ಬೇಹು ಬಳಿಕ ಭಾರತದ ವಿರುದ್ಧ ಜೈವಿಕ ಯುದ್ಧಕ್ಕೆ ಚೀನ ಸಿದ್ಧತೆ

ಪಾಕಿಸ್ಥಾನ ಜತೆಗೂಡಿ ಪ್ರಬಲ ರೋಗಕಾರಕಗಳ ಸಂಶೋಧನೆ ; ಆಸೀಸ್‌ನ 'ದ ಕ್ಲಾಕ್ಸನ್‌' ಮಾಧ್ಯಮ ಸಂಸ್ಥೆಯ ತನಿಖೆ

Team Udayavani, Sep 16, 2020, 6:25 AM IST

ಬೇಹು ಬಳಿಕ ಭಾರತದ ವಿರುದ್ಧ ಜೈವಿಕ ಯುದ್ಧಕ್ಕೆ ಚೀನ ಸಿದ್ಧತೆ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ/ಬೀಜಿಂಗ್‌: ದೇಶದ 10 ಸಾವಿರಕ್ಕೂ ಅಧಿಕ ಪ್ರಮುಖರ ಮೇಲೆ ಬೇಹುಗಾರಿಕೆ ನಡೆಸಿರುವ ಚೀನ ಈಗ ಜೈವಿಕ ಯುದ್ಧ ನಡೆಸಲು ಮುಂದಾಗಿದೆ.

ಚೀನದ ಸನ್ಮಿತ್ರ ರಾಷ್ಟ್ರ ಪಾಕಿಸ್ಥಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ಜಗತ್ತಿನ ವ್ಯವಸ್ಥೆ ಹಳಿತಪ್ಪಿಸಿದ ವುಹಾನ್‌ ಇನ್ಸ್ಟಿಟ್ಯೂಟ್‌ ಆಫ್ ವೈರಾಲಜಿ ಜತೆಗೂಡಿ ಪ್ರಬಲ ರೋಗಕಾರಕಗಳ ಅಭಿವೃದ್ಧಿ ಬಗ್ಗೆ ಸಂಶೋಧನೆ ನಡೆಸುತ್ತಿವೆ.

ಈ ಬಗ್ಗೆ ಆಸ್ಟ್ರೇಲಿಯಾದ ಮಾಧ್ಯಮ ಸಂಸ್ಥೆ “ದ ಕ್ಲಾಕ್ಸನ್‌’ ನಡೆಸಿರುವ ಅಧ್ಯಯನದಲ್ಲಿ ಗೊತ್ತಾಗಿದೆ. ಈ ವರ್ಷದ ಆರಂಭದಲ್ಲಿಯೇ ಸಂಸ್ಥೆ ಈ ಬಗ್ಗೆ ಎರಡೂ ರಾಷ್ಟ್ರಗಳ ದುಸ್ಸಾಹಸದ ಬಗ್ಗೆ ವರದಿ ನೀಡಿತ್ತು.

2,800ಕ್ಕೂ ಅಧಿಕ ಒಂಟೆಗಳು, 7 ಸಾವಿರಕ್ಕೂ ಅಧಿಕ ಮಂದಿ ರೈತರ ಮೇಲೆ ‘ಪ್ರಾಣಿಗಳಿಂದ ಮಾನವರಿಗೆ’ ವರ್ಗಾವಣೆಯಾಗುವ ಹಾನಿಕಾರಕ ರೋಗಕಾರಕಗಳನ್ನು ಪ್ರಯೋಗಿಸುವ ಬಗ್ಗೆ ಸಂಶೋಧನೆ ನಡೆಸುವಲ್ಲಿ ನಿರತವಾಗಿದೆ ಎಂದು ವರದಿ ಹೇಳಿದೆ.

ಜಗತ್ತಿಗೆ ಕೋವಿಡ್ 19 ಸೋಂಕನ್ನು ನೀಡಿದ ವುಹಾನ್‌ನ ಲ್ಯಾಬ್‌ನ ವಿಜ್ಞಾನಿಗಳು 2015ರಿಂದಲೇ ಈ ಬಗ್ಗೆ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಈ ಪೈಕಿ ಜಗತ್ತಿನ ಐದು ಮಾರಣಾಂತಿಕ ರೋಗಕಾರಗಳ ಮೇಲೆ ಸಂಶೋಧನೆ ನಡೆಸಲಾಗಿದೆ. ಚೀನ ಮತ್ತು ಪಾಕ್‌ ನಡೆಸಿದ ಅಧ್ಯಯನ ‘ವೆರೋ ಸೆಲ್‌’ಗಳನ್ನು ಆಧರಿಸಿದ್ದಾಗಿದೆ. ಈ ಅಧ್ಯಯನವೆಲ್ಲವೂ ಚೀನ- ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ವ್ಯಾಪ್ತಿಯ ಮಿತಿಯಲ್ಲಿ ನಡೆದಿದೆ.

