Khalistani ಉಗ್ರ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಚೀನಾ ಕೈವಾಡ?
ಭಾರತ- ಪಾಶ್ಚಿಮಾತ್ಯ ರಾಷ್ಟ್ರಗಳ ಬಾಂಧವ್ಯ ಹಾಳುಗೆಡವಲು ಸಂಚು
Team Udayavani, Oct 9, 2023, 10:17 PM IST
ನ್ಯೂಯಾರ್ಕ್ ಸಿಟಿ:ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿರುವ ಖಲಿಸ್ತಾನ ಉಗ್ರ ಹರ್‌ದೀಪ್ ಸಿಂಗ್ ನಿಜ್ಜರ್ ಸಾವಿಗೆ ಚೀನಾ ಕಾರಣವೇ? ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾ (ಸಿಸಿಪಿ)ದ ಏಜೆಂಟ್‌ಗಳು ಆತನ ಹತ್ಯೆಯಾಗಿ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪವನ್ನು ಚೀನಾದ ಪ್ರಜೆ ಸದ್ಯ ಅಮೆರಿಕದ ನಿವಾಸಿಯಾಗಿರುವ ಜೆನ್ನಿಫರ್ ಜೆಂಗ್ ಎಂಬ ಬ್ಲಾಗರ್ ಮಾಡಿದ್ದಾರೆ.
ತೈವಾನ್ ಅನ್ನು ಸಂಪೂರ್ಣ ಕೈವಶ ಮಾಡಿಕೊಳ್ಳಬೇಕು ಮತ್ತು ಜಗತ್ತಿನಲ್ಲಿ ಶಾಂತಿ ಕದಡಬೇಕು ಎಂಬ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೊಂದಿರುವ ಕುತ್ಸಿತ ಯೋಚನೆಯ ಭಾಗವಾಗಿ ಈ ಹತ್ಯೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಬಗ್ಗೆ ವಿಡಿಯೋ ಒಂದನ್ನು ಟ್ವೀಟ್ ಮಾಡಿರುವ ಅವರು, ಚೀನಾ ಯೂಬ್ಯೂಬರ್ ಲಾವೋ ಡೆಂಗ್ ಕೆನಡಾದಲ್ಲಿ ವಾಸಿಸುತ್ತಿದ್ದಾನೆ. ಆತ ಚೀನಾ ಅಧ್ಯಕ್ಷರು ಹೊಂದಿದ “ಜಗತ್ತಿನ ಶಾಂತಿ-ನೆಮ್ಮದಿಗೆ ಕೊಳ್ಳಿ ಇಡುವ ಯೋಜನೆ’ ಜಾರಿಗೊಳಿಸುವ ಭಾಗವಾಗಿದ್ದಾನೆ. ಚೀನಾ ಸರ್ಕಾರದ ಉನ್ನತ ನಿಯೋಗ ಅಮೆರಿಕದ ಸಿಯಾಟಲ್‌ಗೆ ಜೂನ್‌ನಲ್ಲಿ ತೆರಳಿ ರಹಸ್ಯ ಸಭೆಯನ್ನೂ ನಡೆಸಿತ್ತು. ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ಭಾರತ ಹೊಂದಿರುವ ಬಾಂಧವ್ಯ ಹಾಳು ಮಾಡುವುದೇ ಅದರ ಉದ್ದೇಶ’ ಎಂದು ಹೇಳಿಕೊಂಡಿದ್ದಾರೆ. ನಿಜ್ಜರ್ ಹತ್ಯೆ ಬಳಿಕ ಭಾರತದ ಮೇಲೆಯೇ ಆರೋಪ ಬರಬೇಕೆಂದು, ಕೊಲೆಗಾರರು ಭಾರತದ ಪ್ರಜೆಗಳು ಇಂಗ್ಲಿಷ್ ಮಾತನಾಡುವಂತೆ ಅಭ್ಯಾಸವನ್ನೂ ಮಾಡಿದ್ದರು ಎಂದೂ ಜೆಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.