ವೈರಲ್ ವಿಡಿಯೋ : ಬಿದ್ದು-ಎದ್ದು ಕುಣಿದ ವಧು-ವರರು
Team Udayavani, Sep 28, 2021, 8:24 AM IST
ಮದುವೆಯಲ್ಲಿ ಮದು ಮಕ್ಕಳು ಚಂದವಾಗಿ ಸಿಂಗರಿಸಿಕೊಂಡು ನೆರೆದಿದ್ದ ಜನರ ಮುಂದೆ ಗ್ರ್ಯಾಂಡ್ ಎಂಟ್ರಿ ಕೊಡೋದು ಸಹಜ. ಆದ್ರೆ ಕೆಲವುಬಾರಿ ನಾವು ಅಂದುಕೊಂಡಂತೆ ಆಗದೆ ಬೇರೆ ಏನೋ ನಡೆದು ನೋಡುಗರಿಗೆ ಹಾಸ್ಯಮಯವಾಗಿ ಕಾಣಿಸುತ್ತದೆ. ಇದಕ್ಕೆ ಉದಾಹರಣೆಯೆಂಬಂತೆ ಒಂದು ವಿಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
ಮದುವೆ ಎಲ್ಲರ ಕನಸು. ಆ ಕನಸಿನ ದಿನದಂದು ಹೀಗೇ ಕುಣಿದಾಡಬೇಕೆಂದು ಯೋಜನೆಯನ್ನೂ ಹಾಕಿ ಕೊಂಡಿರುತ್ತಾರೆ. ಅದೇ ರೀತಿ ಮದುವೆಯ ದಿನದಂದು ವೇದಿಕೆ ಮೇಲೆ ಬಂದು ಕುಣಿದಾಡಲುತಯಾರಿ ನಡೆ ಸಿಕೊಂಡಿದ್ದ ಜೋಡಿಯೊಂದರ ಪ್ಲ್ರಾನ್ ಉಲ್ಟಾ ಆಗಿರುವ ಘಟನೆ ನಡೆದಿದೆ.
ವೇದಿಕೆಗೆ ಬರುವಾಗ ಕೈ ಹಿಡಿದು ಕುಣಿದಾಡುತ್ತಾ ಬರುತ್ತಾರೆ. ವೇದಿಕೆಗೆ ಬಂದೊಡನೆ ವರ, ವಧುವನ್ನು ಬೆನ್ನ ಮೇಲೆ ಹೊತ್ತು ಕುಣಿದಾಡಲು ಮುಂದಾಗುತ್ತಾನೆ. ಅಷ್ಟರಲ್ಲಿ ಕಾಲು ಜಾರಿ ವೇದಿಕೆಯಿಂದ ಕೆಳಗೆ ಬೀಳುತ್ತಾನೆ. ಬಿದ್ದರೂ ಮತ್ತೆ ಮೇಲೇಳುವ ಜೋಡಿ ಅದೇ ಖುಷಿಯಲ್ಲಿ ನೃತ್ಯ ಮುಂದುವರಿಸುತ್ತದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಕ್ಷಾಂತರ ಜನರು ವಿಡಿಯೋವನ್ನು ಮೆಚ್ಚಿ ಕೊಂಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.