ಏರೋಸ್ಪೇಸ್ ಕಲಿಯಲಿದ್ದಾನೆ ಕ್ಯಾಲೆಬ್
ಕ್ಲಿಷ್ಟ ವಿಷಯ ಕಲಿಯುವ ಜಗತ್ತಿನ ಅತ್ಯಂತ ಕಿರಿಯ ವಿದ್ಯಾರ್ಥಿ ಎಂಬ ಹೆಗ್ಗಳಿಕೆ; ಅಮೆರಿಕದ ಜಾರ್ಜಿಯಾ ವಿವಿಗೆ ಶೀಘ್ರ ಪ್ರವೇಶ
Team Udayavani, Oct 15, 2020, 6:14 AM IST
ವಾಷಿಂಗ್ಟನ್: ಅಮೆರಿಕದ ಹನ್ನೆರಡು ವರ್ಷದ ಬಾಲಕ ಕ್ಯಾಲೆಬ್ ಆ್ಯಂಡರ್ಸನ್ ಅಂತಿಂಥ ವ್ಯಕ್ತಿಯಲ್ಲ. ಏರೋಸ್ಪೇಸ್ ಎಂಜಿನಿಯರಿಂಗ್ ಕಲಿಯಲಿರುವ ಜಗತ್ತಿನ ಅತ್ಯಂತ ಕಿರಿಯವ ಎಂಬ ಹೆಗ್ಗಳಿಕೆಗೆ ಆತ ಪಾತ್ರನಾಗಲಿದ್ದಾರೆ. ಸಾಮಾನ್ಯ ವಾಗಿ 18-25 ವರ್ಷ ವಯೋಮಿತಿಯವರು ಅದನ್ನು ಕಲಿಯುತ್ತಾರೆ.
ಆತ ಶೀಘ್ರವೇ ಜಾರ್ಜಿಯಾ ವಿವಿಗೆ ಸೇರ್ಪಡೆಗೊಳ್ಳಲಿದ್ದಾನೆ. ಹೊಸ ಸಾಹಸದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆ್ಯಂಡರ್ಸನ್ ಕ್ಷಿಪ್ರ ಗತಿಯಲ್ಲಿ ಮಾಹಿತಿಗಳನ್ನು ಅರ್ಥ ಮಾಡಿಕೊ ಳ್ಳಲು ತನಗೆ ಸಾಮರ್ಥ್ಯ ವಿದೆ. ಅದುವೇ ತನಗೆ ಧನಾತ್ಮಕವಾಗಿರುವ ಅಂಶ ಎಂದು ಹೇಳಿಕೊಂಡಿದ್ದಾನೆ. ಆತನ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಹೇಳುವಂತೆ ಸಣ್ಣ ವಯಸ್ಸಿ ನಿಂದಲೂ ಆತ ಯಾವುದೇ ಒಂದು ವಿಷಯ ಹೇಳಿದರೆ ಅದನ್ನು ಗಮನ ದಲ್ಲಿಟ್ಟುಕೊಂಡು ಕೇಳುತ್ತಿದ್ದ. ಒಂಭತ್ತು ತಿಂಗಳ ಮಗುವಾಗಿದ್ದಾಗಲೇ ಆತ ಸಂಜ್ಞೆಯ ಮೂಲಕ ಸಂವಹನ ನಡೆಸುವುದನ್ನು ಕಲಿತಿದ್ದ. ವಿವಿಯ ವ್ಯಾಪ್ತಿಯಲ್ಲಿ ಬರುವ ಮ್ಯಾರಿಯೆಟ್ಟಾದಲ್ಲಿರುವ ಚಟ್ಟೊಚಿ ತಾಂತ್ರಿಕ ಕಾಲೇಜಿನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ಅನ್ನು ಆತ ಅಭ್ಯಾಸ ಮಾಡಲಿದ್ದಾನೆ. ವಿವಿಯ ಆಡಳಿತ ಮಂಡಳಿ ಮತ್ತು ಪ್ರಾಧ್ಯಾಪಕ ವರ್ಗ ಜಗತ್ತಿನ ಕಿರಿಯ ವಿದ್ಯಾರ್ಥಿಯನ್ನು ಸ್ವಾಗತಿಸಿ ಭೇಟಿ ಮಾಡಲು ಉತ್ಸುಕರಾಗಿದ್ದಾರೆ.
“ಆತ ನಮ್ಮ ಕೋರ್ಸ್ ಕಲಿಯಲು ಬರುವ ಅರ್ಹ ವಿದ್ಯಾರ್ಥಿಯಾಗಿದ್ದಾನೆ ಮತ್ತು ಆತ ಅದನ್ನು ಯಶಸ್ವಿಯಾಗಿ ಪೂರ್ತಿಗೊಳಿಸುವ ವಿಶ್ವಾಸವಿದೆ’ ಎಂದು ಜಾರ್ಜಿಯ ವಿವಿಯ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ| ಮಾರ್ಕ್ ಕೊಸ್ಟೆಲ್ಲೊ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.