ಕೋವಿಡ್ ಹೆಚ್ಚಳ: ಲಾಕ್‌ಡೌನ್ ವಿರುದ್ಧ ಚೀನ ಜನರ ದಂಗೆ
Team Udayavani, Nov 28, 2022, 6:25 AM IST
ಚೀನ ಹೊರತುಪಡಿಸಿ ಇಡೀ ಜಗತ್ತೇ ಕೊರೊನಾ ಅಂತ್ಯ ಕಾಲದಲ್ಲಿದೆ. ಭಾರತದಲ್ಲಂತೂ ಇತ್ತೀಚಿನ ದಿನಗಳಲ್ಲಿ ಹಿಂದೊಮ್ಮೆ ದೇಶದಲ್ಲಿ ಕೊರೊನಾ ಇತ್ತು ಎಂಬುದನ್ನೇ ಮರೆತವರಂತೆ ವರ್ತಿಸುತ್ತಿದ್ದಾರೆ. ಆದರೆ ಕೊರೊನಾ ಉಗಮ ಸ್ಥಾನ ಎಂದೇ ಬಣ್ಣಿಸಲಾಗಿರುವ ಚೀನದಲ್ಲಿ ಮಾತ್ರ ಕೊರೊನಾ ಬಗ್ಗೆ ಇನ್ನೂ ಭಯ ಹೋಗಿಲ್ಲ. ಅಲ್ಲಿ ನೂರಿನ್ನೂರು ಕೇಸುಗಳಿಗೇ ಇಡೀ ನಗರ, ಇಡೀ ಪ್ರಾಂತವನ್ನೇ ಲಾಕ್‌ಡೌನ್ ಮಾಡಲಾಗುತ್ತಿದೆ. ಇದರ ವಿರುದ್ಧ ಸಿಡಿದೆದ್ದಿರುವ ಚೀನ ಮಂದಿ, ಈಗ ಸರಕಾರದ ವಿರುದ್ಧವೇ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಶನಿವಾರ ಮತ್ತು ರವಿವಾರ ಇನ್ನೂ ಹೆಚ್ಚಾಗಿದೆ.
ಬೆಂಕಿ ಬಿದ್ದರೂ ಬಿಡಲಿಲ್ಲ…
ಚೀನ ಜನರ ಸಿಟ್ಟಿಗೆ ಪ್ರಮುಖ ಕಾರಣವೇ ಅಗ್ನಿ ಅನಾಹುತ. ನವೆಂಬರ್ 24ರಂದು ಕ್ಸಿಂಜಿಯಾಂಗ್ ಪ್ರಾಂತದ ರಾಜಧಾನಿ ಉರುಂಪಿ ಎಂಬಲ್ಲಿ ಅಗ್ನಿ ಅನಾಹುತ ಸಂಭವಿಸಿ 10 ಮಂದಿ ಸಾವನ್ನಪ್ಪಿದ್ದರು.
