ಭಾರತದಲ್ಲಿ ಚೀನದ ನೂತನ ರಾಯಭಾರಿಯಾಗಿ ಸನ್ ವೀಡಾಂಗ್ ನೇಮಕ
Team Udayavani, Jun 12, 2019, 6:05 PM IST
ಬೀಜಿಂಗ್ : ಹಿರಿಯ ಚೀನೀ ರಾಜತಂತ್ರಜ್ಞ ಸನ್ ವೀಡಾಂಗ್ ಅವರನ್ನು ಚೀನ ಭಾರತಕ್ಕೆ ತನ್ನ ಹೊಸ ರಾಯಭಾರಿಯನ್ನಾಗಿ ನೇಮಿಸಿದೆ.
ಭಾರತದ ಈಗಿನ ವಿದೇಶ ವ್ಯವಹಾರಗಳ ಸಚಿವರಾಗಿರುವ ಎಸ್ ಜೈಶಂಕರ್ ಈ ಹಿಂದೆ ಬೀಜಿಂಗ್ ನಲ್ಲಿ ಭಾರತದ ರಾಯಭಾರಿಯಾಗಿದ್ದ ವೇಳೆ ಸನ್ ವೀಡಾಂಗ್ ಅವರೊಂದಿಗೆ ನಿಕಟವಾಗಿ ದುಡಿದಿದ್ದರು. ವೀಡಾಂಗ್ ಅವರು ದಕ್ಷಿಣ ಏಶ್ಯ ವಿಷಯಗಳ ಪರಿಣತರಾಗಿದ್ದಾರೆ.
ಈ ಹಿಂದೆ ಪಾಕಿಸ್ಥಾನದಲ್ಲಿನ ಚೀನ ರಾಯಭಾರಿಯಾಗಿಯೂ ದುಡಿದ್ದ ಸನ್ ವೀಡಾಂಗ್ ಅವರು ಪ್ರಕೃತ ಚೀನದ ವಿದೇಶ ಸಚಿವಾಲಯದ ನೀತಿ ಮತ್ತು ಯೋಜನೆ ರೂಪಣೆ ವಿಭಾಗದ ಮಹಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸನ್ ಅವರು ಲೂ ಝಾವೋಹುಯಿ ಅವರ ಉತ್ತರಾಧಿಕಾರಿಯಾಗಿದ್ದಾರೆ. ಲೂ ಅವರನ್ನು ಚೀನ ಸರಕಾರ, ವಿದೇಶ ವ್ಯವಹಾರ ಗಳ ಉಪ ಸಚಿವರನ್ನಾಗಿ ನೇಮಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
Vivek Ramaswamy: ವಿವೇಕ್ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
Viral: ಜನಪ್ರಿಯ ಟಿಕ್ ಟಾಕ್ ತಾರೆಯ ಖಾಸಗಿ ವಿಡಿಯೋ ಲೀಕ್.. ಭಾರೀ ವೈರಲ್
ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್ ನಿಧನ
US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.