ಬ್ರಿಟನ್ ರಾಣಿಯ ಆಳ್ವಿಕೆಗೆ 70 ವರ್ಷ:ಪ್ಲ್ಯಾಟಿನಮ್ ಸಡಗರಕ್ಕೆ ಬಕಿಂಗ್ಹ್ಯಾಮ್ ಅರಮನೆ ಸಿದ್ಧತೆ

ರಾಣಿ ಎಲಿಜಬೆತ್ || ರ ಎಪ್ಪತ್ತರ ಸಂಭ್ರಮದ ಕಾರ್ಯಕ್ರಮ ಅರಮನೆಯಿಂದ ಬಿಬಿಸಿ ವಿಶೇಷ ಲೈವ್ ಪ್ರಸಾರ

Team Udayavani, Jun 2, 2021, 8:26 PM IST

Buckingham Palace Unveils Queen’s Platinum Jubilee Plans For June 2022

ಲಂಡನ್ : ಬ್ರಿಟನ್ ನ ರಾಣಿ ಎಲಿಜಬೆತ್ || ಅವರ ಆಳ್ವಿಕೆಯ 70ನೇ ವರ್ಷದ ತಯಾರಿಯಲ್ಲಿ ಬಕಿಂಗ್ಹ್ಯಾಮ್  ಅರಮನೆ ಸಜ್ಜಾಗುತ್ತಿದೆ. ಎಲಿಜಬೆತ್ ಬಕಿಂಗ್ಹ್ಯಾಮ್ ಅರಮನೆಯ ರಾಣಿಯಾಗಿ ಆಳ್ವಿಕೆ ಆರಂಭಿಸಿ ಬರುವ 2022ಕ್ಕೆ ಎಪ್ಪತ್ತು ವರ್ಷ ಪೂರೈಸಲಿದ್ದು, 2022ರ ಜೂನ್ ನಲ್ಲಿ  ಪ್ಲ್ಯಾಟಿನಮ್ ಸಂಭ್ರಮಾಚರಣೆಯನ್ನು ಆಯೋಜಿಸುವ ಉದ್ದೇಶದಿಂದ ಅರಮನೆ ಸಿದ್ಧತೆಯಲ್ಲಿದೆ.

ವಿಶ್ವದ ಶ್ರೇಷ್ಠ ಸೆಲೆಬ್ರಟಿಗಳೊಂದಿಗೆ ನಾಲ್ಕು ದಿನಗಳ ಸಂಗೀತ ಕಚೇರಿಯನ್ನೊಳಗೊಂಡು ಹಲವಾರು ಕಾರ್ಯಕ್ರಮಗಳಿಗೆ ಈಗಾಗಲೇ ರೂಪುರೇಷೆ ತಯಾರಿ ಹಂತದಲ್ಲಿದ್ದು, ಬ್ರಿಟನ್ ನ ಬಕಿಂಗ್ಹ್ಯಾಮ್ ಅರಮನೆಯ ರಾಣಿಯಾಗಿ 70 ವರ್ಷ ಪೂರೈಸಿದ ಮೊದಲ ರಾಣಿಯಾಗಿ ಎಲಿಜಬೆತ್ || ಸಂಭ್ರಮದ ದಿನಗಳನ್ನು ಎದುರುಗಾಣುತ್ತಿದ್ದಾರೆ.

ಇದನ್ನೂ ಓದಿ :  ಉಡುಪಿ ಜಿಲ್ಲೆಯ 33 ಗ್ರಾಮಗಳು ಸ್ತಬ್ಧ: ಮೊದಲ ದಿನದ ಸಂಪೂರ್ಣ ಲಾಕ್‌ಡೌನ್‌ ಯಶಸ್ವಿ

