ಬ್ರೆಜಿಲ್ ಪ್ರವಾಹ: ಸಾವಿನ ಸಂಖ್ಯೆ 117ಕ್ಕೆ ಏರಿಕೆ; ಗುಡ್ಡಕುಸಿತದಿಂದ ಮನೆಗಳು ನೆಲಸಮ
Team Udayavani, Feb 19, 2022, 8:20 AM IST
ಪೆಟ್ರೊಪೊಲಿಸ್: ಬ್ರೆಜಿಲ್‌ನ ಪರ್ವತ ನಗರ ಎಂದು ಕರೆಸಿಕೊಳ್ಳುವ ಪೆಟ್ರೊಪೊಲಿಸ್‌ನಲ್ಲಿ ಭಾರೀ ಮಳೆಯಿಂದಾಗಿ ದಿಢೀರ್ ಪ್ರವಾಹ ಮತ್ತು ಭೂಕುಸಿತ ಉಂಟಾಗಿ, ಕನಿಷ್ಠ 117 ಜನರು ಸಾವನ್ನಪ್ಪಿದ್ದಾರೆ. ಇನ್ನೂ 116 ಮಂದಿ ಕಾಣೆಯಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ರಿಯೊ ದೆ ಜನೆರಿಯೋ ಸರ್ಕಾರ ತಿಳಿಸಿದೆ.
ಪೆಟ್ರೊಪೊಲಿಸ್‌ನಲ್ಲಿ ಬುಧವಾರ ಕೇವಲ ಮೂರು ಗಂಟೆಗಳಲ್ಲಿ 10 ಇಂಚಿಗೂ ಅಧಿಕ ಮಳೆಯಾಗಿದೆ. ಕಳೆದ ಒಂದು ತಿಂಗಳಲ್ಲಿ ಸುರಿದ ಮಳೆ ಪ್ರಮಾಣವನ್ನೂ ಮೀರಿದ ಮಳೆ ಒಂದೇ ದಿನದಲ್ಲಿ ಸುರಿದಿದೆ. ಪರಿಣಾಮ ಅನೇಕ ಗುಡ್ಡಗಳು ಕುಸಿದು, ಅದರ ಕೆಳಗಿದ್ದ ಮನೆಗಳೆಲ್ಲವೂ ಭೂಸಮಾಧಿಯಾಗಿವೆ. ಕನಿಷ್ಠ 80 ಮನೆಗಳು ಮಣ್ಣು ಪಾಲಾಗಿವೆ. ನೂರಾರು ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿವೆ. 400ಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ.
ತುರ್ತು ಪರಿಸ್ಥಿತಿ ಘೋಷಣೆ:
1932ರ ನಂತರ ಇದೇ ಮೊದಲ ಬಾರಿಗೆ ಪೆಟ್ರೊಪೊಲಿಸ್‌ನಲ್ಲಿ ಈ ಪ್ರಮಾಣದಲ್ಲಿ ಮಳೆಯಾಗಿದೆ. 3 ಲಕ್ಷ ಜನರಿರುವ 68 ಕಿ.ಮೀ ವಿಸ್ತೀರ್ಣದ ಪೂರ್ತಿ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ವಿಡಿಯೋಗಳು ವೈರಲ್:
ಪೆಟ್ರೊಪೊಲಿಸ್ ಪ್ರವಾಹ ಮತ್ತು ಭೂಕುಸಿತದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ಆಗಿವೆ. ಮುಳುಗುತ್ತಿರುವ ಎರಡು ಬಸ್ಸುಗಳಿಂದ ಜನರು ಎದ್ದು ಬರುತ್ತಿರುವುದು, ಗುಡ್ಡವೊಂದು ಕುಸಿದು, ಮನೆಗಳೆಲ್ಲ ನೆಲಸಮವಾಗುತ್ತಿರುವ ಅನೇಕ ವಿಡಿಯೋಗಳು ಎಲ್ಲೆಡೆ ಹರಿದಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.