ಭಾರತದ ವಿರೋಧದ ನಡುವೆಯೇ ಬೆಲ್ಟ್ ಆ್ಯಂಡ್ ರೋಡ್ ಸಭೆ
Team Udayavani, Apr 20, 2019, 6:00 AM IST
ಬೀಜಿಂಗ್: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಕಾರಿಡಾರ್ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಚೀನದ ಬೆಲ್ಟ್ ಆ್ಯಂಡ್ ರೋಡ್ ಯೋಜನೆಗೆ ಸಂಬಂಧಿಸಿದ ಸಭೆಯಲ್ಲಿ ಭಾರತ ಭಾಗವಹಿಸಲು ನಿರಾಕರಿಸಿರುವ ಮಧ್ಯೆಯೇ, ಭಾರತದ ಜತೆಗೆ ಮಾತುಕತೆಗೆ ನಾವು ಸಿದ್ಧರಿದ್ದೇವೆ ಎಂದು ಚೀನ ಹೇಳಿದೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇ ಶಾಂಗ ಸಚಿವ ವಾಂಗ್ ಯಿ, ಕಾಶ್ಮೀರ ವಿವಾದದ ವಿಚಾರ ದಲ್ಲಿ ಚೀನ ಯಾವುದೇ ನಿಲುವು ಹೊಂದಿಲ್ಲ ಮತ್ತು ಸಿಪಿಇಸಿ ಯಿಂದಾಗಿ ಈ ಪ್ರದೇಶದ ಸ್ವಾಯತ್ತತೆಗೆ ಭಂಗ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎ. 25ರಿಂದ 27 ರವರೆಗೆ ಬೆಲ್ಟ್ ಆ್ಯಂಡ್ ರೋಡ್ ಫೋರಂ ನಡೆಯಲಿದ್ದು, ಇದರಲ್ಲಿ 150ಕ್ಕೂ ಹೆಚ್ಚು ದೇಶಗಳ ಪ್ರತಿ ನಿಧಿಗಳು ಭಾಗವಹಿ ಸಲಿದ್ದಾರೆ ಎಂದು ಚೀನ ಹೇಳಿಕೊಂಡಿದೆ. ಭಾರತ ಕೂಡ ಇದರಲ್ಲಿ ಭಾಗವಹಿಸಬೇಕು ಎಂದು ಅದು ಕೇಳಿಕೊಂಡಿದೆ.