ಅಪಾರ್ಟ್‌ಮೆಂಟ್‌ವೊಂದಕ್ಕೆ ಬೆಂಕಿ ಬಿದ್ದಿತ್ತು. ಕೊರೊನಾ ಕಟ್ಟುಪಾಡುಗಳಿಂದಾಗಿ ಈ ಅಪಾರ್ಟ್‌ಮೆಂಟ್‌ಗೆ ಅಗ್ನಿಶಾಮಕ ದಳ ಬಂದದ್ದೂ ತಡವಾಗಿತ್ತು. ಅಷ್ಟೇ ಅಲ್ಲ, ಅಪಾರ್ಟ್‌ಮೆಂಟ್‌ನೊಳಗಿದ್ದವರು ಬೆಂಕಿಯಿಂದ ತಪ್ಪಿಸಿಕೊಳ್ಳಲು ಹೊರಗೂ ಬರಲು ಆಗಿರಲಿಲ್ಲ. ಸ್ಥಳೀಯರ ಪ್ರಕಾರ, ಸಾವಿನ ಸಂಖ್ಯೆ ಬೇರೆಯೇ ಇದೆ. ಅಂದರೆ ಹೆಚ್ಚಾಗಿಯೇ ಇದೆ. ಆದರೆ ಸರಕಾರ ಮಾತ್ರ 10 ಎಂದು ಹೇಳುತ್ತಿದೆ. ಆದರೆ ಈ ಮಾತನ್ನು ಸ್ಥಳೀಯ ಸರಕಾರ ನಿರಾಕರಿಸಿದೆ. ಅಪಾರ್ಟ್‌ಮೆಂಟ್‌ಗೆ ಬೀಗ ಹಾಕಿರಲಿಲ್ಲ ಎಂದಿದೆ. ಆದರೆ ಜನ ಮಾತ್ರ ಅಪಾರ್ಟ್‌ಮೆಂಟ್‌ನ ಮನೆಗಳಿಗೆ ಹೊರಗಿನಿಂದ ತಂತಿಯಿಂದ ಕಟ್ಟಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಪೊಲೀಸರ ಮೂಲಕ ನಿಯಂತ್ರಣ
ಕ್ಸಿಂಜಿಯಾಂಗ್ ಪ್ರಾಂತದ ರಾಜಧಾನಿ ಉರುಂಪಿಯಲ್ಲಿ ಪ್ರತಿಭಟನೆ ಜೋರಾಗಿಯೇ ನಡೆಯುತ್ತಿದ್ದು, ಹೋರಾಟಗಾರರ ವಿರುದ್ಧ ಪೊಲೀಸರನ್ನು ಬಳಸಿಕೊಂಡು ನಿಯಂತ್ರಣ ಸಾಧಿಸಲಾಗುತ್ತಿದೆ. ಸಿಕ್ಕ ಸಿಕ್ಕವರನ್ನು ಹೊಡೆದು, ಎಳೆದೊಯ್ಯಲಾಗುತ್ತಿದೆ. ಒಂದು ಕಡೆ ಪ್ರತಿಭಟನೆಗೆಂದು ಕುಳಿತಿದ್ದ 100 ಮಂದಿಯನ್ನು ಪೊಲೀಸರು ಬಸ್‌ನಲ್ಲಿ ಎತ್ತಿಹಾಕಿಕೊಂಡು ಹೋಗಿದ್ದಾರೆ.
ಕ್ಸಿಜಿನ್‌ಪಿಂಗ್ ಸ್ಟೆಪ್‌ಡೌನ್
ಸದ್ಯ ಚೀನದ ವಿವಿಧ ನಗರಗಳಲ್ಲಿ ಕೇಳಿ ಬರುತ್ತಿರುವ ಮಾತುಗಳು.ಪದೇಪದೆ ಲಾಕ್‌ಡೌನ್ ಹೇರುತ್ತಿರುವುದರಿಂದಾಗಿ ಬೇಸತ್ತಿರುವ ಜನ, ಚೀನ ಅಧ್ಯಕ್ಷ ಜಿನ್‌ಪಿಂಗ್ ರಾಜೀನಾಮೆಗಾಗಿ ಆಗ್ರಹಿಸುತ್ತಿದ್ದಾರೆ. ಕಮ್ಯೂನಿಸ್ಟ್ ಸರಕಾರವೂ ಹೋಗಬೇಕು, ಜತೆಗೆ ಅನ್‌ಲಾಕ್ ಚೀನ ಎಂಬ ಘೋಷಣೆಗಳೂ ಎಲ್ಲೆಡೆ ಕೇಳಿಬರುತ್ತಿವೆ. ನಮಗೆ ಕೊರೊನಾ ಟೆಸ್ಟ್ ಬೇಕಿಲ್ಲ, ಸ್ವಾತಂತ್ರ್ಯ ಬೇಕು, ಮಾಧ್ಯಮ ಸ್ವಾತಂತ್ರ್ಯ ಬೇಕು ಎಂಬ ಹೋರಾಟಗಳು ನಡೆಯುತ್ತಿವೆ.
