Tragedy: ಒಂದೇ ದಿನ 23 ಹಲ್ಲನ್ನು ಕಿತ್ತುಹಾಕಿದ ವೈದ್ಯ… ಹೃದಯಾಘಾತದಿಂದ ವ್ಯಕ್ತಿ ಮೃತ್ಯು


Team Udayavani, Sep 13, 2024, 12:51 PM IST

ಚಿಕಿತ್ಸೆಗೆ ಬಂದವನ 23 ಹಲ್ಲನ್ನು ಕಿತ್ತುಹಾಕಿದ ವೈದ್ಯ… ಹೃದಯಾಘಾತದಿಂದ ವ್ಯಕ್ತಿ ಮೃತ್ಯು

ಬೀಜಿಂಗ್: ಹಲ್ಲಿನ ಸಮಸ್ಯೆಗೆಂದು ಆಸ್ಪತ್ರೆಗೆ ಬಂದ ವ್ಯಕ್ತಿಯ 23 ಹಲ್ಲುಗಳನ್ನು ಒಂದೇ ದಿನ ಕಿತ್ತು ಹಾಕಿದ ಆಘಾತಕಾರಿ ಘಟನೆ ಚೀನಾದಲ್ಲಿ ನಡೆದಿದೆ ಅಷ್ಟುಮಾತ್ರವಲ್ಲದೆ 23 ಹಲ್ಲುಗಳ ಬದಲಿಗೆ ಹನ್ನೆರಡು ಹೊಸ ಹಲ್ಲುಗಳನ್ನು ಅದೇ ದಿನ ಇರಿಸಿದ್ದು ಇದೀಗ ರೋಗಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಈ ಘಟನೆ ನಡೆದಿರುವುದು ಚೀನಾದ ಯೋಂಗ್‌ಕಾಂಗ್ ನಗರದಲ್ಲಿ. ಘಟನೆಯ ಕುರಿತು ಮೃತ ವ್ಯಕ್ತಿಯ ಮಗಳೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಗಳಿಂದ ವಿಚಾರ ಬಹಿರಂಗ:
ಘಟನೆಯ ಕುರಿತು ಮೃತ ವ್ಯಕ್ತಿಯ ಮಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾಳೆ ಇದರಲ್ಲಿ ತನ್ನ ತಂದೆ ಧೀರ್ಘಕಾಲದಿಂದ ಹಲ್ಲುನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು ಹಾಗಾಗಿ ಹಲ್ಲಿನಾಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ ವೈದ್ಯರ ಬಳಿ ಚಿಕಿತ್ಸೆಗಾಗಿ ಕಳೆದ ತಿಂಗಳು ಆಗಸ್ಟ್ 14 ರಂದು ಯೋಂಗ್‌ಕಾಂಗ್ ನಲ್ಲಿರುವ ದಂತ ಚಿಕಿತ್ಸಾಲಯಕ್ಕೆ ಹೋಗಿದ್ದಾರೆ. ಈ ವೇಳೆ ಪರಿಶೀಲಿಸಿದ ವೈದ್ಯರು ಹಲ್ಲುಗಳನ್ನು ತೆಗೆಯಬೇಕಾಗುತ್ತದೆ ಅದರ ಬದಲಿಗೆ ಹೊಸ ಹಲ್ಲುಗಳನ್ನು ಇಡಬೇಕಾಗುತ್ತದೆ ಎಂದು ಹೇಳಿದ್ದಾರೆ ಎಂಬುದಾಗಿ ಪೋಸ್ಟ್ ಮಾಡಿದ್ದಾಳೆ.

