ಕಾಣೆಯಾಗಿದ್ದ ಮಗು ಕತ್ತಲ ಕೋಣೆಯಲ್ಲಿ ಜೀವಂತವಾಗಿ ಪತ್ತೆ!
Team Udayavani, Feb 18, 2022, 7:08 AM IST
ನ್ಯೂಯಾರ್ಕ್: ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ 6 ವರ್ಷದ ಮಗುವೊಂದು ಮಹಡಿಯ ಮೆಟ್ಟಿಲಿನ ಒಳಗೆ ನಿರ್ಮಿಸಲಾಗಿದ್ದ ಕತ್ತಲ ಕೋಣೆಯಲ್ಲಿ ಪತ್ತೆಯಾಗಿದೆ.
ಅಷ್ಟೇ ಅಲ್ಲ, ಮಗುವು ಜೀವಂತವಾಗಿದೆ! ನ್ಯೂಯಾರ್ಕ್‌ನಲ್ಲಿ ನಡೆದಿರುವ ಈ ಘಟನೆ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. 2 ವರ್ಷಗಳ ಹಿಂದೆಯೇ ತಮ್ಮ ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ಕಿಂಬರ್ಲಿ ಮತ್ತು ಕಿರ್ಕ್ ದಂಪತಿ ಪೊಲೀಸರಿಗೆ ದೂರು ನೀಡಿದ್ದರು. ಎಷ್ಟೇ ಹುಡುಕಿದರೂ ಬಾಲಕಿ ಪತ್ತೆಯಾಗಿರಲಿಲ್ಲ.
ಇತ್ತೀಚೆಗೆ, ಮಗುವು ಎಲ್ಲಿಂದ ನಾಪತ್ತೆಯಾಗಿದ್ದಳ್ಳೋ ಅಲ್ಲಿಂದ 150 ಮೈಲು ದೂರದಲ್ಲಿನ “ರಹಸ್ಯ ಸ್ಥಳದಲ್ಲಿದ್ದಾಳೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಅದರಂತೆ, ಸ್ಪೆನ್ಸರ್ ನಗರದ ಬಂಗಲೆಯೊಂದರಲ್ಲಿ ಪೊಲೀಸರು ಶೋಧ ಕಾರ್ಯ ಆರಂಭಿಸಿದರು. ಈ ವೇಳೆ, ಮೆಟ್ಟಿಲೊಂದರ ಒಳಗೆ ಸುರಂಗದಂತೆ ಮಾಡಿ, ನೆಲಮಹಡಿಯ ಕೋಣೆಯಲ್ಲಿ ಮಗುವನ್ನು ಅಡಗಿಸಿಟ್ಟಿದ್ದು ತಿಳಿದುಬಂದಿದೆ.
ಆ ಕೋಣೆ ತಪಾಸಣೆಗೈದಾಗ ಮಗುವು ಪತ್ತೆಯಾಗಿದೆ. ಅಷ್ಟೇ ಅಲ್ಲ, ಅಪಹರಣಕಾರ್ತಿ ಕಿಂಬರ್ಲಿ ಕೂಪರ್ ಶುಲ್ಟಿಸ್ ಕೂಡ ಅದೇ ಕತ್ತಲ ಕೋಣೆಯಲ್ಲಿ ಅಡಗಿದ್ದಿದ್ದು ಕಂಡುಬಂತು ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.