ಬ್ರೆಕ್ಸಿಟ್: ಸಂಸತ್ತಿನಲ್ಲಿ ವಿಶ್ವಾಸ ಮತ ಗೆದ್ದ ಬ್ರಿಟನ್ ಪ್ರಧಾನಿ
Team Udayavani, Jan 17, 2019, 6:15 AM IST
ಲಂಡನ್ : ಅತ್ಯಂತ ಕುತೂಹಲಕಾರಿಯಾಗಿದ್ದ ವಿವಾದಾತ್ಮಕ ಬ್ರೆಕ್ಸಿಟ್ ವಿಷಯದಲ್ಲಿನ ವಿಶ್ವಾಸ ಮತವನ್ನು ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರು ಬ್ರಿಟನ್ ಸಂಸತ್ತಿನಲ್ಲಿ ಗೆದ್ದುಕೊಂಡಿದ್ದಾರೆ.
ಬ್ರಿಟನ್ ಸಂಸದರು ತಮ್ಮ ಎಲ್ಲ ಸ್ವ-ಹಿತಾಸಕ್ತಿಗಳನ್ನು ಬದಿಗಿರಿಸಿ ಬ್ರೆಕ್ಸಿಟ್ ಯಶಸ್ಸಿಗೆ ರಚನಾತ್ಮಕವಾಗಿ ಶ್ರಮಿಸಬೇಕು ಎಂದು ತೆರೇಸಾ ಮೇ ಕರೆ ನೀಡಿದ್ದಾರೆ.
ಬ್ರಿಟನ್ ಪ್ರಧಾನಿ ಮೇ ಅವರು ವಿಶ್ವಾಸ ಮತವನ್ನು 325 – 306 ಮತಗಳ ಅಂತರದಲ್ಲಿ, 19 ಮತಗಳ ಬಹುಮತದೊಂದಿಗೆ ನಿನ್ನೆ ಬುಧವಾರ ಗೆದ್ದುಕೊಂಡರು. ಒಂದು ದಿನದ ಹಿಂದಷ್ಟೇ ಅವರ ಸರಕಾರಕ್ಕೆ ಐತಿಹಾಸಿಕ ಸಂಸತ್ ಸೋಲು ಉಂಟಾಗಿ ತೀವ್ರ ಮುಖಭಂಗವಾಗಿತ್ತು. ಐರೋಪ್ಯ ಒಕ್ಕೂಟದಿಂದ ಹೊರಬರುವ ಉಪಕ್ರಮವೇ ಬ್ರೆಕ್ಸಿಟ್ ಆಗಿದೆ.
10 ಡೌನಿಂಗ್ ಸ್ಟ್ರೀಟ್‌ನ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಪ್ರಧಾನಿ ಮೇ ಅವರು, ಸರಕಾರ ಸಂಸತ್ತಿನಲ್ಲಿ ವಿಶ್ವಾಸ ಮತ ಗೆದ್ದಿದೆ; ಇದರಿಂದಾಗಿ ಬ್ರೆಕ್ಸಿಟ್ ವಿಷಯದಲ್ಲಿ ಮುಂದಡಿ ಇಡುವುದಕ್ಕೆ ನಮಗೆಲ್ಲ ಅವಕಾಶವನ್ನು ಕಲ್ಪಿಸಿದೆ. ಬ್ರಿಟನ್ ಮಹಾಜನತೆ ಬ್ರೆಕ್ಸಿಟ್ ಪೂರೈಸುವ ದಿಶೆಯಲ್ಲಿ ಮುಂದಡಿ ಇಡಬೇಕೆಂದು ಬಯಸುತ್ತದೆ. ಅಂತೆಯೇ ನಾವು ನಡೆದುಕೊಳ್ಳಬೇಕಿದೆ. ಆ ಪ್ರಕಾರ ನಾವೆಲ್ಲ ನಮ್ಮ ನಮ್ಮ ಸ್ವಹಿತಾಸಕ್ತಿಯನ್ನು ಬದಿಗಿಟ್ಟು ಪ್ರಜೆಗಳ ಆಶೋತ್ತರಕ್ಕೆ ತಕ್ಕಂತೆ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru Kambala; ಬಂಗ್ರಕೂಳೂರಿನಲ್ಲಿ ಚಾಲನೆ, ನಾಳೆ ಸಮಾರೋಪ
Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.