‘ಈ ವೈರಸ್ ನೊಂದಿಗೆ ಬದುಕಲು ಕಲಿಯಿರಿ’: ಕೋವಿಡ್ ನಿರ್ಬಂಧಗಳನ್ನು ರದ್ದು ಮಾಡಿದ ಇಂಗ್ಲೆಂಡ್
Team Udayavani, Feb 22, 2022, 8:41 AM IST
ಲಂಡನ್: ಜನರಿಗೆ ಕಡ್ಡಾಯ ಸ್ವಯಂ-ಪ್ರತ್ಯೇಕತೆ ಸೇರಿದಂತೆ ಇಂಗ್ಲೆಂಡ್ ನಲ್ಲಿನ ಎಲ್ಲಾ ಕೋವಿಡ್ ನಿರ್ಬಂಧಗಳನ್ನು ಕೊನೆಗೊಳಿಸುವುದಾಗಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಸೋಮವಾರ ಹೇಳಿದ್ದಾರೆ.
“ನಿರ್ಬಂಧಗಳು ನಮ್ಮ ಆರ್ಥಿಕತೆ, ನಮ್ಮ ಸಮಾಜ, ನಮ್ಮ ಮಾನಸಿಕ ಯೋಗಕ್ಷೇಮ ಮತ್ತು ನಮ್ಮ ಮಕ್ಕಳ ಜೀವನದ ಅವಕಾಶಗಳ ಮೇಲೆ ಭಾರಿ ನಷ್ಟವನ್ನುಂಟು ಮಾಡುತ್ತವೆ ” ಎಂದು ಜಾನ್ಸನ್ ಸಂಸತ್ತಿಗೆ ತಿಳಿಸಿದರು.
“ಆದ್ದರಿಂದ ನಾವು ಈ ವೈರಸ್‌ನೊಂದಿಗೆ ಬದುಕಲು ಕಲಿಯೋಣ ಮತ್ತು ನಮ್ಮ ಸ್ವಾತಂತ್ರ್ಯವನ್ನು ನಿರ್ಬಂಧಿಸದೆ ನಮ್ಮನ್ನು ಮತ್ತು ಇತರರನ್ನು ರಕ್ಷಿಸಿಕೊಳ್ಳುವುದನ್ನು ಮುಂದುವರಿಸೋಣ” ಎಂದು ಯುಕೆ ಪ್ರಧಾನಿ ಹೇಳಿದರು.
ಕೋವಿಡ್ -19 ನಿಂದ ಯುಕೆಯಲ್ಲಿ 160,00 ಮಂದಿ ಸಾವನ್ನಪ್ಪಿದ್ದಾರೆ. ಇದು ವಿಶ್ವದ ಏಳನೇ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿದೆ.
ಇದನ್ನೂ ಓದಿ:4ನೇ ಹಂತದ ಮತದಾನಕ್ಕೆ ಸಿದ್ಧತೆ; ನಾಳೆ ಒಂಬತ್ತು ಜಿಲ್ಲೆಗಳ 59 ಕ್ಷೇತ್ರಗಳಿಗೆ ಹಕ್ಕು ಚಲಾವಣೆ
ಇನ್ನು ಮುಂದೆ ಕೋವಿಡ್ ಸೋಂಕಿಗೆ ಒಳಗಾದ ವ್ಯಕ್ತಿಯು ಕಡ್ಡಾಯ ಐಸೋಲೇಶನ್ ಗೆ ಒಳಗಾಗಬೇಕಿಲ್ಲ. ಅವರು ಬಯಸಿದಲ್ಲಿ ಮಾತ್ರ ಐಸೋಲೇಶನ್ ಗೆ ಒಳಗಾಗಬಹುದು. ಕೋವಿಡ್ ನಿಯಮಗಳು ಕಡ್ಡಾಯವಲ್ಲ, ಸಲಹಾ ರೂಪದಲ್ಲಿ ಮಾತ್ರ ಇರಲಿದೆ.
ಆದರೆ ಬೋರಿಸ್ ಜಾನ್ಸನ್ ಸರ್ಕಾರದ ಈ ನಿರ್ಧಾರಕ್ಕೆ ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಮುಂದೆ ಸೋಂಕಿನ ಸಂಖ್ಯೆ ಏರಿಕೆಗೆ ಮತ್ತು ಹೊಸ ರೂಪಾಂತರಿಯನ್ನು ಎದುರಿಸುವ ಯೋಜನೆಗೆ ಈ ನಿರ್ಧಾರ ಅಡ್ಡಿಯಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.