ಅಪ್ಪನೇ ಅಮ್ಮ! ಮಗು ಹಡೆದ “ಬ್ರಿಟನ್ ಪುರುಷ”
Team Udayavani, Jul 10, 2017, 3:50 AM IST
ಲಂಡನ್: ಗಂಡು ಎಲ್ಲಿಯಾದರೂ ಗರ್ಭ ಧರಿಸಿ ಮಗುವಿಗೆ ಜನ್ಮ ನೀಡುವುದುಂಟೇ..? ಈಗಿನ ಕಾಲದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳುತ್ತೀರಾ? ಹೌದು, ಇದು ಗಂಡು ಹೆಣ್ಣಾಗಿ ಲಿಂಗ ಪರಿವರ್ತನೆ ಮಾಡಿಸಿ, ಗರ್ಭಧರಿಸಿ ಮಗು ಹೆತ್ತ ಪ್ರಕರಣ.
ಬ್ರಿಟನ್ನ ಮೊದಲನೇ ಪ್ರಕರಣ ಇದಾ ಗಿದ್ದು, ಲಿಂಗ ಪರಿವರ್ತನೆ ಮಾಡಿಸಿ ಕೊಂಡ 21 ವರ್ಷದ ವ್ಯಕ್ತಿ ಗರ್ಭಧರಿಸಿ, ಮಗುವನ್ನೂ ಹೆತ್ತಿದ್ದಾರೆ. ಜೂ.16ರಂದು ಹೇಡನ್ ಕ್ರಾಸ್ ಮುದ್ದಾದ ಟ್ರಿನಿಟಿ ಲೇಗ್ ಹೆಸರಿನ ಹೆಣ್ಮಗುವಿಗೆ ಶಸ್ತ್ರಚಿಕಿತ್ಸೆ ಮುಖಾಂತರ ಜನ್ಮ ನೀಡಿದ್ದಾರೆ. ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಹೇಡನ್, ಮಗು ದೊಡ್ಡ ದಾದ ಮೇಲೆ ಕೆಲಸಕ್ಕೆ ಮರಳುತ್ತಾರಂತೆ.
2008ರಲ್ಲಿ ಅಮೆರಿಕದ ಥೋಮಸ್ ಬೀಟೈ ಎಂಬುವವರು ಲಿಂಗ ಪರಿವರ್ತನೆ ಮಾಡಿಸಿ0 ಕೊಂಡು ಮಗುವನ್ನು ಹೆತ್ತಿದ್ದರು. ಥೋಮಸ್ ಹುಟ್ಟಿದಾಗ ಮಹಿಳೆಯರ ರೀತಿ ಗರ್ಭ ಇದ್ದರೂ, ಪುರುಷರಾಗಿದ್ದರು. ಬಳಿಕ ಅವರು ಸಂಪೂರ್ಣ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದರು.
ಆದರೆ ಮಗು ಪಡೆಯಲು ತಮ್ಮದೇ ವೀರ್ಯಾಣು ಪಡೆಯುವ ಇಚ್ಛೆ ಈಡೇರಿರಲಿಲ್ಲ. ಬ್ರಿಟನ್ನ ರಾಷ್ಟ್ರೀಯ ಆರೋಗ್ಯ ಸೇವೆಗೆ ಸೇರಿದ ಆಸ್ಪತ್ರೆ, ಈ ಪ್ರಕ್ರಿಯೆ ನಡೆಸಲು ನಿರಾಕರಿಸಿತ್ತು. ಕೊನೆಗೆ ಹೇಡನ್ ಫೇಸ್ಬುಕ್ ಮುಖಾಂತರ ದಾನಿಯೊಬ್ಬರನ್ನು ಹುಡುಕಿ ವೀರ್ಯ ಪಡೆದಿದ್ದರು. 3 ವರ್ಷಗಳ ಹಿಂದೆ ಹೇಡನ್ ಲಿಂಗ ಪರಿವರ್ತನೆ ಮಾಡಿಸಿಕೊಂಡಿ ದ್ದರು. ಈಗ ಕಾನೂನು ಪ್ರಕಾರ ಹೆಣ್ಣಾಗಿಯೇ ಜೀವನ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.