Canada; ಭಾರತ ಸೈಬರ್ ಬೆದರಿಕೆ ಪಟ್ಟಿಗೆ ಸೇರ್ಪಡೆ
ಉಭಯ ರಾಷ್ಟ್ರಗಳ ರಾಜತಾಂತ್ರಿಕ ಬಿಕ್ಕಟ್ಟಿನ ಬೆನ್ನಲ್ಲೇ ಈ ಆರೋಪ
Team Udayavani, Nov 4, 2024, 6:38 AM IST
ಹೊಸದಿಲ್ಲಿ: ಖಲಿಸ್ಥಾನಿ ಉಗ್ರ ಹದೀìಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರವಾಗಿ ಭಾರತದ ವಿರುದ್ಧ ಆರೋಪ ಹೊರಿಸಿದ್ದ ಕೆನಡಾ ಇದೀಗ ತನ್ನ ಸೈಬರ್ ಬೆದರಿಕೆ ಪಟ್ಟಿಗೆ ಮೊದಲ ಬಾರಿಗೆ ಭಾರತವನ್ನು ಸೇರಿಸಿದೆ.! ಭಾರತವು ಕೆನಡಾ ಮೇಲೆ ಸರ್ಕಾರಿ ಪ್ರಾಯೋಜಿತ ಹ್ಯಾಕಿಂಗ್ ಮತ್ತು ಸೈಬರ್ ಬೇಹುಗಾರಿಕೆಗೆ ಯತ್ನಿಸುತ್ತಿದೆ ಎಂದು ಆರೋಪ ಹೊರಿಸಿದೆ.
ನಿಜ್ಜರ್ ವಿಚಾರವಾಗಿ ಕೆನಡಾ ಮತ್ತು ಭಾರತದ ನಡುವೆ ಮೂಡಿರುವ ರಾಜತಾಂತ್ರಿಕ ಬಿಕ್ಕಟ್ಟು ಬಗೆಹರಿಯುವ ಮೊದಲೇ ಕೆನಡಾದ ಈ ನಡೆ ಉಭಯ ರಾಷ್ಟ್ರಗಳ ನಡುವೆ ಮತ್ತೂಂದು ಕಂದಕ ಮೂಡಿಸುವ ಸಾಧ್ಯತೆ ಇದೆ.
“ನ್ಯಾಶನಲ್ ಸೈಬರ್ ಥೆÅಟ್ ಅಸೆಸ್ಮೆಂಟ್ 2025-2026′ ವರದಿಯಲ್ಲಿ ಭಾರತದ ವಿರುದ್ಧ ಮೇಲ್ಕಂಡ ಆರೋಪವನ್ನು ಕೆನಡಾ ಸರಕಾರ ಮಾಡಿದೆ. ಕೆನಡಾದಲ್ಲಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಎದುರಿಸುತ್ತಿರುವ ಸೈಬರ್ ಬೆದರಿಕೆಗಳ ಕುರಿತಾದ ಮಾಹಿತಿ ಇರುವ ಈ ವರದಿಯು ಯಾವ ರಾಷ್ಟ್ರಗಳು ಈ ಬೆದರಿಕೆಗಳನ್ನು ಪ್ರಾಯೋಜಿಸುತ್ತಿವೆ ಎನ್ನುವ ಪಟ್ಟಿಯನ್ನೂ ಒಳಗೊಂಡಿದೆ. ಇದರಲ್ಲಿ ಭಾರತಕ್ಕೆ 5ನೇ ಸ್ಥಾನ ನೀಡಲಾಗಿದೆ. ಉಳಿದಂತೆ ಮೊದಲ ಸ್ಥಾನದಲ್ಲಿ ಚೀನಾ, ನಂತರದಲ್ಲಿ ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾದ ಹೆಸರುಗಳನ್ನು ಉಲ್ಲೇಖೀಸಲಾಗಿದೆ. ಈ ಹಿಂದೆ ಯಾವ ವರದಿಯಲ್ಲೂ ಭಾರತದ ಹೆಸರು ಇರಲಿಲ್ಲ.
ಇದು ಕೆನಡಾದ ಮತ್ತೂಂದು ಕುತಂತ್ರ: ಭಾರತ ವಾಗ್ಧಾಳಿ
ಭಾರತದ ಮೇಲಿನ ಕೆನಡಾದ ಆರೋಪವನ್ನು ಭಾರತ ತಿರಸ್ಕರಿಸಿದೆ. ಭಾರತದ ಕುರಿತು ಜಗತ್ತಿನ ರಾಷ್ಟ್ರಗಳು ಹೊಂದಿರುವ ಅಭಿಪ್ರಾಯವನ್ನು ಬದಲಿಸಿ, ಭಾರತದ ವರ್ಚಸ್ಸಿನ ಮೇಲೆ ದಾಳಿ ನಡೆಸಲು ಕೆನಡಾ ಈ ರೀತಿಯ ಹೊಸ ಕಾರ್ಯತಂತ್ರ ರೂಪಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣದೀರ್ ಜೈಸ್ವಾಲ್ ಹೇಳಿದ್ದಾರೆ. ಜತೆಗೆ ಈ ಹಿಂದೆಯೂ ಭಾರತದ ಮೇಲೆ ಜಾಗತಿಕ ಅಭಿಪ್ರಾಯ ಬದಲಿಸಲು ಪ್ರಯತ್ನಿಸಿದ್ದಾಗಿ ಕೆನಡಾದ ಹಿರಿಯ ಅಧಿಕಾರಿಗಳೇ ಒಪ್ಪಿಕೊಂಡಿದ್ದರು. ಈಗಲೂ ಅಂಥದ್ದೇ ಪ್ರಯತ್ನ ಮಾಡಿದ್ದಾರೆ ಎಂದೂ ಹೇಳಿದ್ದಾರೆ. ಜತೆಗೆ ನೇರವಾಗಿ ಕೆನಡಾಗೆ ಚಾಟಿ ಬೀಸಿ, “ನೀವು ಮೊದಲಿಗೆ ನಮ್ಮ ವಿರುದ್ಧ ಆಧಾರರಹಿತ ಹೇಳಿಕೆ ನೀಡುತ್ತೀರಿ. ನಾವು ಅದನ್ನು ವಿರೋಧಿಸಿದಾಗ ನಮ್ಮ ವಿರುದ್ಧ ಇಂಥ ದೊಡ್ಡಮಟ್ಟದ ಆರೋಪ ಹೊರಿಸುತ್ತೀರಿ, ಇದು ಸರಿ ಅಲ್ಲ’ ಎಂದು ಜೈಸ್ವಾಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.