ಹೈಬ್ರಿಡ್‌ ಸಮರ: ಭದ್ರತಾ ಸಂಸ್ಥೆಗಳಿಂದ ಪರಿಶೀಲನೆ
ಚೀನದ ಹೈಬ್ರಿಡ್‌ ಸಮರದ ಮಾಹಿತಿ ಹೊರಬೀಳುತ್ತಿದ್ದಂತೆಯೇ ಭದ್ರತಾ ಸಂಸ್ಥೆಗಳು ಜಾಗೃತಗೊಂಡಿವೆ. ಭಾರತದ 10 ಸಾವಿರಕ್ಕೂ ಅಧಿಕ ಮಂದಿಯ ದತ್ತಾಂಶವನ್ನು ಚೀನ ಸಂಗ್ರಹಿಸುವ ಕುರಿತು ಈ ಸಂಸ್ಥೆಗಳು ಮಾಹಿತಿ ಕಲೆಹಾಕಲು ಆರಂಭಿಸಿವೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದ್ದು, ಸದ್ಯದಲ್ಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ಗೆ ಈ ಕುರಿತು ವರದಿ ನೀಡಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಸ್ವಿಗ್ಗಿ, ಜೊಮ್ಯಾಟೋ ಮೇಲೂ ಕಣ್ಣು: ಇದೇ ವೇಳೆ, ದೇಶದ ಪಾವತಿ ಮತ್ತು ಆಹಾರ ಪೂರೈಕೆ ಆ್ಯಪ್‌ಗ್ಳಾಗಿರುವ ಪೇಟಿಎಂ, ಝೊಮ್ಯಾಟೋ, ಸ್ವಿಗ್ಗಿ ಸೇರಿದಂತೆ 1,400 ಕಂಪೆನಿಗಳ ಮೇಲೆ ಕೂಡ ಚೀನದ ಝೆನುÏವಾ ಕಂಪೆನಿ ನಿಗಾ ಇರಿಸಿದ ಮಾಹಿತಿ ಬಹಿರಂಗಗೊಂಡಿದೆ. ಸಂಸ್ಥೆಯ ಆಯಕಟ್ಟಿನ ಹುದ್ದೆಯಲ್ಲಿರುವವರು, ಅವುಗಳಲ್ಲಿ ಹೂಡಿಕೆ ಮಾಡಿರುವವರು ಸೇರಿದಂತೆ ಪ್ರಮುಖರ ಮೇಲೆ ನಿಗಾ ಇರಿಸಲಾಗಿದೆ. ಯೂಬರ್‌ ಇಂಡಿಯಾ, ಪೆಯು, ಫ್ಲಿಪ್‌ಕಾರ್ಟ್‌, ನಯ್‌ಕಾ, ಫೋನ್‌ ಪೆ, ಬಿಗ್‌ಬಾಸ್ಕೆಟ್‌ನ ಮಾಹಿತಿಗಳನ್ನೂ ಚೀನ ಸಂಗ್ರಹಿಸಿರುವುದು ಗೊತ್ತಾಗಿದೆ.

ಅಲಿಬಾಬಾದಿಂದ ಮಾಹಿತಿ ಕಳವು: ಚೀನದ ಇ-ಕಾಮರ್ಸ್‌ ದೈತ್ಯ ಅಲಿಬಾಬಾ ಭಾರತದಲ್ಲಿ ಹೊಂದಿರುವ 72 ಸರ್ವರ್‌ಗಳು ದೇಶದ ಗ್ರಾಹಕರ ಬಳಕೆದಾರರ ಮಾಹಿತಿ ಕಳವು ಮಾಡುತ್ತಿವೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಹೇಳಿವೆ. ಈ ವರದಿ ಆಧರಿಸಿ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Trump–Kamala

US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?

1-ramama

China; ಬೌದ್ಧ ಪಠ್ಯಗಳಿಂದ ರಾಮಾಯಣ ನೆಲೆ: ಸಂಶೋಧನೆ

US Election 2024: ಟ್ರಂಪ್‌, ಕಮಲಾ ಭವಿಷ್ಯ ಇಂದು ನಿರ್ಧಾರ

US Election 2024: ಟ್ರಂಪ್‌, ಕಮಲಾ ಭವಿಷ್ಯ ಇಂದು ನಿರ್ಧಾರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.