ಮುಖ್ಯ ಪ್ರಾಸಿಕ್ಯೂಟರ್ ವಜಾ
Team Udayavani, Apr 30, 2018, 8:45 AM IST
ಲಾಹೋರ್ : ಮಹತ್ವದ ಬೆಳವಣಿಗೆಯಲ್ಲಿ ಮುಂಬಯಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಮುಖ್ಯ ಪ್ರಾಸಿಕ್ಯೂಟರ್ ಚೌಧರಿ ಅಜರ್ ಅವರನ್ನು ಪಾಕಿಸ್ಥಾನದ ಗೃಹ ಸಚಿವಾಲಯ ವಜಾಗೊಳಿಸಿದೆ. ಸರಕಾರದ ಹೇಳಿಕೆ ದಾಖಲಿಸಿಲ್ಲ ಎನ್ನುವ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ಹೇಳಿದೆ. ಇದರಿಂದಾಗಿ ಮುಂಬಯಿ ದಾಳಿಯ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಶ್ರಮಿಸುತ್ತಿರುವ ಭಾರತಕ್ಕೆ ಕೊಂಚ ಹಿನ್ನಡೆಯಾಗಿದೆ. 2008ರ ನವೆಂಬರ್‌ನಲ್ಲಿ ಕರಾಚಿಯಿಂದ ಆಗಮಿಸಿದ್ದ ಲಷ್ಕರ್ ಉಗ್ರರು ಮುಂಬಯಿಯಲ್ಲಿ ದಾಳಿ ನಡೆಸಿ 166 ಮಂದಿಯನ್ನು ಬಲಿ ಪಡೆದಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.