ಕೊನೆಗೂ ಸೋಂಕಿತರ ಸಾವಿನ ಲೆಕ್ಕ ಆರಂಭಿಸಿದ ಬ್ರೆಜಿಲ್
Team Udayavani, Jun 11, 2020, 10:08 AM IST
ಸಾಂದರ್ಭಿಕ ಚಿತ್ರ
ರಯೋ ಡಿ ಜನೈರೊ: ವಿಶ್ವ ಆರೋಗ್ಯ ಸಂಸ್ಥೆಯಿಂದ ಛೀಮಾರಿ ಹಾಕಿಸಿಕೊಂಡ ಬಳಿಕ ಬ್ರೆಜಿಲ್ ಮತ್ತೆ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಲೆಕ್ಕ ಮುಂದಿಡಲು ಆರಂಭಿಸಿದೆ. ಸೋಂಕಿತರ ಸಾವಿನ ಮಾಹಿತಿ ನೀಡುವ ಪ್ರಕ್ರಿಯೆಗೆ ಅಧ್ಯಕ್ಷ ಜೈರ್ ಬೊಲ್ಸೊನಾರೋ ಶುಕ್ರವಾರದಂದೇ ತಡೆ ನೀಡಿದ್ದರು. ಡಬ್ಲ್ಯೂಎಚ್‌ಒ ಅಲ್ಲದೆ ಹಲವು ದೇಶಗಳು “ಬ್ರೆಜಿಲ್ ಸೋಂಕಿತರ ಸಾವುಗಳ ಲೆಕ್ಕ ಮುಚ್ಚಿಹಾಕುತ್ತಿದೆ’ ಎಂದು ಆರೋಪಿಸಿದ್ದವು. ಸುಪ್ರಿಂಕೋರ್ಟ್ ಕೂಡ, “ಸರಕಾರ ಹಳೇ ಪ್ರಕ್ರಿಯೆಗೆ ಮರಳಬೇಕು’ ಎಂದು ಆದೇಶಿಸಿತ್ತು. ಕೊನೆಗೂ ಎಲ್ಲರ ಒತ್ತಾಯಕ್ಕೆ ಮಣಿದ ಬ್ರೆಜಿಲ್ ಮಂಗಳವಾರದಿಂದ ಒಟ್ಟು ಸಾವುಗಳ ಸಂಖ್ಯೆ ಪ್ರಕಟಿಸುವುದನ್ನು ಪುನರಾರಂಭಿಸಿದೆ. ಅಧ್ಯಕ್ಷ ಜೈರ್ ಬೊಲ್ಸೊನಾರೋ ಲಾಕ್‌ಡೌನ್‌ಗೆ ತೀವ್ರ ವಿರೋಧ ನಿಲುವು ಹೊಂದಿದ್ದಾರೆ. “ಲಾಕ್‌ಡೌನ್‌ನಿಂದ ಆರ್ಥಿಕ ನಷ್ಟವೇ ಹೊರತು ಸೋಂಕಿತರ ಸಾವುಗಳೇನೂ ನಿಲ್ಲುವುದಿಲ್ಲ’ ಎನ್ನುವ ವಾದ ಈ ಅಧ್ಯಕ್ಷರದ್ದು!