ಮನೆಗೇ ಬೆಂಕಿ ಇಡುವ ಬೆಕ್ಕುಗಳು! ಹುಷಾರಾಗಿರಿ ಎಂದು ಸರ್ಕಾರದಿಂದ ಎಚ್ಚರಿಕೆ
Team Udayavani, Jan 2, 2022, 9:00 PM IST
ಸಿಯೋಲ್: ಬೆಕ್ಕನ್ನು ಇಷ್ಟಪಟ್ಟು ಸಾಕುವವರು ಹಲವರಿದ್ದಾರೆ. ಆದರೆ ದಕ್ಷಿಣ ಕೋರಿಯಾದಲ್ಲಿ ತಾವು ಸಾಕಿದ್ದ ಬೆಕ್ಕುಗಳಿಂದಲೇ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಅದಕ್ಕೆ ನಿದರ್ಶನವೆಂಬಂತೆ ಅಲ್ಲಿ ಕಳೆದ 3 ವರ್ಷಗಳಲ್ಲಿ 100ಕ್ಕೂ ಅಧಿಕ ಮನೆಗಳಿಗೆ ಅದೇ ಮನೆಯ ಬೆಕ್ಕುಗಳೇ ಬೆಂಕಿ ಇಟ್ಟಿವೆಯಂತೆ!
ಸಿಯೋಲ್ ಮಹಾನಗರ ಅಗ್ನಿಶಾಮಕ ದಳದ ಅಧಿಕಾರಿಗಳು ಇತ್ತೀಚೆಗೆ ದೇಶದ ಜನತೆಗೆ ಒಂದು ಎಚ್ಚರಿಕೆ ಕೊಟ್ಟಿದ್ದಾರೆ. “2019ರ ಜನವರಿಯಿಂದ 2021ರ ನವೆಂಬರ್‌ವರೆಗೆ ಒಟ್ಟು 107 ಮನೆಗಳಲ್ಲಿ ಅವೇ ಮನೆ ಗಳ ಸಾಕು ಬೆಕ್ಕುಗಳಿಂದಲೇ ಬೆಂಕಿ ಅವಘಡ ಸಂಭವಿಸಿದೆ. ಆ ಹಿನ್ನೆಲೆಯಲ್ಲಿ ಬೆಕ್ಕು ಸಾಕಿರುವವರು ಎಚ್ಚರಿಕೆಯಿಂದಿರಿ’ ಎಂದು ಸೂಚಿಸಿದೆ.
ಅಡುಗೆಗೆಂದು ಬಳಸುವ ಹಾಟ್‌ಪ್ಲೇಟ್(ಇಂಡಕ್ಷನ್ ಕುಕ್‌ಟಾಪ್‌ನಂತರ ವಿದ್ಯುತ್ ಆಧಾರಿತ ಸ್ಟವ್‌ಗಳು)ಗಳ ಮೇಲೆ ಹತ್ತುವ ಬೆಕ್ಕುಗಳು ಗೊತ್ತಿಲ್ಲದೆ, ಅದರ ಬಟನ್ ಆನ್ ಮಾಡಿಬಿಡುತ್ತವೆಯಂತೆ. ಗಂಟೆಗಳ ಕಾಲ ಹಾಟ್‌ಪ್ಲೇಟ್ ಆನ್ ಆಗಿದ್ದು, ಬಳಕೆಯಲ್ಲಿಲ್ಲವೆಂದಾಗ ಬೆಂಕಿ ಹತ್ತಿ ಉರಿಯುವ ಸಾಧ್ಯತೆ ಹೆಚ್ಚಿರುತ್ತದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲೇ ಬೆಕ್ಕುಗಳಿಂದ ಈ ರೀತಿಯ ಸಮಸ್ಯೆ ಹೆಚ್ಚಾಗಿರುವುದಾಗಿ ತಿಳಿಸಲಾಗಿದೆ.
ಇದನ್ನೂ ಓದಿ:ನಾಗಮಂಗಲ: ಬಸ್ ಢಿಕ್ಕಿ; ಕಾರಿನಲ್ಲಿದ್ದ ನವ ದಂಪತಿ ಸೇರಿ, ಮೂವರು ದಾರುಣ ಸಾವು
ಅಮೆರಿಕದಲ್ಲೂ ತಪ್ಪದ ಕಾಟ:
ಕೇವಲ ದಕ್ಷಿಣ ಕೋರಿಯಾ ಮಾತ್ರವಲ್ಲ ಅಮೆರಿಕದಲ್ಲೂ ಇದೇ ರೀತಿಯ ಸಮಸ್ಯೆಯಿದೆಯಂತೆ. ಅಮೆರಿಕದ ಹ್ಯೂಮನ್ ಅಸೋಸಿಯೇಷನ್ ಕೊಟ್ಟಿರುವ ವರದಿಯ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಬೆಕ್ಕುಗಳಿಂದ ಕನಿಷ್ಠ ಒಂದು ಸಾವಿರ ಮನೆಗಳಲ್ಲಿ ಬೆಂಕಿ ಅವಗಢ ಸಂಭವಿಸುತ್ತಿದೆಯಂತೆ. ಬೆಕ್ಕುಗಳು ವೈಯರ್‌ಗಳನ್ನು ಕತ್ತರಿಸುತ್ತಿರುವುದು ಮತ್ತು ಕ್ಯಾಂಡಲ್‌ಗಳ ಜೊತೆ ಆಟವಾಡುತ್ತಿರುವುದರಿಂದಾಗಿ ಹೀಗಾಗಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.