ರಷ್ಯಾ-ಉಕ್ರೇನ್ ಯುದ್ಧ: ಚರ್ನೋಬಿಲ್ ಲ್ಯಾಬ್ ಧ್ವಂಸ
Team Udayavani, Mar 24, 2022, 7:25 AM IST
ರಷ್ಯಾ ದಾಳಿಯಿಂದ ಧ್ವಂಸಗೊಂಡ ಮರಿಯುಪೋಲ್ ನಗರದ ಈಗಿನ ಸ್ಥಿತಿ.
ಕೀವ್/ಮಾಸ್ಕೋ: ಉಕ್ರೇನ್ ಮೇಲೆ ದಾಳಿ ಮುಂದುವರಿಸಿರುವ ರಷ್ಯಾ ಪಡೆ, ಬುಧವಾರ ಚರ್ನೋಬಿಲ್ ಅಣು ಸ್ಥಾವರದ ಪ್ರಯೋಗಾಲಯವೊಂದನ್ನು ಧ್ವಂಸ ಮಾಡಿದೆ. ಆ ಪ್ರಯೋಗಾಲಯವನ್ನು ವಿಕಿರಣಶೀಲ ತ್ಯಾಜ್ಯಗಳನ್ನು ನಿರ್ವಹಣೆ ಮಾಡಲು ಬಳಸಲಾಗುತ್ತಿತ್ತು ಎಂದು ಉಕ್ರೇನ್ ತಿಳಿಸಿದೆ.
ಧ್ವಂಸವಾಗಿರುವ ಪ್ರಯೋಗಾಲಯವನ್ನು ಯುರೋಪಿಯನ್ ಕಮಿಷನ್‌ನ ಸಹಾಯದೊಂದಿಗೆ 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆ ಪ್ರಯೋಗಾಲಯ 2015ರಿಂದ ಕಾರ್ಯಾಚರಣೆಯಲ್ಲಿತ್ತು.
ಉಕ್ರೇನ್‌ನ ಮರಿಯುಪೋಲ್ ನಗರದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಸಿಲುಕಿಕೊಂಡಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಆರೋಪಿಸಿದ್ದಾರೆ. ತುರ್ತು ಸೇವಾ ಸಿಬಂದಿ, ಬಸ್‌ಗಳ ಚಾಲಕರೂ ಅಲ್ಲಿ ಸಿಲುಕಿದ್ದಾರೆ. ಅವರೆಲ್ಲರು ತಿನ್ನುವುದಕ್ಕೆ ಊಟ, ಕುಡಿಯುವುದಕ್ಕೆ ನೀರೂ ಸಿಗದೆ ಅತ್ಯಂತ ಅಮಾನವೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅಲ್ಲಿ ರಷ್ಯಾ ಶೆಲ್ ಮತ್ತು ರಾಕೆಟ್ ದಾಳಿಯನ್ನು ಮುಂದುವರಿಸಿದೆ ಎಂದು ಅವರು ದೂರಿದ್ದಾರೆ.
ಉಕ್ರೇನ್‌ನ ವಿವಿಧ ನಗರಗಳಲ್ಲಿ ಸಿಲುಕಿರುವ ನಾಗರಿಕರನ್ನು ಬುಧವಾರ 9 ಮಾನವೀಯ ಕಾರಿಡಾರ್ ಮೂಲಕ ಹೊರತರಲು ಪ್ರಯತ್ನಿಸಲಾಗಿದೆ. ಆದರೆ ಮರಿಯುಪೋಲ್‌ನಲ್ಲಿ ಮಾನವೀಯ ಕಾರಿಡಾರ್‌ಗೂ ರಷ್ಯಾ ಅವಕಾಶ ಮಾಡಿಕೊಟ್ಟಿಲ್ಲ ಎಂದು ಉಕ್ರೇನ್‌ನ ಉಪ ಪ್ರಧಾನಮಂತ್ರಿ ಇರಿನಾ ವೆರೆಶುcಕ್ ತಿಳಿಸಿದ್ದಾರೆ.
ಇದನ್ನೂ ಓದಿ:ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ : ಬೊಮ್ಮಾಯಿ
ಬೆದರಿಕೆ ಬಂದರೆ ಮಾತ್ರ ಅಣ್ವಸ್ತ್ರ
ರಷ್ಯಾ-ಉಕ್ರೇನ್ ಯುದ್ಧದಲ್ಲಿ ರಷ್ಯಾದ ಅಸ್ತಿತ್ವಕ್ಕೇ ಬೆದರಿಕೆ ಬಂದರೆ ಮಾತ್ರವೇ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲಾಗುವುದು ಎಂದು ರಷ್ಯಾ ಸರಕಾರದ ವಕ್ತಾರ ಡ್ಮಿರ್ಟಿ ಪೆಸ್ಕೋವ್ ತಿಳಿಸಿದ್ದಾರೆ. ಸಿಎನ್‌ಎನ್ ಜತೆಗೆ ಮಾತನಾಡಿದ ಅವರು, “ನಾವು ದೇಶಿಯ ಮತ್ತು ಸಾರ್ವಜನಿಕ ಭದ್ರತೆಯ ಪರಿಕಲ್ಪನೆಯನ್ನು ಹೊಂದಿದ್ದೇವೆ. ಒಂದು ವೇಳೆ ರಷ್ಯಾದ ಅಸ್ತಿತ್ವಕ್ಕೇ ಬೆದರಿಕೆ ಬಂದಿದ್ದೇ ಆದಲ್ಲಿ ಆಗ ನಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಬಹುದು. ಪರಮಾಣು ಶಸ್ತ್ರಾಸ್ತ್ರ ಬಳಕೆಗೆ ಕಾರಣಗಳಲ್ಲಿ ನೀವು ಅದನ್ನು ಓದಬ ಹುದು’ ಎಂದು ಡ್ಮಿರ್ಟಿ ಅವರು ಸಿಎನ್‌ಎನ್ ನ್ಯೂಸ್‌ಗೆ ಮಾಹಿತಿ ಕೊಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.