ಖಾಲಿ ಹಾಳೆ ಪ್ರತಿಭಟನೆ
ಜನರ ಸಮಸ್ಯೆಗಳನ್ನೂ ಹೇಳಿಕೊಳ್ಳಲು ಬಿಡದೇ ಸಾಮಾಜಿಕ ಜಾಲತಾಣಗಳ ಮೇಲೆ ಸೆನ್ಸಾರ್ ಹಾಕುತ್ತಿರುವ ಚೀನ ಸರಕಾರದ ವಿರುದ್ಧ ಜನರ ಬಂಡೆದ್ದಿದ್ದಾರೆ. 2020ರಲ್ಲಿ ಆದ ಹಾಂಕಾಂಗ್ ಪ್ರತಿಭಟನೆಯನ್ನು ಸ್ಫೂರ್ತಿಯಾಗಿ ಪಡೆದಿರುವ ಜನ, ಅದೇ ಮಾದರಿಯಲ್ಲಿ ಖಾಲಿ ಹಾಳೆ ಇರಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.
ಐಫೋನ್ ಫ್ಯಾಕ್ಟರಿಯಲ್ಲೂ ಹೋರಾಟ
ಚೀನದ ಫಾಕ್ಸ್‌ಕಾನ್ ಕಾರ್ಖಾನೆಯಲ್ಲಿ ಜಗತ್ತಿನಲ್ಲಿ ಬಳಕೆ ಮಾಡುವ ಶೇ.70ರಷ್ಟು ಐಫೋನ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅಂದರೆ ಇಡೀ ಜಗತ್ತಿನಲ್ಲೇ ಅತ್ಯಂತ ದೊಡ್ಡ ಐಫೋನ್ ನಿರ್ಮಾಣದ ಫ್ಯಾಕ್ಟರಿ ಇದು. ಇಲ್ಲಿ ಸುಮಾರು 2 ಲಕ್ಷ ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೊರೊನಾ ನಡುವೆಯೇ ಇಲ್ಲಿ ಕೆಲಸ ಮಾಡಿಸಲಾಗುತ್ತಿದ್ದು, ಕಾರ್ಮಿಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಆರೋಪಗಳಿವೆ. ಇದರಿಂದ ಬೇಸತ್ತ ಕಾರ್ಮಿಕರು ನ.23ರಂದು ಝೆಂಗುjವಿನಲ್ಲಿ ದೊಡ್ಡದಾಗಿ ಪ್ರತಿಭಟನೆ ಮಾಡಿದ್ದರು. ಈ ಪ್ರತಿಭಟನಕಾರರ ವಿರುದ್ಧ ಪೊಲೀಸರು ಬಲ ಪ್ರಯೋಗಿಸಿದ್ದರು. ಫ್ಯಾಕ್ಟರಿಯಲ್ಲಿ ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದರು. ಅಷ್ಟೇ ಅಲ್ಲ, ಕಾರ್ಖಾನೆಯೊಳಗೇ ಕಾರ್ಮಿಕರಿಗೆ ಇರುವ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಎಲ್ಲವೂ ಅವ್ಯವಸ್ಥೆಯಿಂದ ಕೂಡಿದೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲ, ಕಳೆದ ತಿಂಗಳು ಕೊರೊನಾ ನಿರ್ಬಂಧಕ್ಕೆ ಹೆದರಿ ಇಲ್ಲಿಂದ ಸಾವಿರಾರು ಕಾರ್ಮಿಕರು ಬೇಲಿ ದಾಟಿ ಓಡಿ ಹೋಗಿದ್ದರು.
