ಇಸ್ರೋ ಚಂದ್ರಯಾನ- 2ರಲ್ಲಿ ನಾಸಾದ ಲೇಸರ್ ಉಪಕರಣ
ಇಸ್ರೋ ಪ್ರಾಯೋಜಿತ ಚಂದ್ರಯಾನ 2 ಯೋಜನೆಗೆ ಎಪ್ರಿಲ್ ತಿಂಗಳಿನಲ್ಲಿ ಚಾಲನೆ ಸಿಗುವ ನಿರೀಕ್ಷೆ...
Team Udayavani, Mar 26, 2019, 12:37 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ : Representative Image Used
ವಾಷಿಂಗ್ಟನ್: ಭೂಮಿಯಿಂದ ಚಂದ್ರನಲ್ಲಿಗೆ ಇರುವ ಅಂತರವನ್ನು ನಿಖರವಾಗಿ ಲೆಕ್ಕಹಾಕುವ ಉದ್ದೇಶಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಇಸ್ರೋದ ಬಹು ಉದ್ದೇಶಿತ ಚಂದ್ರಯಾನ – 2ರಲ್ಲಿ ನಾಸಾ ನಿರ್ಮಿತ ಲೇಸರ್ ಉಪಕರಣಗಳನ್ನು ಬಳಸಲಾಗುತ್ತಿದೆ ಎಂಬ ಮಾಹಿತಿ ನಾಸಾ ಅಂಗಳದಿಂದ ಹೊರಬಿದ್ದಿದೆ. ಇಸ್ರೋ ಪ್ರಾಯೋಜಿತ ಚಂದ್ರಯಾನ 2 ಯೋಜನೆಗೆ ಎಪ್ರಿಲ್ ತಿಂಗಳಿನಲ್ಲಿ ಚಾಲನೆ ಸಿಗುವ ನಿರೀಕ್ಷೆಯಿದೆ.
ಭೂಮಿಯಿಂದ ಕಳುಹಿಸಲ್ಪಡುವ ಲೇಸರ್ ಬೆಳಕಿನ ಸಿಗ್ನಲ್ ಗಳನ್ನು ಪ್ರತಿಫಲನಗೊಳಿಸುವ ಸುಸಜ್ಜಿತ ಮಸೂರಗಳೇ ಈ ರೆಟ್ರೋರಿಫ್ಲೆಕ್ಟರ್ ಗಳಾಗಿವೆ. ಭೂಮಿಯಿಂದ ಕಳುಹಿಸಲ್ಪಟ್ಟ ಬಾಹ್ಯಾಕಾಶ ನೌಕೆಗಳು (ಲ್ಯಾಂಡರ್) ನಿಖರವಾಗಿ ಎಲ್ಲಿದೆ ಎಂಬುದನ್ನು ಗುರುತಿಸುವಲ್ಲಿ ಈ ಸಿಗ್ನಲ್ ಗಳ ಪಾತ್ರ ಪ್ರಮುಖವಾದುದಾಗಿವೆ, ಮತ್ತು ಈ ಮೂಲಕ ಚಂದ್ರ ಭೂಮಿಯಿಂದ ನಿರ್ಧಿಷ್ಟವಾಗಿ ಎಷ್ಟು ದೂರದಲ್ಲಿದ್ದಾನೆ ಎಂಬುದನ್ನು ವಿಜ್ಞಾನಿಗಳು ನಿಖರವಾಗಿ ಲೆಕ್ಕಹಾಕಬಹುದಾಗಿದೆ.
ಈಗಾಗಲೇ ಈ ರೀತಿಯ ಐದು ಉಪಕರಣಗಳು ಚಂದ್ರನ ಮೇಲ್ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಅವುಗಳಲ್ಲಿ ಕೆಲವೊಂದು ನ್ಯೂನತೆಗಳಿರುವುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಈಗ ಚಂದ್ರನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಫಲನಗಳು ಗಾತ್ರದಲ್ಲಿ ದೊಡ್ಡದಾಗಿವೆ. ಕಿರಣಗಳ ಬದಲಿಗೆ ಪ್ರತಿಫಲನಗಳು ಚಂದ್ರನ ಮೇಲ್ಭಾಗದ ನಿಖರ ಲೆಕ್ಕಾಚಾರಕ್ಕೆ ಸಹಕಾರಿಯಾಗಲಿದೆ ಎಂಬ ಮಾಹಿತಿಯನ್ನು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.
ಚಂದ್ರಯಾನ 2 ಮತ್ತು ಇಸ್ರೇಲಿ ಬಾಹ್ಯಾಕಾಶ ನೌಕೆ ಬೆರೆಶೀಟ್ ನಲ್ಲಿ ನಾಸಾ ನಿರ್ಮಿತ ಲೇಸರ್ ರೆಟ್ರೋರಿಫ್ಲೆಕ್ಟರ್ ಕಿರಣಗಳಿರಲಿವೆ ಎಂಬ ಮಾಹಿತಿಯನ್ನು ಅಮೆರಿಕಾದ ಟೆಕ್ಸಾಸ್ ನಲ್ಲಿ ಕಳೆದ ವಾರ ಮುಕ್ತಾಯಗೊಂಡ ಲೂನಾರ್ ಆಂಡ್ ಪ್ಲಾನೆಟರಿ ಸೈನ್ಸ್ ಕಾನ್ಫರೆನ್ಸ್ ನಲ್ಲಿ ನಾಸಾ ಮೂಲಗಳು ಖಚಿತಪಡಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.