ಕ್ಯಾಲಿಫೋರ್ನಿಯ ಬಾರ್ ಶೂಟಿಂಗ್: ಪೊಲೀಸ್ ಸಹಿತ ಕನಿಷ್ಠ 12 ಬಲಿ
Team Udayavani, Nov 8, 2018, 5:32 PM IST
ವಾಷಿಂಗ್ಟನ್ : ಅಮೆರಿಕದ ಕ್ಯಾಲಿಫೋರ್ನಿಯದಲ್ಲಿನ ಜನಪ್ರಿಯ ಬಾರ್ ಒಂದರಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಹುಚ್ಚಾಪಟ್ಟೆ ಗುಂಡು ಹಾರಾಟಕ್ಕೆ ಓರ್ವ ಪೊಲೀಸ್ ಅಧಿಕಾರಿಯ ಸಹಿತ ಕನಿಷ್ಠ 12 ಮಂದಿ ಬಲಿಯಾಗಿದ್ದಾರೆ ಎಂದು ಶೆರೀಫ್ ಜೆಫ್ ಡೀನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯದ ಬಾರ್ಡರ್ ಲೈನ್ ಬಾರ್ ಆ್ಯಂಡ್ ಗ್ರಿಲ್ ಬಾರ್ ನಲ್ಲಿ ನಿನ್ನೆ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ.
ಬಾರ್‌ನಲ್ಲಿದ್ದವರು ಆನಂದದ ನಶೆಯಲ್ಲಿದ್ದ ವೇಳೆ ಅದೆಲ್ಲಿಂದಲೋ ಒಳ ನುಗ್ಗಿ ಬಂದ ಬಂದೂಕುಧಾರಿ ಇದ್ದಕ್ಕಿದ್ದಂತೆಯೇ, ಮನಬಂದಂತೆ, ಕುಳಿತಿದ್ದವರ ಮೇಲೆ ಗುಂಡೆಸೆಯತೊಡಗಿದ. ಪರಿಣಾಮವಾಗಿ ಓರ್ವ ಪೊಲೀಸ್ ಅಧಿಕಾರಿಯೂ ಸೇರಿ ಕನಿಷ್ಠ 12 ಮಂದಿ ಹತರಾದರು.
ಬಂದೂಕುಧಾರಿ ಕೂಡ ತಾನು ಈ ಮಾರಣ ಹೋಮ ನಡೆಸಿದ ಸ್ಥಳದಲ್ಲೇ ಸತ್ತು ಬಿದ್ದಿರುವುದು ಅನಂತರ ಕಂಡು ಬಂದಿದೆ ಎಂದು ಜೆಫ್ ಡೀನ್ ಹೇಳಿದ್ದಾರೆ.
ಕ್ಯಾಲಿಫೋರ್ನಿಯದ ಥೌಝಂಡ್ ಓಕ್ಸ್ ನಲ್ಲಿರುವ ಈ ಬಾರ್ ನಲ್ಲಿ ನಡೆದಿರುವ ಶೂಟಿಂಗ್ ನಲ್ಲಿ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಗುಂಡು ಹಾರಾಟದ ಸುದ್ದಿ ತಿಳಿದೊಡನೆಯೇ ಪೊಲೀಸರು ರಾತ್ರಿ 11.30ರ ಸುಮಾರಿಗೆ ಬಾರ್ ಗೆ ಧಾವಿಸಿ ಬಂದಿದ್ದಾರೆ.
ಗುಂಡು ಹಾರಾಟದ ಘಟನೆ ನಡೆದ ವೇಳೆ ಬಾರ್‌ನಲ್ಲಿ ಕಾಲೇಜ್ ಕಂಟ್ರಿ ಮ್ಯೂಸಿಕಲ್ ನೈಟ್ ನಡೆಯುತ್ತಿತ್ತು ಮತ್ತು ಕನಿಷ್ಠ 200 ಮಂದಿ ಇದ್ದರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಬಂದೂಕುಧಾರಿಯು ಬಾರ್‌ನಲ್ಲಿದ್ದವರ ಮೇಲೆ ಕನಿಷ್ಠ 30 ಗುಂಡುಗಳನ್ನು ಹಾರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
“ಒಬ್ಬ ಸಭ್ಯ ಮನುಷ್ಯ ಬಾರ್ ನ ಎದುರು ಬಾಗಿಲಿನಿಂದಲೇ ಒಳಗೆ ಬಂದಿದ್ದಾನೆ; ಬಳಿಕ ಕೌಂಟರ್ ಹಿಂದಿದ್ದ ಹುಡುಗಿಯ ಮೇಲೆ ಗುಂಡೆಸೆದಿದ್ದಾನೆ’ ಎಂದು ಈ ಶೂಟಿಂಗ್ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿರುವ ಹೋಲ್ಡನ್ ಹ್ಯಾರಾ ಎಂಬವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump ಹೊಸ ನೀತಿಗೆ ಹಿನ್ನಡೆ: ಪೌರತ್ವ ರದ್ದು ಆದೇಶಕ್ಕೆ ಅಮೆರಿಕ ಕೋರ್ಟ್ ತಡೆಯಾಜ್ಞೆ
America ಅಧ್ಯಕ್ಷೀಯ ಚುನಾವಣೆ ಸೋಲಿಗೆ ಪತಿಯೇ ಕಾರಣ ಎಂದಿದ್ದರೇ ಕಮಲಾ?
China: 17 ನಿಮಿಷ 10 ಕೋಟಿ ಡಿಗ್ರಿ ಸೆ. ತಾಪದಲ್ಲಿ ಉರಿದ ಕೃತಕ ಸೂರ್ಯ!
Thailand: ಸಲಿಂಗ ವಿವಾಹ ಕಾಯ್ದೆ ಜಾರಿ: ನೂರಾರು ಜೋಡಿಗಳ ವಿವಾಹ
Trump ಹೊಸ ನೀತಿ; ಅಮೆರಿಕದಲ್ಲಿ ಹೆರಿಗೆಗೆ ಭಾರತೀಯರಿಂದ ಕ್ಯೂ!!!
MUST WATCH
ಹೊಸ ಸೇರ್ಪಡೆ
Bandipur ಹೆದ್ದಾರಿಯಲ್ಲಿ ಚೆಲ್ಲಿದ ಅಕ್ಕಿ ಮೆಲ್ಲುತ್ತ ನಿಂತ ಕಾಡಾನೆಗಳು: ಟ್ರಾಫಿಕ್ ಜಾಮ್
Waqf Bill: ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಗದ್ದಲ; ವಿಪಕ್ಷದ ಎಲ್ಲಾ 10 ಸಂಸದರ ಅಮಾನತು
Dharwad: ಇನ್‌ಸ್ಟಾಗ್ರಾಮ್ ಪ್ರೀತಿಗೆ ಪತಿ ತೊರೆದ 24 ರ ಯುವತಿ ಬಲಿ
Udupi; ಪವರ್ ಪರ್ಬ 2025: ಫೆ. 8 ರಂದು ಬೆಂಕಿ ರಹಿತ ಅಡುಗೆ ಸ್ಪರ್ಧೆ
ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