ಮತ್ತೆ ಮತ್ತೆ ನಿರ್ಬಂಧ
ಝೆಂಗು ಪ್ರಾಂತ್ಯದ 8 ಜಿಲ್ಲೆಗಳಲ್ಲಿ ನ.24ರಿಂದ ಮತ್ತೆ ನಿರ್ಬಂಧ ಹಾಕಲಾಗಿದೆ. ಸರಕಾರದ ಪ್ರಕಾರವೇ 66 ಲಕ್ಷ ಮಂದಿ ಮನೆಯೊಳಗೇ ಇರಬೇಕಾದ ಪರಿಸ್ಥಿತಿ ಎದುರಾಗಿದೆ. ಇವರಿಗೆ ಕೇವಲ ಆಹಾರ ಮತ್ತು ವೈದ್ಯಕೀಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೇವಲ ಇದೊಂದೇ ಪ್ರಾಂತವಲ್ಲ, ಶಾಂಘೈ, ಬೀಜಿಂಗ್ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಕೊರೊನಾ ಸಂಖ್ಯೆಯಲ್ಲಿ ಹೆಚ್ಚಳವಾಗಿ ಮತ್ತೆ ನಿರ್ಬಂಧ ಹೇರಲಾಗಿದೆ. ಸಾಮೂಹಿಕವಾಗಿ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದ್ದು, ದಿನಕ್ಕೆ 35 ಸಾವಿರಕ್ಕಿಂತಲೂ ಹೆಚ್ಚು ಪ್ರಕರಣಗಳು ಕಂಡು ಬರುತ್ತಿವೆ. 2019ರ ಅಂತ್ಯದಲ್ಲಿ ಕೊರೊನಾ ಆರಂಭವಾದಾಗಿನಿಂದಲೂ ಇದೇ ಮೊದಲ ಬಾರಿಗೆ ಚೀನದಲ್ಲಿ ಪ್ರತೀದಿನ ಈ ಪ್ರಮಾಣದ ಕೇಸುಗಳು ಬರುತ್ತಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ. ರವಿವಾರವೇ 39 ಸಾವಿರ ಕೇಸುಗಳು ಪತ್ತೆಯಾಗಿವೆ.
ಇನ್ನೂ ಏಕೆ ಝೀರೋ ಕೋವಿಡ್ ಪಾಲಿಸಿ?
ಚೀನದ ಕೆಲವು ಪ್ರದೇಶಗಳಲ್ಲಿ ಒಂದು-ಎರಡು ಕೊರೊನಾ ಕೇಸುಗಳು ಕಂಡು ಬಂದರೂ ಇಡೀ ಪ್ರದೇಶವನ್ನೇ ಲಾಕ್‌ಡೌನ್ ಮಾಡಲಾಗುತ್ತಿದೆ. 2019ರ ಅಂತ್ಯದಿಂದಲೂ ಚೀನ ಇದೇ ಕೆಲಸ ಮಾಡಿಕೊಂಡು ಬರುತ್ತಿದೆ. ಉಳಿದ ದೇಶಗಳು ಕೊರೊನಾ ಸೋಂಕನ್ನು ಈಗಾಗಲೇ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿವೆ. ಆದರೆ ಚೀನ ಮಾತ್ರ ಇನ್ನೂ ತನ್ನ ಝೀರೋ ಕೋವಿಡ್ ನೀತಿಯನ್ನೇ ಮುಂದುವರಿಸಿಕೊಂಡು ಜನರಿಗೆ ಕೊಡಬಾರದ ಕಷ್ಟ ಕೊಡುತ್ತಿದೆ. ದಿಢೀರನೇ ಲಾಕ್‌ಡೌನ್ ಘೋಷಣೆ ಮಾಡುವ ಮೂಲಕ ಜನರಿಗೆ ಏನು ಮಾಡಬೇಕು ಎಂಬುದೂ ತಿಳಿಯದಂತಾಗಿದೆ. ಅಲ್ಲಿನ ಜನರೇ ಹೇಳುವಂತೆ ಕೆಲವೊಮ್ಮೆ ಜನ ಶಾಪಿಂಗ್‌ಗೆ ಮಾಲ್‌ಗೆ ತೆರಳಿದ ಸಮಯದಲ್ಲೂ ಲಾಕ್‌ಡೌನ್ ಘೋಷಣೆಯಾಗುತ್ತದೆ. ಅಲ್ಲಿಂದ ಹೊರಹೋಗಬೇಕು ಎಂದು ಕೊರೊನಾ ಪರೀಕ್ಷೆಗೆ ಒಳಪಡಬೇಕು. ಒಂದು ವೇಳೆ ನೆಗೆಟಿವ್ ಬಂದರೆ ಬಚಾವ್. ಪಾಸಿಟಿವ್ ಬಂದರೇ ಮಾಲ್‌ನಲ್ಲಿಯೇ ಇರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.