ಟಾರ್ಗೆಟ್ ತಲುಪಲಾಗದೇ ಕುಸಿದ ಚೀನ ಅರ್ಥವ್ಯವಸ್ಥೆ
ಮೊದಲ ತ್ತೈಮಾಸಿಕದಲ್ಲಿ ಜಿಡಿಪಿ ಪ್ರಗತಿ ದರ ಶೇ.4.8; ಕೊರೊನಾ, ಜಾಗತಿಕ ಸ್ಥಿತಿಗತಿಯೇ ಕಾರಣ
Team Udayavani, Apr 19, 2022, 7:50 AM IST
ಬೀಜಿಂಗ್:ಮತ್ತೆ ಹೆಚ್ಚಳವಾಗಿರುವ ಕೊರೊನಾ ಸೋಂಕು ಚೀನದ ಆರ್ಥಿಕತೆಗೆ ದೊಡ್ಡ ಹೊಡೆತವನ್ನೇ ನೀಡಲಾರಂಭಿಸಿದೆ.
ಜನವರಿಯಿಂದ ಮಾರ್ಚ್‌ವರೆಗಿನ ಮೊದಲ ತ್ತೈಮಾಸಿಕದಲ್ಲಿ (ಚೀನ ವಿತ್ತ ವರ್ಷದ ಲೆಕ್ಕಾಚಾರದಲ್ಲಿ) ಚೀನದ ಜಿಡಿಪಿ(ಒಟ್ಟು ದೇಶೀಯ ಉತ್ಪನ್ನ) ಕೇವಲ ಶೇ.4.8ರಷ್ಟು ಪ್ರಗತಿ ಸಾಧಿಸಿದೆ. ಅಲ್ಲಿನ ಸರ್ಕಾರವು ಈ ಹಿಂದೆ ಜಿಡಿಪಿ ಪ್ರಗತಿ ದರವನ್ನು ಶೇ.5.5 ಎಂದು ಅಂದಾಜಿಸಿತ್ತು.
2 ವರ್ಷಗಳ ಹಿಂದೆ ಕಾಣಿಸಿಕೊಂಡ ಸೋಂಕಿನಿಂದ ಚೀನದ ಆರ್ಥಿಕತೆ ನೆಲಕಚ್ಚಿತ್ತು. ಅಚ್ಚರಿಯೆಂಬಂತೆ 2021ರಲ್ಲಿ ಏಕಾಏಕಿ ದೇಶವು ಆರ್ಥಿಕವಾಗಿ ಬಲಶಾಲಿಯಾಗಿ ಹೊರಹೊಮ್ಮಿತ್ತು.
ಆದರೆ, ಪ್ರಸಕ್ತ ವರ್ಷದ ಆರಂಭದಿಂದಲೇ ಹಲವು ಅನಿರೀಕ್ಷಿತ ಸವಾಲುಗಳು ದೇಶವನ್ನು ಸಂಕಷ್ಟಕ್ಕೆ ಒಯ್ದಿದೆ. ಮತ್ತೆ ಆರಂಭವಾದ ಸೋಂಕು ಪ್ರಸರಣ ಹಾಗೂ ಜಾಗತಿಕ ಆರ್ಥಿಕ ಪರಿಸ್ಥಿತಿಯು ಚೀನದ ಜಿಡಿಪಿಗೆ ಪೆಟ್ಟು ನೀಡಿದೆ.
ಇದನ್ನೂ ಓದಿ:ಭಾರೀ ಪತನ ಕಂಡ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್: ಹೂಡಿಕೆದಾರರಿಗೆ ಲಕ್ಷಾಂತರ ರೂ. ನಷ್ಟ
ಕಾರಣವೇನು?
ಕೊರೊನಾ ಸೋಂಕಿನ ಒಮಿಕ್ರಾನ್ ತಳಿಯು ಚೀನದ ಒಂದೊಂದೇ ನಗರಗಳನ್ನು ಆಕ್ರಮಿಸಿಕೊಳ್ಳುತ್ತಿರುವುದೇ ದೇಶದ ಜಿಡಿಪಿ ಕುಸಿತಕ್ಕೆ ಕಾರಣ. ಕ್ಸಿಯಾನ್, ಶೆನ್‌ಝೆನ್ ಹಾಗೂ ಶಾಂಘೈಗಳು ಚೀನದ ಅತಿದೊಡ್ಡ ನಗರಗಳು. ಅದರಲ್ಲೂ ಶಾಂಘೈಯನ್ನು ಅಲ್ಲಿನ ವಾಣಿಜ್ಯ ಹಾಗೂ ಆರ್ಥಿಕ ಹಬ್ ಎಂದೇ ಕರೆಯಲಾಗುತ್ತದೆ.
ಈ ನಗರದಲ್ಲಿ ಈಗ 3ನೇ ವಾರದ ಲಾಕ್‌ಡೌನ್ ಜಾರಿಯಲ್ಲಿದೆ. ಜನರು ಮನೆಯೊಳಗೆ ಬಂಧಿಯಾಗಿರುವ ಕಾರಣ, ಯಾವುದೇ ಆರ್ಥಿಕ ಚಟುವಟಿಕೆಗಳು ನಡೆಯುತ್ತಿಲ್ಲ. ಹೀಗಾಗಿ, ಚೀನದ ಆರ್ಥಿಕತೆಯೂ ಕುಸಿಯಲಾರಂಭಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.