![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Oct 29, 2022, 1:10 PM IST
ನವದೆಹಲಿ: ಮನುಷ್ಯ ಯಾವುದೇ ವಸ್ತುವನ್ನು ಇನ್ನೊಬ್ಬರ ಬಳಿ ತೆಗೆದುಕೊಂಡು ಅದನ್ನು ವಾಪಸ್ ಕೊಡುವಾಗ ವಿಳಂಬವಾಗುವುದಿದೆ. ಅದು ಹಣವಿರಲಿ ಅಥವಾ ಇನ್ಯಾವುದೇ ವಸ್ತುವಿರಲಿ ವಾಪಸ್ ಕೊಡುವಾಗ ಆತ ಕೆಲವೊಮ್ಮೆ ನಿರ್ಲಕ್ಷ್ಯ ಮಾಡುತ್ತಾನೆ.
ಈ ಮೇಲಿನ ಮಾತಿಗೆ ಉದಾಹರಣೆ ಎಂಬಂತೆ ವ್ಯಕ್ತಿಯೊಬ್ಬ 84 ವರ್ಷದ ಬಳಿಕ ಗ್ರಂಥಾಲಯದ (ಲೈಬ್ರರಿ) ಪುಸ್ತಕವನ್ನು ವಾಪಸ್ ಕೊಟ್ಟಿದ್ದಾರೆ.!ಇದು ಅಚ್ಚರಿ ಅನ್ನಿಸಬಹುದು ಆದರೆ ಈ ಘಟನೆ ನಡೆದಿರುವುದು ಸತ್ಯ. 1938 ರಲ್ಲಿ ಕ್ಯಾಪ್ಟನ್ ವಿಲಿಯಂ ಹ್ಯಾರಿಸನ್ ಲೇಖಕ ರಿಚರ್ಡ್ ಜೆಫರೀಸ್ ಅವರ ʼರೆಡಿ ಡೀರ್ʼ ಎನ್ನುವ ಪುಸ್ತಕವನ್ನು ಅರ್ಲ್ಸ್‌ಡನ್ ಲೈಬ್ರರಿಯಿಂದ ಪಡೆದುಕೊಂಡಿದ್ದರು. 1957 ರಲ್ಲಿ ವಿಲಿಯಂ ಹ್ಯಾರಿಸನ್ ತೀರಿ ಹೋದ ಬಳಿಕ ಅವರ ವಸ್ತುಗಳೊಂದಿಗೆ ಕಪಾಟಿನಲ್ಲಿ ಈ ಪುಸ್ತಕವೂ ಹಾಗೆಯೇ ಉಳಿದಿತ್ತು.
ವಿಲಿಯಂ ಹ್ಯಾರಿಸನ್ ಅವರ ಮೊಮ್ಮಗ ಪ್ಯಾಡಿ ರಿಯೊರ್ಡಾನ್ ಇತ್ತೀಚೆಗೆ ಅಮ್ಮನ ಮನೆಯನ್ನು ಸ್ವಚ್ಛ ಮಾಡುವಾಗ ʼರೆಡ್ ಡೀರ್ʼ ಪುಸ್ತಕ ಕಣ್ಣಿಗೆ ಬಿದ್ದಿದೆ. ಅದರಲ್ಲಿ ಆ ಪುಸ್ತಕವನ್ನು ಅದೇ ವರ್ಷದ ( 1938) ಅಕ್ಟೋಬರ್ 11 ರೊಳಗೆ ಅದನ್ನು ಹಿಂತಿರುಗಿಸಬಹುದೆಂದು ಬರೆಯಲಾಗಿತ್ತು.
ʼರೆಡ್ ಡೀರ್ʼ ಪುಸ್ತಕವನ್ನಿಡಿದುಕೊಂಡು ಪ್ಯಾಡಿ ರಿಯೊರ್ಡಾನ್ ಅರ್ಲ್ಸ್‌ಡನ್ ಲೈಬ್ರರಿಗೆ ಹೋಗಿ ಪುಸ್ತಕವನ್ನು ಹೋಗಿ ವಾಪಸ್ ಕೊಟ್ಟಿದ್ದಾರೆ. ಇದರೊಂದಿಗೆ ಲೈಬ್ರರಿಗೆ ದೇಣಿಗೆಯನ್ನು ನೀಡಿದ್ದಾರೆ. ಈ ದೇಣಿಗೆಯಲ್ಲಿ ಅಂದಿನಿಂದ ಪುಸ್ತಕಕ್ಕೆ ಬಿದ್ದ ದಂಡವೂ ಸೇರಿದೆ. ಪುಸ್ತಕ ವಾಪಸ್ ಕೊಟ್ಟ ಬಳಿಕ ಅರ್ಲ್ಸ್‌ಡನ್ ಲೈಬ್ರರಿ ಈ ಘಟನೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ.
View this post on Instagram
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.