ಇಮ್ರಾನ್ ಖಾನ್ ಅಕ್ರಮ ಮಕ್ಕಳಲ್ಲಿ ಹಲವರು ಭಾರತೀಯರು: ಮಾಜಿ ಪತ್ನಿ
Team Udayavani, Jul 13, 2018, 11:20 AM IST
ಇಸ್ಲಾಮಾಬಾದ್ : ರಾಜಕಾರಣಿಯಾಗಿ ಪರಿವರ್ತಿತರಾಗಿರುವ ಮಾಜಿ ಕ್ರಿಕೆಟಿಗ, ಪಾಕಿಸ್ಥಾನ್ ತೆಹರೀಕ್ ಎ ಇನ್ಸಾಫ್ ಪಕ್ಷದ ಮುಖ್ಯಸ್ಥರಾಗಿರುವ ತನ್ನ ಮಾಜಿ ಪತಿ ಇಮ್ರಾನ್ ಖಾನ್ ಹಲವಾರು ಕಾನೂನುಬಾಹಿರ ಮಕ್ಕಳ ಅಪ್ಪನಾಗಿದ್ದು ಇವರಲ್ಲಿ ಹಲವರು ಭಾರತೀಯರು ಎಂದು ಇಮ್ರಾನ್ ಮಾಜಿ ಪತ್ನಿ ರೆಹಾಮ್ ಖಾನ್ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ.
ಪಾಕಿಸ್ಥಾನದಲ್ಲಿ ಇದೇ ಜು.25ರಂದು ಮಹಾ ಚುನಾವಣೆ ನಡೆಯಲಿದ್ದು ಅದಕ್ಕೆ ಮುನ್ನ ಅಲ್ಲಿನ ರಾಜಕಾರಣಿಗಳ ವಿರುದ್ಧ, ಆರೋಪ, ಪ್ರತ್ಯಾರೋಪ, ಕೆಸರೆರಚುವಿಕೆಯೇ ಮೊದಲಾಗಿ ಬಹಿರಂಗ ಮಾನಹಾನಿಕರ ಮಾತುಗಳು ಪ್ರವಾಹೋಪಾದಿಯಲ್ಲಿ ಹರಿಯುತ್ತಿವೆ.
ಇಮ್ರಾನ್ ಮಾಜಿ ಪತ್ನಿ ರೆಹಾಮ್ ಖಾನ್ ಬರೆದಿರುವ “ರೆಹಾಮ್ ಖಾನ್” ಶೀರ್ಷಿಕೆಯ ವಿವಾದಾತ್ಮಕ ಪುಸ್ತಕ ನಿನ್ನೆ ಗುರುವಾರ ಬಿಡುಗಡೆಯಾಗಿದೆ. ಈ ಪುಸ್ತಕದಲ್ಲಿ ರೆಹಾಮ್, ಇಮ್ರಾನ್ ಜತೆಗಿನ ತನ್ನ ಹತ್ತು ತಿಂಗಳ ಮದುವೆಯು ಎಷ್ಟೊಂದು ಪ್ರಕ್ಷುಬ್ಧ ವಾಗಿತ್ತು ಎಂಬುದನ್ನು ವಿವರಿಸಿದ್ದಾರೆ.
ಈ ಪುಸ್ತಕದ ಒಂದು ಅಧ್ಯಾಯದಲ್ಲಿ ರೆಹಾಮ್, “ಇಮ್ರಾನ್ ಖಾನ್ ತನ್ನ ವಿವಾಹೇತರ ಸಂಬಂಧಗಳ ಫಲವಾಗಿ ತಾನು ಐದು ಮಕ್ಕಳ ಅಪ್ಪನಾಗಿದ್ದೇನೆ’ ಎಂಬುದನ್ನು ಖುದ್ದು ಒಪ್ಪಿಕೊಂಡಿದ್ದಾಗಿ ಬಹಿರಂಗಪಡಿಸಿದ್ದಾರೆ.
“ನಾನು ಅಕ್ರಮ ಸಂಬಂಧ ಹೊಂದಿದ್ದ ಯಾವುದೇ ಮಹಿಳೆಯರು ತಮ್ಮ ಮದುವೆಗಳನ್ನು ಉಳಿಸಿಕೊಳ್ಳಲು ಎಂದೂ ನನ್ನೊಂದಿಗಿನ ಅಕ್ರಮ ಲೈಂಗಿಕ ಸಂಬಂಧಗಳನ್ನು ಬಹಿರಂಗಪಡಿಸಿಯೇ ಇಲ್ಲ” ಎಂದು ಇಮ್ರಾನ್ ಕೊಚ್ಚಿಕೊಂಡಿರುವುದಾಗಿ ರೆಹಾಮ್ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ.
“ನನ್ನ ಅಕ್ರಮ ಮಕ್ಕಳಲ್ಲಿ ಕನಿಷ್ಠ ಐವರು ಭಾರತೀಯರು; ಅವರಲ್ಲಿ ಅತ್ಯಂತ ಹಿರಿಯನಾಗಿರುವವನು ಈಗ 34ರ ಹರೆಯದವನಾಗಿದ್ದಾನೆ’ ಎಂದು ಇಮ್ರಾನ್ ಹೇಳಿರುವುದಾಗಿ ರೆಹಾಮ್ ಬರೆದಿದ್ದಾರೆ.
ರೆಹಾಮ್ ಬರೆದಿರುವ ಪ್ರಕಾರ್ ಇಮ್ರಾನ್ ಖಾನ್ ಬದುಕು ಸಂಪೂರ್ಣವಾಗಿ “ಸೆಕ್ಸ್, ಡ್ರಗ್ಸ್, ರಾಕ್ ಎನ್ ರೋಲ್’ ನಿಂದ ಕೂಡಿದುದಾಗಿದೆ. “ನನ್ನ ಪುಸ್ತಕದಲ್ಲಿ ಇಮ್ರಾನ್ ವಿರುದ್ಧ ನಾನು ಬರೆದಿರುವ ಎಲ್ಲ ಸಂಗತಿಗಳನ್ನು ಕೋರ್ಟಿನಲ್ಲಿ ಸಾಬೀತು ಪಡಿಸಿ ತೋರಿಸುತ್ತೇನೆ’ ಎಂದು ರೆಹಾಮ್ ಜಿಯೋ ನ್ಯೂಸ್ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಬ್ರಿಟಿಷ್ ಪಾಕಿಸ್ಥಾನೀ ಬ್ರಾಡ್‌ಕಾಸ್ಟ್ ಪತ್ರಕರ್ತೆಯಾಗಿದ್ದ ರೆಹಾಮ್ ಅವರ ಮದುವೆ ಇಮ್ರಾನ್ ಖಾನ್ ಜತೆಗೆ ನಡೆದದ್ದು 2015ರ ಜನವರಿ 6ರಂದು. ಆದರೆ ಈ ಮದುವೆ ಅದೇ ವರ್ಷ ಅಕ್ಟೋಬರ್ 30ರಂದು ಮುರಿದು ಬಿತ್ತು. ಇಮ್ರಾನ್ ಗೆ ಇದು ತನ್ನ ಎರಡನೇ ಮದುವೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.