ಉಗ್ರ ಹಫೀಜ್ ಬಿಡುಗಡೆಗೆ ಉ.ಪ್ರದೇಶದಲ್ಲಿ ಸಂಭ್ರಮ!
Team Udayavani, Nov 26, 2017, 6:05 AM IST
ಲಖೀಮ್‌ಪುರ: ಮುಂಬಯಿ ದಾಳಿ ಸಂಚುಕೋರ ಹಾಗೂ ಲಷ್ಕರ್ ಎ ತೊಯ್ಬಾ ಉಗ್ರ ಹಫೀಜ್ ಸಯೀದ್‌ನನ್ನು ಪಾಕಿಸ್ಥಾನ ಬಿಡುಗಡೆ ಮಾಡುತ್ತಿದ್ದಂತೆಯೇ, ಉತ್ತರ ಪ್ರದೇಶದ ಲಖೀಮ್‌ಪುರದಲ್ಲಿ ಸಂಭ್ರಮಾಚರಣೆ ಮಾಡಲಾಗಿದೆ ಎನ್ನಲಾಗಿದೆ. ಈ ಸಂಬಂಧ ಶಿವಪುರಿ ಪ್ರದೇಶದ ಬೇಗಂ ಬಾಘ…ನಲ್ಲಿ ಸುಮಾರು 25ಕ್ಕೂ ಹೆಚ್ಚು ಯುವಕರು ಶುಕ್ರವಾರ ಬೆಳಗ್ಗೆ ಸಂಭ್ರಮಾಚರಣೆ ಮಾಡಿದ್ದಾರೆ. ಈ ಸುದ್ದಿ ತಿಳಿಯು ತ್ತಿದ್ದಂತೆ ಬಲಪಂಥೀಯರು ಈ ಭಾಗದಲ್ಲಿ ಜಮಾಯಿಸಲು ಆರಂಭಿಸಿದಾಗ, ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡಲು ಸ್ಥಳಕ್ಕೆ ಧಾವಿಸಿದ್ದಾರೆ.
ಸಂಭ್ರಮಾಚರಣೆ ನಡೆದ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಯಿತಾದರೂ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಕಾಶ್‌ದೀಪ್‌ಗೆ ವಿಷಯವನ್ನು ತಿಳಿಸಿದಾಗ ಪೊಲೀಸರು ಚುರುಕಾದರು ಎನ್ನಲಾಗಿದೆ. ಕೊತ್ವಾಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಹಸಿರು ಧ್ವಜಗಳನ್ನು ತೆಗೆದುಹಾಕಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸ್ ಠಾಣೆ ಉಸ್ತುವಾರಿ ಪ್ರದೀಪ್ ಶುಕ್ಲಾ ಹೇಳಿದ್ದಾರೆ. ಈ ಮಧ್ಯೆ ಯುವಕರು ಸಂಭ್ರಮಿಸಿರುವ ಮತ್ತು “ಹಫೀಜ್ ಸಯೀದ್ ಜಿಂದಾಬಾದ್’ ಹಾಗೂ “ಪಾಕಿಸ್ತಾನ್ ಜಿಂದಾಬಾದ್’ ಎಂದಿರುವುದಕ್ಕೆ ಸಾಕ್ಷ್ಯವಾಗಿ ವೀಡಿಯೋ ಇದೆ ಎಂದು ಬಲಪಂಥೀಯ ಮುಖಂಡರು ಹೇಳಿದ್ದಾರೆ.
ಕ್ರಮ ಸಮರ್ಥಿಸಿಕೊಂಡ ಪಾಕ್: ಉಗ್ರ ಹಫೀಜ್ ಸಯೀದ್‌ನನ್ನು ಬಿಡುಗಡೆ ಮಾಡಿರುವ ತನ್ನ ಕ್ರಮವನ್ನು ಪಾಕಿಸ್ಥಾನವು ಸಮರ್ಥನೆ ಮಾಡಿಕೊಂಡಿದ್ದು, ದೇಶದ ಕಾನೂನಿಗೆ ಅನುಗುಣವಾಗಿ ನಾವು ಕ್ರಮ ಕೈಗೊಂಡಿದ್ದೇವೆ. ಅಲ್ಲದೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಹೇರಿರುವ ನಿಷೇಧವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನಾವು ನಮ್ಮ ಕ್ರಮವನ್ನು ಮುಂದುವರಿಸಲಿದ್ದೇವೆ ಎಂದು ಪಾಕಿಸ್ಥಾನದ ವಿದೇಶಾಂಗ ವಕ್ತಾರರು ಹೇಳಿದ್ದಾರೆ.
ಮುಖ್ಯವಾಹಿನಿಗೇ ಬರಲಿದೆ ಭಯೋತ್ಪಾದನೆ: “ಪಾಕಿಸ್ಥಾನ ದಲ್ಲಿ ಬಿಡುಗಡೆಗೊಂಡ ಹಫೀಜ್, ರಾಜಕಾರಣದ ಮುಖ್ಯವಾಹಿನಿಗೇ ಉಗ್ರ ಚಟುವಟಿಕೆಯನ್ನು ತರುವ ಉದ್ದೇಶ ಹೊಂದಿದ್ದಾನೆ. ಆತ ಒಬ್ಬ ಉಗ್ರಗಾಮಿ’ ಎಂದು ಅಮೆರಿಕದ ಗೂಢಚಾರ ಸಂಸ್ಥೆ ಸಿಐಎ ಮಾಜಿ ನಿರ್ದೇಶಕ ಮೈಕೆಲ್ ಮೋರೆಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.