ಒಮ್ಮೆ ಚಾರ್ಜ್ ಮಾಡಿದರೆ 1,000 ಕಿ.ಮೀ. ಮೈಲೇಜ್!
Team Udayavani, Jun 26, 2022, 7:35 AM IST
ಬೀಜಿಂಗ್: ಎಲೆಕ್ಟ್ರಿಕ್ ಕಾರು ಅಥವಾ ಬೈಕ್‌ನ ಬ್ಯಾಟರಿಯನ್ನು ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ ಎಷ್ಟು ಕಿ.ಮೀ. ಸಾಗಬಹುದು?
100-200 ಎಂದು ನೀವು ಅಂದಾಜಿಸಬಹುದು. ಆದರೆ ಚೀನದ ಈ ಸಂಸ್ಥೆ ತಯಾರಿಸಿ ರುವ ಈ ಬ್ಯಾಟರಿ ಬಳಸಿದರೆ ಸುಮಾರು 1,000 ಕಿ.ಮೀ.ವರೆಗೆ ಚಾರ್ಜಿಂಗ್ ಚಿಂತೆಯಿಲ್ಲದೆ ಸಾಗಬಹುದಂತೆ!
ಚೀನದ ಪ್ರಸಿದ್ಧ ಎಲೆಕ್ಟ್ರಿಕ್ ವಾಹನ ಬ್ಯಾಟರಿ ತಯಾರಕ ಸಂಸ್ಥೆಯಾಗಿರುವ ಕಂಟೆಂಪರರಿ ಆ್ಯಂಪೆರೆಕ್ಸ್ ಟೆಕ್ನಾಲಜಿ ಕೊ. ಲಿ.(ಸಿಎಟಿಎಲ್) “ಕಿಲಿನ್’ ಹೆಸರಿನ ಬ್ಯಾಟರಿ ತಯಾರಿಸಿದೆ.
ಎಲೆಕ್ಟ್ರಿಕ್ ಕಾರುಗಳಿಗಾಗಿಯೇ ಈ ಬ್ಯಾಟರಿಯನ್ನು ತಯಾರಿಸಲಾಗಿದ್ದು, ಈ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 1,000 ಕಿ.ಮೀ. ಕ್ರಮಿಸುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಅದಷ್ಟೇ ಅಲ್ಲದೆ, ಸರ್ವೀಸ್ ಲೈಫ್, ಸುರಕ್ಷತೆ, ಚಾರ್ಜಿಂಗ್ ವೇಗ ಮತ್ತು ಉಷ್ಣಾಂಶ ತಡೆದುಕೊಳ್ಳುವು ದರಲ್ಲೂ ಈ ಬ್ಯಾಟರಿ ಈಗಿರುವ ಎಲ್ಲ ಬ್ಯಾಟರಿಗಳಿಗಿಂತ ಉತ್ತಮವಂತೆ. ದೊಡ್ಡ ಪ್ರಮಾಣದಲ್ಲಿ ಕಿಲಿನ್ ಉತ್ಪಾದನೆಗೆ ಸಂಸ್ಥೆ ಕೈ ಹಾಕಿದ್ದು, 2023ರಲ್ಲಿ ಮಾರುಕಟ್ಟೆಗೆ ಅದನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.