ್ತಿಗೆ ಒಪ್ಪಂದವನ್ನು ಅಮೆರಿಕ ಸರಕಾರ ಮತ್ತು ಬೋಯಿಂಗ್ ಲಿಮಿಟೆಡ್ ಜತೆಗೆ ಮಾಡಿಕೊಂಡಿದ್ದ ಪ್ರಕಾರ ಭಾರತಕ್ಕೆ 22 ಅಪಾಚೆ ದಾಳಿ ಹೆಲಿಕಾಪ್ಟರ್ ಗಳು ಪೂರೈಕೆಯಾಗಲಿವೆ. ಈ ವರ್ಷ ಜುಲೈ ನಲ್ಲಿ ಐಎಎಫ್ ಗೆ ಈ ಹೆಲಿಕಾಪ್ಟರ್‌ಗಳ ಮೊದಲ ಕಂತು ಪೂರೈಕೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.