Helicopter Crash: ನೈಜೀರಿಯಾದ ಪ್ರತಿಷ್ಠಿತ ಬ್ಯಾಂಕ್‌ನ ಸಿಇಒ ಸೇರಿ 6 ಮಂದಿ ದುರ್ಮರಣ
Team Udayavani, Feb 11, 2024, 12:06 PM IST
ಕ್ಯಾಲಿಫೋರ್ನಿಯಾ: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಪತನಗೊಂಡು ಪ್ರಖ್ಯಾತ ಬ್ಯಾಂಕಿನ ಸಿಇಓ ಸೇರಿದಂತೆ ಆರು ಮಂದಿ ದುರ್ಮರಣಗೊಂಡಿರುವುದಾಗಿ ವರದಿಯಾಗಿದೆ.
ದುರ್ಘಟನೆಯಲ್ಲಿ ನೈಜೀರಿಯಾದ ಅತಿದೊಡ್ಡ ಸಾಲದಾತರ ಗುಂಪಿನ ಮುಖ್ಯ ಕಾರ್ಯನಿರ್ವಾಹಕ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾದ ನಿಪ್ಟನ್ ಬಳಿ ರಾತ್ರಿ 10 ಗಂಟೆ ಸುಮಾರಿಗೆ ಹೆಲಿಕಾಪ್ಟರ್ ಪತನಗೊಂಡಿದ್ದು ಈ ವೇಳೆ ಅದರಲ್ಲಿ ಬ್ಯಾಂಕ್ ಸಿಇಓ ಸೇರಿದಂತೆ ಆರು ಮಂದಿ ಇದ್ದರು ಎಂದು ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಹೇಳಿಕೆಯಲ್ಲಿ ತಿಳಿಸಿದೆ.
ಆಸೆಸ್ ಬ್ಯಾಂಕ್ ನ ಗ್ರೂಪ್ ಸಿಇಒ ಹರ್ಬರ್ಟ್ ವಿಗ್ವೆ ಅವರ ಮರಣವನ್ನು ವಿಶ್ವ ವ್ಯಾಪಾರ ಸಂಸ್ಥೆಯ ಮಹಾನಿರ್ದೇಶಕ ಎನ್‌ಗೊಜಿ ಒಕೊಂಜೊ-ಇವಾಲಾ ಅವರು X ನಲ್ಲಿ ದೃಢಪಡಿಸಿದ್ದಾರೆ.
ಟ್ವೀಟ್ ನಲ್ಲಿ ಆಸೆಸ್ ಬ್ಯಾಂಕ್ ನ ಗ್ರೂಪ್ ಸಿಇಒ ಹರ್ಬರ್ಟ್ ವಿಗ್ವೆ, ಅವರ ಪತ್ನಿ, ಮಗ ಮೃತಪಟ್ಟಿದ್ದ ವಿಚಾರವನ್ನು ತಿಳಿಸಲು ವಿಷಾದ ವ್ಯಕ್ತಪಡಿಸುವುದಾಗಿ ಒಕೊಂಜೊ-ಇವಾಲಾ ಹೇಳಿಕೊಂಡಿದ್ದಾರೆ.
ಹೆಲಿಕಾಪ್ಟರ್ ಲಾಸ್ ವೇಗಾಸ್‌ಗೆ ತೆರಳುತ್ತಿತ್ತು ಎನ್ನಲಾಗಿದ್ದು, ಸ್ಯಾನ್ ಬರ್ನಾರ್ಡಿನೊ ಕೌಂಟಿ ಶೆರಿಫ್ ಇಲಾಖೆಯು ಅಪಘಾತದ ದೃಶ್ಯವು 15-ಫ್ರೀವೇಯ ಪೂರ್ವಕ್ಕೆ, ಹಲೋರನ್ ಸ್ಪ್ರಿಂಗ್ಸ್ ರಸ್ತೆಯ ಸಮೀಪದಲ್ಲಿದೆ ಎಂದು ಹೇಳಿಕೊಂಡಿದ್ದು ಹೆಲಿಕಾಪ್ಟರ್ ನಲ್ಲಿ ಇದ್ದವರು ಯಾರೂ ಬದುಕುಳಿಯಲಿಲ್ಲ ಎಂದು ಹೇಳಿದ್ದಾರೆ.
ಹೆಲಿಕಾಪ್ಟರ್ ಪತನಕ್ಕೆ ಕಾರಣ ಏನು ಎಂಬುದರ ಕುರಿತು ಇನ್ನಷ್ಟೇ ತನಿಖೆ ನಡೆಯಬೇಕಿದೆ.
ಇದನ್ನೂ ಓದಿ: Kolkata; ಮನೆಯಿಂದಲೇ ಸೌರವ್ ಗಂಗೂಲಿ ಮೊಬೈಲ್ ಫೋನ್ ಕಳವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.