ಲೇಖಕ ಇಶಿಗುರೋ ಮುಡಿಗೆ ಪ್ರತಿಷ್ಠಿತ ಸಾಹಿತ್ಯ ನೊಬೆಲ್ ಪ್ರಶಸ್ತಿ
Team Udayavani, Oct 5, 2017, 5:44 PM IST
ಸ್ಟಾಕ್ ಹೋಮ್: ಜಪಾನ್ ಮೂಲದ ಇಂಗ್ಲಿಷ್ ಕಾದಂಬರಿಕಾರ ಕಝುವೋ ಇಶಿಗುರೋ ಅವರು ಪ್ರಸಕ್ತ ಸಾಲಿನ ಪ್ರತಿಷ್ಠಿತ ಸಾಹಿತ್ಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಝುವೋ ಇಶಿಗುರೋ ಅವರು 8 ಪುಸ್ತಕಗಳನ್ನು ಬರೆದಿದ್ದಾರೆ. ಅಲ್ಲದೇ ಸಿನಿಮಾ ಹಾಗೂ ಟೆಲಿವಿಷನ್ ಗೆ ಕಥೆ ಬರೆಯುವ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ.
ಗುರುವಾರ ಸ್ವಿಡಿಶ್ ಅಕಾಡೆಮಿ ಪ್ರಶಸ್ತಿಯನ್ನು ಘೋಷಿಸಿದೆ. 9 ಮಿಲಿಯನ್ (1.1 ಮಿಲಿಯನ್ ಡಾಲರ್) ಮೊತ್ತದ ಪ್ರಶಸ್ತಿ ಇಶಿಗುರೋ ಮುಡಿಗೇರಿದಂತಾಗಿದೆ.
ಡೈನಾಮೈಟ್ ಅನ್ನು ಕಂಡು ಹಿಡಿದಿದ್ದ ಅಲ್ಫ್ರೆಡ್ ನೋಬೆಲ್ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು, 1901ರಿಂದ ವಿಜ್ಞಾನ, ಸಾಹಿತ್ಯ ಹಾಗೂ ಶಾಂತಿ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದೆ. ಜಪಾನ್ ನ ನಾಗಸಾಕಿಯಲ್ಲಿ 1954ರ ನವೆಂಬರ್ 8ರಂದು ಇಶಿಗುರೋ ಜನಿಸಿದ್ದರು. ಇಶಿಗುರೋಗೆ 5 ವರ್ಷದ ಬಾಲಕನಾಗಿದ್ದಾಗಲೇ ಅವರ ಕುಟುಂಬ ಅಮೆರಿಕಕ್ಕೆ ವಲಸೆ ಬಂದಿತ್ತು. ಇಶಿಗುರೋ ಸಾಹಿತಿ, ಲೇಖಕ, ಅಂಕಣಕಾರ ಹಾಗೂ ಚಿತ್ರ ಕಥೆಗಾರರಾಗಿ ಗುರುತಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.