ಕಂಪ್ಯೂಟರ್ ಸಮಸ್ಯೆಗೆ ಭಾರತದತ್ತ ಬೆಟ್ಟು
Team Udayavani, May 29, 2017, 12:35 PM IST
ಲಂಡನ್: ಜಾಗತಿಕವಾಗಿ ಕಂಪ್ಯೂಟರ್ ಸಮಸ್ಯೆ ಬಂದ ಹಿನ್ನೆಲೆಯಲ್ಲಿ ಇಲ್ಲಿನ ಹೀತ್ರೂ ವಿಮಾನ ನಿಲ್ದಾಣ ಬಂದ್ ಆಗಿದ್ದು, ಎಲ್ಲ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಪ್ರಯಾಣಿಕರ ಗೋಳು ಹೇಳತೀರದಾಗಿದ್ದು, ಕಂಪ್ಯೂಟರ್ ವ್ಯವಸ್ಥೆ ಸರಿಪಡಿಸಲು ಯತ್ನಿಸಲಾಗುತ್ತಿದೆ. ಅಲ್ಲದೆ ಭಾರತಕ್ಕೆ ಔಟ್ಸೋರ್ಸ್ ಕೊಟ್ಟಿರುವುದರಿಂದಲೇ ಈ ಸಮಸ್ಯೆ ಉದ್ಭವವಾಗಿದೆ ಎಂದು ಅಲ್ಲಿನ ನೌಕರರ ಒಕ್ಕೂಟ ಆರೋಪಿಸಿದೆ.
ಲಂಡನ್ನ ಗ್ಯಾಟ್ವಿಕ್ ಏರ್ಪೋರ್ಟಲ್ಲೂ ಇದೇ ಸಮಸ್ಯೆ ಉಧ್ಭವಿಸಿದೆ. ಹೀತ್ರೂದಲ್ಲಿ ಮಾತ್ರ ಹಾರಾಟ ರದ್ದು ಮಾಡಲಾಗಿದೆ ಎಂದು ಏರ್ವೇಸ್ ಹೇಳಿದೆ. ಕಳೆದ ವರ್ಷ ಬ್ರಿಟಿಷ್ ಏರ್ವೇಸ್, ಇಲ್ಲಿನ ಐಟಿ ಸಿಬಂದಿಯನ್ನು ಮನೆಗೆ ಕಳುಹಿಸಿ ಭಾರತಕ್ಕೆ ಹೊರಗುತ್ತಿಗೆ ನೀಡಿದೆ. ಈಗ ಎದುರಾದ ಸಮಸ್ಯೆಗೆ ಇದುವೇ ಕಾರಣ ಎನ್ನುವುದು ಕಾರ್ಮಿಕ ಸಂಘಟನೆಗಳ ಆರೋಪ. ಆದರೆ ಇದನ್ನು ಏರ್ವೇಸ್ ನಿರಾಕರಿಸಿದ್ದು, ವಿದ್ಯುತ್ ಸಮಸ್ಯೆಯಿಂದ ಹೀಗಾಗಿರಬಹುದು ಎಂದಿದೆ. ರೋಮ್, ಪ್ರಾಗ್, ಮಿಲನ್, ಸ್ಟಾಕ್ಹೋಂನಲ್ಲೂ ಇದೇ ಸ್ಥಿತಿ ಉಂಟಾಗಿದೆ. ಆದರೆ ಯಾರೂ ವೈರಸ್ ದಾಳಿ ಬಗ್ಗೆ ಸ್ಪಷ್ಟಪಡಿಸುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.