ಒಂದೇ ದಿನದಲ್ಲಿ 23 ಹಲ್ಲುಗಳನ್ನು ತೆಗೆದ ವೈದ್ಯರು:
ಹಲ್ಲುನೋವಿನಿಂದ ಬಳಲುತ್ತಿದ್ದ ವ್ಯಕ್ತಿಯ ಎಲ್ಲಾ ಹಲ್ಲುಗಳನ್ನು ತೆಗೆಯಲು ವೈದ್ಯರು ಸಲಹೆ ನೀಡಿದ್ದಾರೆ ಅದರಂತೆ ವ್ಯಕ್ತಿ ಒಪ್ಪಿಗೆಯನ್ನೂ ನೀಡಿದ್ದಾರೆ ಅದರಂತೆ ಶಸ್ತಚಿಕಿತ್ಸೆಗೆ ತಯಾರಿ ನಡೆಸಿದ ವೈದ್ಯರು ಒಂದಾದ ಮೇಲೆ ಒಂದರಂತೆ ಒಂದೇ ದಿನ ಒಟ್ಟು 23 ಹಲ್ಲುಗಳನ್ನು ಕಿತ್ತು ಹಾಕಿದ್ದಾರೆ ಇದಾದ ಬಳಿಕ ಅದೇ ದಿನ ಹನ್ನೆರಡು ಹೊಸ ಹಲ್ಲುಗಳನ್ನು ಅಳವಡಿಸಿ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ. ಮೊದಲು ಹಲ್ಲು ನೋವಿನಿಂದ ಬಳಲುತ್ತಿದ್ದ ವ್ಯಕ್ತಿ ಈಗ ಹಲ್ಲು ತೆಗೆದ ನೋವಿನಿಂದ ಹೆಚ್ಚಿನ ನೋವು ಅನುಭವಿಸಬೇಕಾಯಿತು. ಆದರೆ ದಿನದಿಂದ ದಿನಕ್ಕೆ ಅವರ ನೋವು ಹೆಚ್ಚಾಗತೊಡಗಿತು ಚಿಕಿತ್ಸೆ ನಡೆದು ಹದಿಮೂರು ದಿನಕ್ಕೆ ಹೃದಯಾಘಾತಗೊಂಡು ವ್ಯಕ್ತಿ ಮೃತಪಟ್ಟಿದ್ದಾರೆ.

ವೈದ್ಯರ ಕಾರ್ಯಕ್ಕೆ ಆಕ್ರೋಶ
ಮೃತ ವ್ಯಕ್ತಿಯ ಮಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಬೆನ್ನಲ್ಲೇ ನೆಟ್ಟಿಗರು ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ ಅಲ್ಲದೆ ಒಂದೇ ದಿನ 23 ಹಲ್ಲುಗಳನ್ನು ಹೇಗೆ ತೆಗೆಯಲು ಸಾಧ್ಯ, ಪರಿಣತಿ ಹೊಂದಿದ ವೈದ್ಯರು ಈ ರೀತಿ ಮಾಡಲು ಸಾಧ್ಯವೇ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ, ಇನ್ನೂ ಕೆಲವರು 23 ಹಲ್ಲುಗಳನ್ನು ಕಿತ್ತು ಹಾಕಿ ಅದೇ ದಿನ ಮತ್ತೆ ಹನ್ನೆರಡು ಹೊಸ ಹಲ್ಲು ಇಡುವ ವೈದ್ಯರನ್ನು ನಾನು ಇದುವರೆಗು ನೋಡಲಿಲ್ಲ ಇವರು ನಿಜವಾಗಿಯೂ ವೈದ್ಯರೇ ಅಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ತಪ್ಪು ಎಸಗಿದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚಿನ ಮಂದಿ ಆಗ್ರಹಿಸಿದ್ದಾರೆ.

ಮಗಳ ದೂರಿನ ಆಧಾರದ ಮೇಲೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ವೈದ್ಯರು ತಪ್ಪು ಎಸಗಿರುವುದು ಹೌದು ಎಂದಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.

ಇದನ್ನೂ ಓದಿ: Exams: ವಿದ್ಯಾರ್ಥಿಗಳೇ ಗಮನಿಸಿ… ದ್ವಿತೀಯ ಪಿಯು ಲಿಖಿತ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ

ಟಾಪ್ ನ್ಯೂಸ್

High Court: ಒಂದೇ ದಿನ 503 ಪ್ರಕರಣ ವಿಚಾರಣೆ ನಡೆಸಿದ ನ್ಯಾ| ನಾಗಪ್ರಸನ್ನ

High Court: ಒಂದೇ ದಿನ 503 ಪ್ರಕರಣ ವಿಚಾರಣೆ ನಡೆಸಿದ ನ್ಯಾ| ನಾಗಪ್ರಸನ್ನ

Cap-Brijesh-Chowta

MSEZ: ಜೆಬಿಎಫ್‌ಗೆ ಭೂಮಿ ಕೊಟ್ಟವರಿಗೆ ಜಿಎಂಪಿಎಲ್‌ನಲ್ಲಿ ಉದ್ಯೋಗ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

