ಸಂತ್ರಸ್ತರಿಗೆ ನೆರವಾಗುತ್ತಿದ್ದ ಐವರನ್ನು ಹತ್ಯೆಗೈದ ಉಗ್ರರು
Team Udayavani, Jul 24, 2020, 3:07 AM IST
ಅಬುಜಾ: ಕೋವಿಡ್ 19 ಸಂತ್ರಸ್ತರಿಗೆ ಆಹಾರ, ನೀರು, ಔಷಧ ಪೂರೈಸಲು ಹೋಗಿದ್ದ ಐವರನ್ನು ನೈಜೀರಿಯಾದ ಬೊಕೊ ಹರಾಂ ಉಗ್ರರು ನಿರ್ದಯವಾಗಿ ಗುಂಡಿಕ್ಕಿ ಕೊಂದಿದ್ದಾರೆ.
ತುರ್ತು ಪರಿಸ್ಥಿತಿ ನಿರ್ವಹಣಾ ಸಂಸ್ಥೆಯ ಐವರು ಸಿಬಂದಿ ಜೂನ್‌ನಲ್ಲಿ ಈಶಾನ್ಯ ನೈಜೀರಿಯಾದ ಕುಗ್ರಾಮಕ್ಕೆ ಅಗತ್ಯ ಸಾಮಗ್ರಿ ಹೊತ್ತು ಸಾಗಿದ್ದರು.
ಈ ವೇಳೆ ಅವರನ್ನು ಜಿಹಾದಿ ಉಗ್ರಪಡೆ ಬೊಕೊ ಹರಾಂ ಅಪಹರಿಸಿ, ಒಂದು ತಿಂಗಳು ಬಂಧನದಲ್ಲಿಟ್ಟಿತ್ತು.
ಭಯಾನಕ ವಿಡಿಯೊ: ಉಗ್ರರು ಬುಧವಾರ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟ ವಿಡಿಯೊ, ಐವರು ಸಿಬಂದಿಯ ಬದುಕಿನ ಕೊನೇ ಕ್ಷಣಗಳನ್ನು ತೆರೆದಿಟ್ಟಿದೆ.
35 ಸೆಕೆಂಡಿನ ವಿಡಿಯೊದಲ್ಲಿ ಐವ ರನ್ನು ಸಾಲಾಗಿ ಮಂಡಿಯೂರಿಸಿ ಉಗ್ರರು ಗುಂಡಿಕ್ಕಿದ ದೃಶ್ಯ ನೈಜೀರಿಯಾವನ್ನೇ ಬೆಚ್ಚಿಬೀಳಿಸಿದೆ.
ಉಗ್ರ ಸಂದೇಶ: ಗುಂಡಿಕ್ಕುವ ವೇಳೆ ಉಗ್ರ ಕಮಾಂಡರ್ ‘ನಿಮ್ಮ ಹತ್ಯೆ ಮೂಲಕ ನಾಸ್ತಿಕರಿಗೆ ನಾವು ಸ್ಪಷ್ಟ ಸಂದೇಶ ರವಾನಿಸುತ್ತಿದ್ದೇವೆ. ನಿಮ್ಮ ಉದ್ಯೋಗದಾತ ನಾಸ್ತಿಕರು ತಮ್ಮ ಗುರಿಗಳನ್ನು ಸಾಧಿಸಲು ನಿಮ್ಮನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.
ಈ ತಪ್ಪಿಗಾಗಿ ನೀವು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ನಡೆಯಬೇಕು, ಇಲ್ಲದಿದ್ದರೆ ನಿಮ್ಮ ಮಾರ್ಗಗಳಲ್ಲಿ ಸಾಗುವ ಎಲ್ಲರನ್ನೂ ಅಪಹರಿಸಿ ಗುಂಡಿಕ್ಕುತ್ತೇವೆ’ ಎಂದು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು
Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
ಹಾವೇರಿ: 8 ಕೋಟಿ ರೂ. ವೆಚ್ಚದ ಹೈಟೆಕ್ ರಂಗಮಂದಿರ ನಿರುಪಯುಕ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.