ಭಾರತದ ವಿದ್ಯಾರ್ಥಿಗಳಿಗೆ ಬ್ರಿಟನ್ ವೀಸಾ ಇನ್ನು ಕಷ್ಟ
Team Udayavani, Jun 17, 2018, 6:00 AM IST
ಲಂಡನ್: ಬ್ರಿಟನ್ ಸರ್ಕಾರವು ಶೈಕ್ಷಣಿಕ ವೀಸಾ ನೀತಿ ಬದಲಾವಣೆ ಮಾಡಿದೆ. ಅದರಲ್ಲಿ ಭದ್ರತಾ ತಪಾಸಣೆಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡಿಲ್ಲ. ಆದರೆ ಈ ಪಟ್ಟಿಯಲ್ಲಿ ಚೀನಾವನ್ನು ಸೇರಿಸಿದೆ. ಈ ಕ್ರಮಕ್ಕೆ ಭಾರತ ವಿದ್ಯಾರ್ಥಿಗಳು ಪ್ರಬಲವಾಗಿ ಆಕ್ಷೇಪ ವ್ಯಕ್ತಪಡಿಸಿ, ಪ್ರತಿಭಟಿಸಿದ್ದಾರೆ. ಬ್ರಿಟನ್ ಸರ್ಕಾರದ ಕ್ರಮದಿಂದಾಗಿ ಯುನೈಟೆಡ್ ಕಿಂಗ್‌ಡಮ್‌ನ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣಕ್ಕಾಗಿ ತೆರಳುವ ಭಾರತೀಯ ವಿದ್ಯಾರ್ಥಿಗಳು ಈ ಹಿಂದಿನಂತೆಯೇ ಹೆಚ್ಚಿನ ಮಾನದಂಡಗಳನ್ನು ಹೊಂದಿರಬೇಕಾಗುತ್ತದೆ. ಚೀನಾ, ಬಹೆನ್ ಮತ್ತು ಸರ್ಬಿಯಾ ಸೇರಿದಂತೆ ಸುಮಾರು 25 ದೇಶಗಳನ್ನು ಟೈರ್ 4 ವಿನಾಯಿತಿ ಸ್ಲಾéಬ್‌ಗ ಸೇರಿಸಿದೆ. ಆದರೆ ಭಾರತವನ್ನು ಇದರಿಂದ ಹೊರಗಿಟ್ಟಿದೆ. ಜುಲೈ 6 ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ.
ಟೈರ್ 4 ವಿನಾಯಿತಿ ಸ್ಲಾಬ್‌ನಲ್ಲಿ ಭಾರತವನ್ನು ಸೇರಿಸಿದ್ದರೆ, ಭಾರತೀಯ ವಿದ್ಯಾರ್ಥಿಗಳು ಇಂಗ್ಲೆಂಡ್‌ಗೆ ತೆರಳುವುದು ಸುಲಭವಾಗುತ್ತಿತ್ತು. ಅಲ್ಲದೆ ಕಡಿಮೆ ಶೈಕ್ಷಣಿಕ ಸಾಧನೆಯಿದ್ದರೂ ಮತ್ತು ಕಡಿಮೆ ಭದ್ರತಾ ತಪಾಸಣೆಯಿದ್ದರೂ ಇಂಗ್ಲೆಂಡ್‌ಗೆ ತೆರಳಬಹುದಾಗಿದೆ. ಇಂಗ್ಲೆಂಡ್ ಹೊಸ ನೀತಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಇಂಗ್ಲೆಂಡ್ ಮಾಡಿದ ಅನ್ಯಾಯ ಇದು, ಈ ನಿರ್ಧಾರವು ಭಾರತಕ್ಕೆ ತಪ್ಪು ಸಂದೇಶವನ್ನು ಕಳುಹಿಸುತ್ತದೆ ಎಂದು ಭಾರತೀಯ ಮೂಲದ ಉದ್ಯಮಿ ಲಾರ್ಡ್ ಕರಣ್ ಬಿಲಿಮೋರಿಯಾ ಹೇಳಿದ್ದಾರೆ.
ಈ ಕ್ರಮ ಭಾರತಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದು ಮನವರಿಕೆಯಾಗಿದೆ. ಟೈರ್ 4 ರಾಷ್ಟ್ರಗಳ ಪಟ್ಟಿಯಿಂದ ಭಾರತವನ್ನು ಹೊರಗಿಟ್ಟದ್ದು ಸರಿಯಲ್ಲ. ಯು.ಕೆ.ಸರ್ಕಾರದಿಂದ ತಪ್ಪಾಗಿದೆ.
ಸಜ್ಜದ್ ಜಾವೇದ್, ಯು.ಕೆ.ಗೃಹ ಕಾರ್ಯದರ್ಶಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.