ಬ್ರಿಟನ್ನಲ್ಲಿ ದಾಖಲೆಯ ಉಷ್ಣ: ಇತಿಹಾಸದಲ್ಲಿ ತಾಪಮಾನ ಏರಿರುವುದು ಇದೇ ಮೊದಲು
ಸೋಮವಾರ- ಮಂಗಳವಾರ 40 ಡಿಗ್ರಿ ಸೆಲ್ಸಿಯಸ್
Team Udayavani, Jul 19, 2022, 7:20 AM IST
ಲಂಡನ್: ಇತ್ತೀಚೆಗೆ ನಮ್ಮ ಉತ್ತರ ಭಾರತವನ್ನು ಕಾಡಿದ್ದ ಉಷ್ಣ ಹವೆಯ ಕಾಟ, ಬ್ರಿಟನ್ನನ್ನೂ ಆವರಿಸಿದೆ. ಸೋಮವಾರ, ಮಂಗಳವಾರ ಅಲ್ಲಿನ ವಾತಾವರಣ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ಗೆ ಏರಲಿದೆ ಎಂದು ಬ್ರಿಟನ್ ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಯುನೈಟೆಡ್ ಕಿಂಗ್ಡಮ್ನ ಇತಿಹಾಸದಲ್ಲೇ ಹೀಗಾಗುತ್ತಿರುವುದು ಇದೇ ಮೊದಲು.
ಹಾಗಾಗಿ, ಅಲ್ಲಿನ ಸರ್ಕಾರ ಸೋಮವಾರ ಮತ್ತು ಮಂಗಳವಾರದ (ಜು. 18-19) ಮಟ್ಟಿಗೆ “ರಾಷ್ಟ್ರೀಯ ತುರ್ತು ಪರಿಸ್ಥಿತಿ’ ಘೋಷಿಸಿದೆ.
2019ರಲ್ಲಿ ಬ್ರಿಟನ್ನಲ್ಲಿ ದಾಖಲಾಗಿದ್ದ 38.7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, ಆ ದೇಶದ ಇತಿಹಾಸದಲ್ಲೇ ದಾಖಲಾಗಿರುವ ಗರಿಷ್ಠ ಉಷ್ಣಾಂಶ ಎಂದೆನಿಸಿತ್ತು. ಆದರೀಗ, ಅದನ್ನೂ ಮೀರಿದ ತಾಪಮಾನ ದಾಖಲಾಗಿದೆ.
ಜನರಿಗೆ ಎಚ್ಚರಿಕೆ
ಆರೋಗ್ಯ ಇಲಾಖೆ, ಲೆವೆಲ್-4 ಮುನ್ನೆಚ್ಚರಿಕಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರು ಸಾಧ್ಯವಾದಷ್ಟೂ ಎರಡು ದಿನ ಮನೆಯಲ್ಲೇ ಇರಬೇಕು ಎಂದು ಸೂಚಿಸಲಾಗಿದೆ. ಮೆಟ್ರೋ ರೈಲುಗಳ ವೇಗಕ್ಕೆ ಕಡಿವಾಣ ಹಾಕಲಾಗಿದೆ.
ಭಾರತದಲ್ಲಿ 40 ಡಿಗ್ರಿ ಆಜುಬಾಜಿಗೆ ಉಷ್ಣಾಂಶ ಬಂದರೆ ಅಷ್ಟೇನೂ ದೊಡ್ಡದು ಎನ್ನಿಸಲ್ಲ. ಏಕೆಂದರೆ, ರಾಜಸ್ಥಾನದ ಫಲೋಡಿ ಎಂಬಲ್ಲಿ 2016ರಲ್ಲಿ 51 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಬೇಸಿಗೆಯಲ್ಲಿ ನಮ್ಮಲ್ಲಿ 35ರಿಂದ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುವುದು ಸಾಮಾನ್ಯ ಸಂಗತಿ. ಆದರೆ, ಯುನೈಟೆಡ್ ಕಿಂಗ್ಡಮ್ನಲ್ಲಿನ ಪರಿಸ್ಥಿತಿ ಹಾಗಲ್ಲ.
ಸದಾ ತಂಪು ವಾತಾವರಣ. ರಾತ್ರಿಯ ವೇಳೆ ಇಬ್ಬನಿ ಅಥವಾ ಮಂಜು ಸುರಿಯುವಿಕೆ ಅಲ್ಲಿ ಮಾಮೂಲು. ಹಾಗಾಗಿ, 40 ಡಿಗ್ರಿ ಸೆಲ್ಸಿಯಸ್ ಉಷ್ಣ ಎಂದ ಕೂಡಲೇ ಇಷ್ಟು ಕಟ್ಟುನಿಟ್ಟಿನ ಸೂಚನೆಗಳು ರವಾನೆಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.