BJP ಶಾಸಕ ಮುನಿರತ್ನ ಪರಪ್ಪನ ಜೈಲಿಗೆ: ಇಂದು ಜಾಮೀನು ಭವಿಷ್ಯ

BJP ಶಾಸಕ ಮುನಿರತ್ನ ಪರಪ್ಪನ ಜೈಲಿಗೆ: ಇಂದು ಜಾಮೀನು ಭವಿಷ್ಯ

Nitin Gadkari responded to complaints of excessive toll collection

ಕಂತಿನಲ್ಲಿ ಕೊಂಡ ಕಾರ್‌ ಬೆಲೆ ಹೆಚ್ಚುವಂತೆ ಟೋಲ್‌ ಸಹ ವೆಚ್ಚಕ್ಕಿಂತ ಹೆಚ್ಚಿರುತ್ತದೆ:ಗಡ್ಕರಿ

DOOMAKETHU

Space Wonder: ಸೆ.27 ಸೂರ್ಯ, ಅ.12ಕ್ಕೆ ಭೂಮಿಗೆ ಸಮೀಪಿಸುವ ಧೂಮಕೇತು

Modi3.0ರಲ್ಲೇ ಏಕ ಚುನಾವಣೆ: ಕೇಂದ್ರ ಸರಕಾರಕ್ಕೆ 100 ದಿನ ಹಿನ್ನೆಲೆಯಲ್ಲಿ ಅಮಿತ್‌ ಶಾ ಘೋಷಣೆ

Modi3.0ರಲ್ಲೇ ಏಕ ಚುನಾವಣೆ: ಕೇಂದ್ರ ಸರಕಾರಕ್ಕೆ 100 ದಿನ ಹಿನ್ನೆಲೆಯಲ್ಲಿ ಅಮಿತ್‌ ಶಾ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

After Namibia 200 elephants slaughtered in Zimbabwe

Drought; ನಮೀಬಿಯಾ ಆಯ್ತು, ಈಗ ಜಿಂಬಾಬ್ವೆಯಲ್ಲಿ 200 ಆನೆಗಳ ಹತ್ಯೆ?

Cyclone Yagi hits south asia

Cyclone: ಯಾಗಿ ಚಂಡಮಾರುತಕ್ಕೆ ದಕ್ಷಿಣ ಏಷ್ಯಾದಲ್ಲಿ 500 ಮಂದಿ ಸಾವು

Lebon1

Pagers explode: ಲೆಬನಾನ್‌ನಲ್ಲಿ ಸ್ಫೋಟ: 8 ಮಂದಿ ಮೃತ್ಯು, 2,700ಕ್ಕೂ ಅಧಿಕ ಮಂದಿಗೆ ಗಾಯ

taliban

Afghanistan; ಪೋಲಿಯೋ ಲಸಿಕೆಗೆ ತಾಲಿಬಾನ್‌ ತಡೆ: ವಿಶ್ವಸಂಸ್ಥೆ ಆರೋಪ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Dina Bhavishya

Horoscope; ಕಳೆದುಹೋದ ಅವಕಾಶ ಮರಳಿ ಬರುವ ಸಾಧ್ಯತೆ,ವ್ಯವಸ್ಥೆ ಪರಿಷ್ಕರಣೆ

High Court: ಒಂದೇ ದಿನ 503 ಪ್ರಕರಣ ವಿಚಾರಣೆ ನಡೆಸಿದ ನ್ಯಾ| ನಾಗಪ್ರಸನ್ನ

High Court: ಒಂದೇ ದಿನ 503 ಪ್ರಕರಣ ವಿಚಾರಣೆ ನಡೆಸಿದ ನ್ಯಾ| ನಾಗಪ್ರಸನ್ನ

Cap-Brijesh-Chowta

MSEZ: ಜೆಬಿಎಫ್‌ಗೆ ಭೂಮಿ ಕೊಟ್ಟವರಿಗೆ ಜಿಎಂಪಿಎಲ್‌ನಲ್ಲಿ ಉದ್ಯೋಗ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

BJP ಶಾಸಕ ಮುನಿರತ್ನ ಪರಪ್ಪನ ಜೈಲಿಗೆ: ಇಂದು ಜಾಮೀನು ಭವಿಷ್ಯ

BJP ಶಾಸಕ ಮುನಿರತ್ನ ಪರಪ್ಪನ ಜೈಲಿಗೆ: ಇಂದು ಜಾಮೀನು ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.