95 ವರ್ಷ ವಯಸ್ಸಿನ ರಾಣಿ ಎಲಿಜಬೆತ್ ಫೆಬ್ರವರಿ 6, 1952 ರಂದು ತನ್ನ ತಂದೆ ಕಿಂಗ್ ಜಾರ್ಜ್ VI ರ ನಂತರ  25 ವರ್ಷದವರಾಗಿದ್ದಾಗ ರಾಣಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಈ ಕುರಿತಾಗಿ ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡ ದಿ ರಾಯಲ್ ಫ್ಯಾಮಿಲಿ,  ಮುಂದಿನ ವರ್ಷ ಜೂನ್ 2-5ರ ನಡುವೆ ಪ್ಲ್ಯಾಟಿನಮ್ ಜುಬಿಲಿ ಅದ್ಧೂರಿಯಾಗಿ ನಡೆಸಲು ಆಯೋಜಿಸುತ್ತಿದ್ದು, ಪ್ಲ್ಯಾಟಿನಮ್ ವರ್ಷವಾಗಿ ಆಚರಿಸುವ ಉದ್ದೇಶದಿಂದ ವರ್ಷಪೂರ್ತಿ ಐತಿಹಾಸಿಕ ಕ್ಷಣಗಳನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳ ಆಯೋಜನೆಯ ಯೋಜನೆಯಲ್ಲಿದೆ. “ಜೂನ್ 2 ರ ಗುರುವಾರದಿಂದ ಜೂನ್ 5 ರ ಭಾನುವಾರದವರೆಗೆ ಯುನೈಟೆಡ್ ಕಿಂಗ್‌ ಡಂ ನಾದ್ಯಂತ ಜನರಿಗೆ ಒಗ್ಗೂಡಲು ಅವಕಾಶವನ್ನು ಒದಗಿಸುತ್ತದೆ” ಎಂದು ಅರಮನೆ ಹೇಳಿಕೆಯಲ್ಲಿ ತಿಳಿಸಿದೆ.

ರಾಣಿಯ ಏಳು ದಶಕಗಳ ಆಳ್ವಿಕೆಗಾಗಿ ಥ್ಯಾಂಕ್ಸ್ ಗಿವಿಂಗ್ ಅಥವಾ ಕೃತಜ್ಞತಾ ಸಮರ್ಪಣಾ ಸಮಾರಂಭವು ಲಂಡನ್ನಿನ  ಸೇಂಟ್ ಪಾಲ್ಸ್ ಕ್ಯಾಥೆಡ್ರಲ್ ನಲ್ಲಿ ನಡೆಯಲಿದೆ. ರಾಣಿಯ ಏಳು ದಶಕಗಳ ಆಳ್ವಿಕೆಯ ಅತ್ಯಂತ ಮಹತ್ವದ ಮತ್ತು ಸಂತೋಷದಾಯಕ ಕ್ಷಣಗಳನ್ನು ಸಂಭ್ರಮಿಸಲು ಜಗತ್ತಿನ ಖ್ಯಾತ ಸಂಗೀತಗಾರರ ಕೂಡುವಿಕೆಯಲ್ಲಿ ಬಕಿಂಗ್ಹ್ಯಾಮ್ ಅರಮನೆಯಿಂದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದು, ಜೊತೆಗೆ ಎಲಿಜೆಬೆತ್ ಏಳು ದಶಕಗಳನ್ನು ಆಳ್ವಿಕೆನ್ನು ನೆನಪಿಸುವ ವಿಶೇಷ ಕಾರ್ಯಕ್ರಮಗಳನ್ನು ಬಕಿಂಗ್ಹ್ಯಾಮ್ ಅರಮನೆಯಿಂದ ಬಿಬಿಸಿ ವಿಶೇಷ ಲೈವ್ ಪ್ರಸಾರ ಮಾಡಲು ಅರಮನೆ ನಿರ್ಧರಿಸಿದೆ.

ಇನ್ನು, ಈ ವಿಶೇಷ ಸಂದರ್ಭದಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವನ್ನು ಒದಗಿಸಲಾಗುತ್ತಿದೆ. ಭಾಗವಹಿಸುವವರಿಗೆ ನಿಗದಿತ ಟಿಕೇಟ್ ದರವನ್ನೂ ಕೂಡ ಇಡಲಾಗುತ್ತದೆ. ಆ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುತ್ತದೆ ಎಂದು ಅರಮನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ :  ಕೈಗಾರಿಕಾ ಸಮಸ್ಯೆಗಳಿಗೆ ಸ್ಪಂದಿಸಲು ಶೀಘ್ರ ತೀರ್ಮಾನ : ಸರ್ಕಾರದ ಮುಖ್ಯ ಕಾರ್ಯದರ್ಶಿ ಭರವಸೆ

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!

Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.