ವಿಶ್ವದ ದೊಡ್ಡಣ್ಣನ ಅಭಿನಂದನೆ: 3 ಸೇನಾಪಡೆಗಳ ಮುಖ್ಯಸ್ಥರಾಗಿ ಜ. ರಾವತ್ ಅಧಿಕಾರ ಸ್ವೀಕಾರ
ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಸಶಸ್ತ್ರ ಪಡೆಗಳಿಗೆ ಮುಖ್ಯಸ್ಥ(ಸಿಡಿಎಸ್)ರನ್ನು ನೇಮಕ ಮಾಡುವುದಾಗಿ ಘೋಷಿಸಿದ್ದರು
Team Udayavani, Dec 31, 2019, 10:42 AM IST
ನವದೆಹಲಿ:ದೇಶದ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕವಾಗಿದ್ದ ಜ.ಬಿಪಿನ್ ರಾವತ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ದೇಶದ ಪ್ರಥಮ ಸಿಡಿಎಸ್ ಆಗಿ ನೇಮಕವಾಗಿರುವ ಜನರಲ್ ರಾವತ್ (61ವರ್ಷ)ಗೆ ಅಮೆರಿಕದ ಸ್ಟೇಟ್ ಡಿಪಾರ್ಟ್ ಮೆಂಟ್ ಅಭಿನಂದನೆ ಸಲ್ಲಿಸಿದೆ.
ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಸಶಸ್ತ್ರ ಪಡೆಗಳಿಗೆ ಮುಖ್ಯಸ್ಥ(ಸಿಡಿಎಸ್)ರನ್ನು ನೇಮಕ ಮಾಡುವುದಾಗಿ ಘೋಷಿಸಿದ್ದರು.
ಅಮೆರಿಕ ಸ್ಟೇಟ್ ಡಿಪಾರ್ಟ್ ಮೆಂಟ್ (ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯವೈಖರಿ ರೀತಿ ವಿದೇಶಾಂಗ ನೀತಿಯ ಕಾರ್ಯನಿರ್ವಹಿಸುವ ಇಲಾಖೆ) ಪ್ರಕಟಣೆಯಲ್ಲಿ, ಇತ್ತೀಚೆಗೆ ನಡೆದ ಮಿಲಿಟರಿ ಹಾಗೂ ಆರ್ಥಿಕ ಸಂಬಂಧಿ ಚರ್ಚೆಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಮತ್ತಷ್ಟು ವೃದ್ದಿಗೊಂಡಿತ್ತು ಎಂದು ತಿಳಿಸಿದೆ.
ಭಾರತದಲ್ಲಿರುವ ಅಮೆರಿಕದ ರಾಯಭಾರಿ ಕೆನ್ನೆಥ್ ಜುಸ್ಟರ್, ತಾನು ವೈಯಕ್ತಿಕವಾಗಿ ಜನರಲ್ ಬಿಪಿನ್ ರಾವತ್ ಗೆ ಅಭಿನಂದನೆ ತಿಳಿಸುವುದಾಗಿ ಟ್ವೀಟ್ ಮಾಡಿದ್ದಾರೆ. ಅಮೆರಿಕ-ಭಾರತದ ರಕ್ಷಣಾ ಪಾರ್ಟನರ್ ಶಿಪ್ ನಲ್ಲಿ ಇನ್ನಷ್ಟು ಪ್ರಗತಿ ಕಾಣಲಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.