ಬ್ರಿಟನ್ ನಲ್ಲೇ ಆಶ್ರಯ ಕೋರಿ ಗಡಿಪಾರು ತಪ್ಪಿಸಲು ಮಲ್ಯ ತಂತ್ರ?
Team Udayavani, May 20, 2020, 3:53 PM IST
ಲಂಡನ್: ತನ್ನನ್ನು ಭಾರತಕ್ಕೆ ಗಡೀಪಾರು ಮಾಡದಂತೆ ಇಂಗ್ಲಂಡ್ ನ ಸುಪ್ರೀಂ ಕೋರ್ಟ್ ಮಟ್ಟದಲ್ಲಿ ಮನವಿ ಸಲ್ಲಿಸುವ ಅವಕಾಶವನ್ನು ನಿರಾಕರಿಸಲ್ಪಟ್ಟಿರುವ ಉದ್ಯಮಿ ವಿಜಯ್ ಮಲ್ಯ ಅವರ ಮುಂದೆ ಇದೀಗ ಭಾರತಕ್ಕೆ ಗಡೀಪಾರಾಗುವುದನ್ನು ತಪ್ಪಿಸಲು ಕಾನೂನೇತರ ಮಾರ್ಗಗಳೂ ಉಳಿದುಕೊಂಡಿವೆ.
ಇದಕ್ಕಾಗಿ ಬ್ರಿಟನ್‌ನಿಂದ ಭಾರತಕ್ಕೆ ಗಡಿಪಾರು ಭೀತಿ ಎದುರಿಸುತ್ತಿರುವ ಉದ್ಯಮಿ ವಿಜಯ ಮಲ್ಯ ಆ ದೇಶದಲ್ಲಿ ಆಶ್ರಯ ಕೋರುವ ಸಾಧ್ಯತೆ ಇದೆ.
ಈ ಮೂಲಕ ಭಾರತಕ್ಕೆ ಹಸ್ತಾಂತರವಾಗುವ ಅಪಾಯದಿಂದ ಪಾರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹೀಗಾಗಿ ಕೇಂದ್ರ ಸರ್ಕಾರಕ್ಕೆ ನಿರೀಕ್ಷೆ ಮಾಡಿದಷ್ಟು ಸುಲಭವಾಗಿ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆತರಲು ಸಾಧ್ಯವಾಗದು ಎಂಬ ವಾದವೊಂದು ಇದೀಗ ಬಲವಾಗಿ ಕೇಳಿಬರಲಾರಂಭಿಸಿದೆ..
ಈ ಬಗ್ಗೆ ವಿವರಣೆ ನೀಡಿರುವ ಲಂಡನ್‌ನಲ್ಲಿರುವ ಭಾರತೀಯ ಮೂಲದ ನ್ಯಾಯವಾದಿ ಕರಿಷ್ಮಾ ವೋರಾ ‘ಮಲ್ಯ ಆಶ್ರಯ ಕೋರಿದ ಅರ್ಜಿಯ ವಿಚಾರಣೆ ನಡೆಯುತ್ತಿದ್ದರೆ ಅಥವಾ ಆತನ ಅರ್ಜಿ ಮಾನ್ಯ ಮಾಡಿ ಆಶ್ರಯ ನೀಡಿದರೆ, ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.
ಯಾರಾದರೂ ಮಲ್ಯರಿಗೆ ಈ ಬಗ್ಗೆ ಸಲಹೆ ನೀಡಿದ್ದರೆ, ಆತ ಆಶ್ರಯ ಕೋರಿ ಅರ್ಜಿ ಹಾಕಬಹುದು. ಈ ಕುರಿತ ವಿಚಾರಣೆ ಗೌಪ್ಯವಾಗಿ ನಡೆಯುವುದರಿಂದ ಯಾರಿಗೂ ಗೊತ್ತಾಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನು ಹೊರತುಪಡಿಸಿದಂತೆ ಇಂಗ್ಲಂಡ್ ನ ಗೃಹ ಸಚಿವರಾಗಿರುವ ಪ್ರೀತಿ ಪಟೇಲ್ ಮುಂದೆ ಈ ಕುರಿತಾಗಿ ಮನವಿ ಸಲ್ಲಿಸುವ ಅವಕಾಶವೂ ಮಲ್ಯ ಅವರ ಮುಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Netherlands: ಇಸ್ರೇಲ್ ಫುಟ್ಬಾಲ್ ಅಭಿಮಾನಿಗಳ ಮೇಲೆ ದಿಢೀರ್ ದಾಳಿ!
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.